ಕೃಷಿ ಅಭಿವೃದ್ಧಿ ಪಡಿಸಲು ತಯಾರಿಸಿದ ಈ ಡ್ರೋನ್ ನಿಂದ ಇಂದು ಪಡೆಯುತ್ತಿದ್ದಾರೆ ೪೦% ಹೆಚ್ಚಿನ ಇಳುವರಿ.

1,004

ಕೃಷಿ ನಂಬಿಕೊಂಡೇ ಭಾರತದ ಅಧಿಕ ಜನ ಇದ್ದಾರೆ. ಅದೇ ಕಾರಣಕ್ಕೆ ಭಾರತವನ್ನು ಕೃಷಿ ಪ್ರಮುಖ ದೇಶ ಎಂದು ಕರೆಯುತ್ತೇವೆ. ಕಳೆದ ಎರಡು ವರ್ಷಗಳಲ್ಲಿ ಬಂದಂತಹ ಸಾಂಕ್ರಾಮಿಕ ಇಂದ ಅನೇಕರು ಕೆಲಸ ಕಳೆದುಕೊಂಡರು ಮತ್ತೆ ಕೆಲವರು ಅನಿವಾರ್ಯವಾಗಿ ಕೆಲಸ ಬಿಡಬೇಕಾಗಿ ಬಂತು. ಅಂತಹ ಸಮಯದಲ್ಲಿ ಜನರಿಗೆ ಕೃಷಿ ಯಾ ಮಹತ್ವ ಹಾಗು ಕೃಷಿ ಮಾಡುವುದು ಎಷ್ಟು ಅನಿವಾರ್ಯ ಎನ್ನುವುದು ಗೊತ್ತಾಯಿತು. ಅದಕ್ಕೆ ಅನೇಕರು ಎಂಜಿನ್ನೇರ್ ಕಲಿತ ಯುವ ಜನರು ಆದುನಿಕ ತಂತ್ರಜ್ಞಾನ ಪಡೆದು ಕೃಷಿ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ವಿಷಯ ನಾವು ಅನೇಕ ಕಡೆ ಕೇಳಿದ್ದೇವೆ. ಇಂದು ಕೂಡ ಅಂತದ್ದೇ ವಿಚಾರ ನಿಮ್ಮ ಮುಂದೆ ನಾವು ತಿಳಿಸಲಿದ್ದೇವೆ.

ಕೇರಳದ ಸಹೋದರ ಸಹೋದರಿಯರಾದ ದೇವಿಕಾ ಹಾಗು ದೇವನ್ ಚಾನ್ರಶೇಖರನ್ ಇಬ್ಬರು ಕೂಡ ಉತ್ತಮ ವ್ಯಾಸಂಗ ಮಾಡಿದವರೇ. ದೇವಿಕಾ ಎಲೆಕ್ಟ್ರಿಕಲ್ ಹಾಗು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಪದ್ವಿ ಮಾಡಿದರೆ ದೇವನ್ ಅಏರೊನಾಟಿಕಲ್ ಎಂಜಿನ್ನೇರ್ ಪದವಿ ಮಾಡಿದ್ದಾರೆ. ೨೦೧೮ ರಲ್ಲಿ ಕೇರಳದಲ್ಲಿ ಮಳೆ ಹೆಚ್ಚು ಬಂದು ಬಹಳ ಕೃಷಿ ಹಾಳಾಗಿ ಹೋಯಿತು. ಕೇರಳದ ಫಲವತ್ತಾದ ಮಣ್ಣಿಂದ ಹೆಚ್ಚಿನ ಇಳುವರಿ ಪಡೆಯುವುದು ಕಡಿಮೆ ಆಯಿತು. ಅದೇ ಕಾರಣಕ್ಕಾಗಿ ಆ ಮಣ್ಣಿನಲ್ಲಿ ಉತ್ತಮ ಇಳುವರಿ ಮಾಡಲು ಆದುನಿಕ ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಿದರು ಈ ಸಹೋದರ ಸಹೋದರಿಯರು.

ಈ ಡ್ರೋನ್ ಇಂದಾಗಿ ಮದ್ದನ್ನು ಕೃಷಿಗಾಗಿ ಸಿಂಪಡಿಸುವುದು, ಇಳುವರಿಯನ್ನು ನೋಡುವುದು, ಬೆಳೆ ಯಾವ ಪ್ರಮಾಣದಲ್ಲಿ ಬೆಳೆದಿದೆ, ಮಣ್ಣಿನ ಮೇಲ್ವಿಚಾರಣೆ, ಸಸ್ಯವರ್ಗ ನಿರ್ವಹಣೆ ಇಂತಹ ಕೆಲಸಗಳ ನಿಖರ ಮಾಹಿತಿ ನೀಡುತ್ತದೆ ಈ ಮಾನವ ರಹಿತ ಡ್ರೋನ್. ಇದು ಒಂದೇ ದಿನದಲ್ಲಿ ೫೦ ಎಕರೆಗಳಷ್ಟು ಕೃಷಿ ಪ್ರದೇಶವನ್ನು ಇದರಿಂದ ಕೆಲಸ ಮಾಡಬಹುದು. fuselage ಒಂದು ಎಕರೆಗೆ ೫೦೦೦ ರೂಪಾಯಿಗಳಷ್ಟು ಚಾರ್ಜ್ ಮಾಡುತ್ತದೆ. ಅದೇ ರೀತಿ ಮಾನವ ರಹಿತ ಡ್ರೋನ್ ಅನ್ನು ಕೃಷಿ ಹಾಗು ಕೃಷಿಯೇತರ ಬಳಕೆಗೂ ತಯಾರು ಮಾಡಿಕೊಳ್ಳಬಹುದು.

ಈ Fuselage ಒಂದು ಕೃಷಿ ಗೆ ಬಹುಮುಖ್ಯವಾಗಿ ಸಹಾಯಮಾಡಲು ಶುರು ಮಾಡಲಾಗಿರುವ ಸ್ಟಾರ್ಟ್ ಅಪ್ ಆಗಿದೆ. ಇದಕ್ಕೆ ಕೃಷಿ ಇಲಾಖೆ ಹಾಗು ನಾಗರೀಕ ವಿಮಾನಯಾನ ಇಲಾಖೆ ಅನುಮತಿಗಳು ಕೂಡ ಸಿಕ್ಕಿದೆ. ಈ ಡ್ರೋನ್ ಬಳಸುವ ಮೂಲಕ ಪ್ರತಿ ರೈತರು ೫೦೦೦ ರೂಪಾಯಿಗಳನ್ನು ಕೊಡುವ ಮೂಲಕ, ರಸಗೊಬ್ಬರ ಸಿಂಪಡಿಕೆ, ಕೂಲಿ ಹಣಗಳಂತಹ ಸುಮಾರು ೧೫೦೦೦ ದಷ್ಟು ಹಣವನ್ನು ಉಳಿತಾಯ ಮಾಡಬಹುದು. ಅಲ್ಲದೆ ಇದು ಇಳುವರಿ ಮೇಲು ಪರಿಣಾಮ ಬೀರಿ ಸುಮಾರು ೪೦ ಪ್ರತಿಷದಷ್ಟು ಹೆಚ್ಚು ಇಳುವರಿ ನೀಡುತ್ತದೆ ಎನ್ನುವುದು ಈ ಡ್ರೋನ್ ತಯಾರಿಸಿದವರ ಮಾತು.

ಈ ಕಂಪನಿ ಶುರು ಮಾಡುವುದರ ಮುಖ್ಯ ಉದ್ದೇಶ ರೈತರಿಗೆ ಸಹಾಯ ಮಾಡುವದಾಗಿದೆ ಹೊರತು ಉದ್ಯಮದ ಮೂಲಕ ಲಾಭ ಗಳಿಸುವುದು ಅಷ್ಟೇ ಅಲ್ಲ ಎಂದು ಹೇಳುತ್ತಾರೆ ದೇವಿಕಾ. ಇದರಿಂದ ಅನೇಕ ರೈತರಿಗೆ ಸಹಾಯವಾಗಿದೆ ಅಲ್ಲದೆ ಎಲ್ಲ ರೈತರಿಗೆ ಸಹಾಯ ಮಾಡುವಷ್ಟು ಸಮರ್ಥರಾಗಿದ್ದೇವೆ ಎನ್ನುವುದು ದೇವಿಕಾ ಅವರ ಅಭಿಪ್ರಾಯ. ಈ ಡ್ರೋನ್ ಅನ್ನು ನೀವು ಬಳಸಲು ಇಚ್ಚಿಸಿದರೆ ಅವರ ಅಧಿಕೃತ ವೆಬ್ಸೈಟ್ https://www.fuselage.co.in/ ಮೂಲಕ ಅವರನ್ನು ಸಂಪರ್ಕಿಸಬಹುದು. ಅಲ್ಲದೆ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಅವರ ವೆಬ್ಸೈಟ್ ಮೂಲಕ ಪಡೆದುಕೊಳ್ಳಬಹುದು.

Leave A Reply

Your email address will not be published.