ಕೈ ಹಿಡಿದ ಗಂಡ ಬಿಟ್ಟು ಹೋದಾಗ ಮಗನ ಭವಿಷ್ಯ ರೂಪಿಸಲು ಇಟ್ಟಿದ್ದ ಹಣದಿಂದ ಆರಂಭಿಸಿದ ಉದ್ಯಮ ಇಂದು ಇವರು 20ಲಕ್ಷ ವರೆಗೂ ದುಡಿದು ಕೊಡುತ್ತಿದೆ?

1,271

ಜೀವನದಲ್ಲಿ ಹಾಗೆ ಎಲ್ಲವೂ ಸರಿ ಇದೆ ಎಂದು ಅಂದುಕೊಳ್ಳುವಾಗ ಎಲ್ಲವೂ ಉಲ್ಟಾ ಆಗಿರುತ್ತದೆ. ಅಷ್ಟೊಂದು ಪಾಠಗಳನ್ನು ಕಲಿಸುತ್ತದೆ ಜೀವನ. ಹೀಗೆ ಈ ಮಹಿಳೆ ಜೀವನದಲ್ಲಿ ನಡೆದದ್ದು. ಕೈ ಹಿಡಿದ ಗಂಡ ನಡು ಮಾರ್ಗದಲ್ಲಿ ಕೈ ಬಿಟ್ಟು ಹೋದಾಗ ಕುಗ್ಗದೆ ಮಾಡಿದ ಪ್ರಯತ್ನ ಇಂದು ಅವರು ಬ್ಯುಸಿನೆಸ್ ವುಮನ್ ಆಗಿದ್ದಾರೆ. ಅವರು ಹೇಳುವ ಪ್ರಕಾರ ನಾನು ಇಷ್ಟದಿಂದ ಈ ಉದ್ಯಮಕ್ಕೆ ಬಂದಿದ್ದಲ್ಲ ಬದಲಾಗಿ ಕಷ್ಟದಿಂದ ಬೇರೆ ದಾರಿ ಕಾಣದೇ ಬಂದೆ ಆದರೆ ಎಂದು ಅದೇ ನನ್ನ ಕೈ ಹಿಡಿದಿದೆ ಎನ್ನುತ್ತಾರೆ.

ಇವರ ಹೆಸರು ಶಿಲ್ಪಾ, ಮಂಗಳೂರಿನ ನಿವಾಸಿ. 2005ರಲ್ಲೀ ಇವರ ಮದುವೆ ಆಯಿತು. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು, 2008ನೆಯ ಇಸವಿಯಲ್ಲಿ ತನ್ನ ಗಂಡ ಬ್ಯುಸಿನೆಸ್ ಲೋನ್ ವಿಚಾರವಾಗಿ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೋದವರು ಇದುವರೆಗೂ ಬರಲಿಲ್ಲ. ಹೌದು ಆತ ಈಕೆಯನ್ನು ಬಿಟ್ಟೆ ಹೋಗಿದ್ದು. ಏನು ಮಾಡುವುದು ಎಂದು ತೋಚದೇ ಇರುವಾಗ ಅವರ ನೆರೆ ಕರೆಯವರು ಚೆನ್ನಾಗಿ ಅಡುಗೆ ಮಾಡುತ್ತೀರಿ ಒಂದು ಗಾಡಿ ತೆಗೆದುಕೊಂಡು ಅದನ್ನೇ ಶುರು ಮಾಡಿ ಎಂದರೂ. ಆದರೆ ಸೆಕೆಂಡ್ ಹ್ಯಾಂಡ್ ಗಾಡಿಗೆ ಫೈನಾನ್ಸ್ ಇಲ್ಲ ಎಂದು ತಿಳಿದು ಶೋರೂಂ ಗೆ ಹೋದಾಗ ಅಲ್ಲಿ ಡೌನ್ ಪೇಮೆಂಟ್ ಹಾಕಬೇಕು ಎಂದಾಗ ಮಗನ ಭವಿಷ್ಯಕ್ಕಾಗಿ ಇತ್ತ ಒಂದು ಲಕ್ಷ ಹಣ ತೆಗೆದು ಗಾಡಿ ಖರೀದಿಸಿ ಉದ್ಯಮ ಆರಂಭಿಸುತ್ತಾರೆ.

ಆರಂಭದಲ್ಲಿ 500 ರಿಂದ 1000ಲಾಭ ಬರುತ್ತಿತ್ತು ಈಗ 10000ವರೆಗೆ ವಹಿವಾಟು ನಡೆಸುತ್ತಾರೆ. ಇವರ ಈ ಮೊಬೈಲ್ ಕ್ಯಾಂಟೀನ್ ಅನ್ನು ಹಳ್ಳಿ ಮನೆ ರೊಟ್ಟಿಸ್ ಎಂದು ಕರೆಯುತ್ತಾರೆ. ಇದು ಮಂಗಳೂರಿನ ಸುತ್ತ ಮುತ್ತ ಬಹಳ ಫೇಮಸ್. ಇವರ ಸಾಧನೆ ಗುರುತಿಸಿ ಆನಂದ್ ಮಹೀಂದ್ರಾ ಅವರು ಒಂದು ಗಾಡಿಯನ್ನು ಉಡುಗೊರೆ ರೂಪದಲ್ಲಿ ಕೊಟ್ಟಿದ್ದರು. ಸಾಧನೆ ಮಾಡಲು ಛಲ ಒಂದು ಬೇಕು ಎಂಬುವುದಕ್ಕೆ ಇವರು ನೈಜ ಉದಾಹರಣೆ.

Leave A Reply

Your email address will not be published.