ಕೇಂದ್ರ ಸಾರಿಗೆ ಇಲಾಖೆಯಿಂದ ಮಹತ್ತರ ಘೋಷಣೆ! ಇದು ಕಾರ್ ಹೊಂದಿರುವ ಎಲ್ಲರಿಗೂ ಅನ್ವಯಿಸುತ್ತದೆ. ಏನಿದು ಹೊಸ ನಿರ್ಧಾರ?

728

ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಕಾರ್ಯ ಪ್ರವುತ್ತವಾಗಿದೆ. ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ನಡೆಸುವ ಮುನ್ನುಡಿ ಬರೆದಿದೆ. ಅದು ಪೆಟ್ರೋಲ್ ಡೀಸೆಲ್ ವಾಹನ ಬಳಕೆ ಕಡಿಮೆ ಮಾಡುವುದು ಇರಬಹುದು, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸಬ್ಸಿಡಿ ನೀಡಿ ಉತ್ತೇಜನ ನೀಡುವುದು ಇರಬಹುದು. ಸಾರಿಗೆ ರಸ್ತೆಯ ಉನ್ನತೀಕರಣ ಇರಬಹುದು ಹೀಗೆ ಹತ್ತು ಹಲವಾರು ಕ್ರಮ ಕೈಗೊಳ್ಳುತ್ತಿದೆ. ಅದರೊಟ್ಟಿಗೆ ಈಗ ಮತ್ತೊಂದು ನಿಯಮ ಜಾರಿಗೆ ತರಲು ಎಲ್ಲಾ ರೀತಿಯ ಸಿದ್ಧತೆ ಮಾಡಿದೆ. ಹಾಗೂ ಇದು ಬರುವ ಅಕ್ಟೋಬರ್ ಒಳಗೆ ಎಲ್ಲರೂ ಮಾಡಿಸಿಕೊಳ್ಳಬೇಕು ಇಲ್ಲವಾದರೆ ಬಾರಿ ದಂಡ ತೆರಲು ಸಿದ್ಧರಾಗಬೇಕು. ಹೌದು ಏನಿದು ಘೋಷಣೆ ಬನ್ನಿ ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಅದೆಷ್ಟೋ ಅಮಾಯಕರು ತಮ್ಮ ಪ್ರಾಣ ಕಳೆದಕೊಳ್ಳುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಯಾರದ್ದೋ ಜೀವ ಹೋಗುತ್ತಿದೆ. ಅಪಘಾತದಲ್ಲಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಒಂದು ಕ್ರಮ ಜಾರಿಗೆ ತರಲು ಆದೇಶ ಹೊರಡಿಸಿದೆ. ಹೌದು ಯಾರೆಲ್ಲ ಕಾರ್ ಹೊಂದಿದ್ದಾರೋ ಅವರೆಲ್ಲರೂ ತಮ್ಮ ಕಾರ್ ಗೆ ಏರ್ ಬ್ಯಾಗ್ ಹಾಕುವುದು ಕಡ್ಡಾಯವಾಗಿದೆ.

6 ಏರ್ ಬ್ಯಾಗ್ ಗಳು ಇದ್ದೆ ಇರಬೇಕು. ವಾಹನದಲ್ಲಿ ಮೊದಲೇ ಬಂದಿದ್ದರೆ ಒಳಿತು ಇಲ್ಲವಾದರೆ ಬೇರೆಯದೇ ಹಾಕಿಸಿಕೊಳ್ಳಬೇಕು. ಮತ್ತು ಇದಕ್ಕೆ ಅಕ್ಟೋಬರ್ 2022 ವರೆಗಿನ ಗಡುವು ನೀಡಿದೆ. ಈಗಾಗಲೇ ಕೋರೋನ ದಿಂದ ತತ್ತರಿಸಿರುವ ಜನತೆಗೆ ಇದು ಬಾರಿ ಹೊರೆ ಆಗುವಂತೆ ಕಾಣುತ್ತಿದೆ. ಸರ್ಕಾರ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸಹಕಾರಿ ಆಗುವಂತೆ ನೋಡಿಕೊಳ್ಳಬೇಕು.

Leave A Reply

Your email address will not be published.