ಕೋಟ್ಯಾಧಿಪತಿಯಲ್ಲಿ ೫ ಕೋಟಿ ಗೆದ್ದು ದಿವಾಳಿಯಾದ ಸುಶೀಲ್ ಕುಮಾರ್. ಇಲ್ಲಿದೆ ಅವರ ಜೀವನದ ದುರಂತ ಕಥೆ.

1,207

ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ಕೌನ್ ಬನೇಗಾ ಕರೋಡ್ಪತಿ ಹಿಂದಿ ಅವತರಣಿಕೆ ಅತ್ಯಂತ ಯಶಸ್ವಿ ಕಾರ್ಯಕ್ರಮ ಕೂಡ ಆಗಿದೆ. ಈ ಕಾರ್ಯಕ್ರಮ ಬಹಳಷ್ಟು ಜನರಿಗೆ ಬದುಕು ಕಟ್ಟಿಕೊಡುವಲ್ಲಿ ಯಶಸ್ವಿ ಆಗಿದೆ. ಆದರೆ KBC ಅಲ್ಲಿ ೫ ಕೋಟಿ ಗೆದ್ದ ಬಿಹಾರದ ಸುಶೀಲ್ ಕುಮಾರ್ ಮತ್ತೆ ಬಡಪಾಯಿ ಆಗಿರುವುದು ಗೊತ್ತಾದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ಇವರ ಬಗೆಗಿನ ಸಂಪೂರ್ಣ ಕಥೆ ಇಲ್ಲಿದೆ.

ಕೋಟ್ಯಧಿಪತಿ ಗೆದ್ದ ನಂತರದ ನನ್ನ ಜೀವನ ಸವಾಲಿನದ್ದು – ಕೋಟ್ಯಧಿಪತಿ ಐದನೇ ಸರಣಿಕೆಯಲ್ಲಿ ೫ ಕೋಟಿ ಗೆದ್ದ ನಂತರ ಸುನಿಲ್ ಕುಮಾರ್ ಅವರ ಜೀವನವೇನೋ ಬದಲಾಯಿತು. ಸಮಾಜದಲ್ಲಿ ಗೌರವ ಸಿಕ್ಕಿತು. ಆದರೆ ಅಷ್ಟೇ ಬೇಡ ಅವರು ತಾನು ಗೆದ್ದ ಹಣವನ್ನೆಲ್ಲ ಕಳೆದುಕೊಂಡು ಮತ್ತೆ ಬಡವರಾಗಿದ್ದರೆ. ಸುಶೀಲ್ ಕುಮಾರ್ ಅವರು ತಮ್ಮ ಫೇಸ್ಬುಕ್ ಅಲ್ಲಿ ತಮ್ಮ ಜೀವನದ ಎಲ್ಲ ಕಷ್ಟ ನೋವುಗಳನ್ನು ಫೇಸ್ಬುಕ್ ಅಲ್ಲಿ ಹಂಚಿದ್ದಾರೆ. ಅದಕ್ಕೆ ಶೀರ್ಷಿಕೆ ಆಗಿ ಕೋಟ್ಯಧಿಪತಿ ಗೆದ್ದ ನಂತರದ ನನ್ನ ಸವಾಲಿನ ಸಮಯ ಎಂದು ಹಾಕಿದ್ದಾರೆ.

ಬಹಳಷ್ಟು ಜನರು ನಂಗೆ ಮೋಸ ಮಾಡಿದ್ದಾರೆ ಎಂದು ಹೇಳಿಕೊಂಡಿರುವ ಸುಶೀಲ್ ಕುಮಾರ್ ಅವರು, kbc ಗೆದ್ದ ನಂತರದಲ್ಲಿ ಅನೇಕ ದಾನ ಧರ್ಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕಾರ್ಯಕ್ರಮಗಳು ಮುಗಿದ ನಂತರವೇ ಇವರಿಗೆ ಗೊತ್ತಾಗಿದ್ದು ಅವುಗಳೆಲ್ಲ ಸ್ಕ್ಯಾಮ್ ಹಾಗು ಎಲ್ಲರು ಅವರಿಗೆ ಮೋಸ ಮಾಡಿದ್ದಾರೆ ಎಂದು. ಇದರಿಂದ ಬೇಸತ್ತ ಅವರ ಪತ್ನಿ ಕೂಡ ಅವರನ್ನು ಬಿಟ್ಟು ಹೋದರು ಎಂದು ಹೇಳಿದ್ದಾರೆ. ಅದಲ್ಲದೆ ಅವರು ಮಾಧ್ಯಮಗಳೊಂದಿಗೆ ಸ್ವಲ್ಪ ಹತ್ತಿರದ ಒಡನಾಟವೂ ಹೊಂದಿದ್ದರು. ಅಲ್ಲದೆ ಕಲಾವಿದರ ಪರಿಚಯವೂ ಇವರಿಗೆ ಇತ್ತು.

ಸಮಯ ಕಳೆಯುತ್ತಾ ಮದ್ಯಪಾನ ಹಾಗು ಧೂಮಪಾನದ ಅಭ್ಯಾಸ ಕೂಡ ಇವರಿಗೆ ಶುರುವಾಯಿತು. ಅವರು ದೆಹಲಿಯಲ್ಲಿ ಇದ್ದ ಸಮಯದಲ್ಲಿ ಏಳು ಪ್ರತ್ಯೇಕ ಗುಂಪುಗಳೊಡನೆ ಕೂತು ಮದ್ಯಪಾನ ಮಾಡುತಿದ್ದರು ಎಂದು ಹೇಳಿದ್ದಾರೆ. ಇವರುಗಳ ಮಾತು ಸುಶೀಲ್ ಕುಮಾರ್ ಅವರಿಗೆ ಆಕರ್ಷಕವಾಗಿ ಕಂಡವು ಅವರ ಸಹವಾಸದಲ್ಲಿ ಮದ್ಯಪಾನಿ ವ್ಯಸನಿಯಾಗುತ್ತಿರುವುದನ್ನು ಅಷ್ಟು ಗಂಭೀರವಾಗಿಯೂ ಪರಿಗಣಿಸಲಿಲ್ಲ. ಸುಶೀಲ್ ಕುಮಾರ್ ಅವರು ತಾನು ಗೆದ್ದ ಈ ಎಲ್ಲ ಹಣವನ್ನು ಖಾಲಿ ಮಾಡಿಕೊಂಡು ಬಿಡಿ ಪಾಲಾದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲ ಕಡೆ ಹರಡಿತ್ತು.

ತನ್ನ ಸುತ್ತ ಮುತ್ತ ಇದ್ದವರೆಲ್ಲರೂ ಸುಶೀಲ್ ಕುಮಾರ್ ರಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದರು. ಇದು ಸುಶೀಲ್ ಕುಮಾರ್ ಅವರಿಗೆ ತನ್ನ ಬದುಕಿನ ಬಗೆಗಿನ ಬಗ್ಗೆ ಯೋಚನೆ ಮಾಡಲು ಸಮಯ ಮಾಡಿಕೊಟ್ಟಿತು ಎಂದು ಅವರು ತಮ್ಮ ಫೇಸ್ಬುಕ್ ಅಲ್ಲಿಹೇಳಿಕೊಂಡಿದ್ದಾರೆ. ಇದೀಗ ತಮ್ಮ ಮದ್ಯಪಾನ ಧೂಮಪಾನ ವ್ಯಸನವನ್ನು ಬಿಟ್ಟು ಪರಿಸರಕ್ಕೆ ಒಳಿತು ಮಾಡುವ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಾದ್ಯಾಪಕ ಆಗಬೇಕೆನ್ನುವ ಅವರ ಕನಸನ್ನು ನಾನಾಸೌ ಮಾಡಲು ಕೋಚಿಂಗ್ ಗೆ ಸೇರಿಕೊಂಡಿದ್ದಾರೆ. ಈಗ ತಾವು ಗೆದ್ದ ಹಣ ಹೋದರು ಕೂಡ ತಮ್ಮ ತಪ್ಪನು ಅರಿತು ನೆಮ್ಮದಿಯ ಜೀವನ ಮಾಡಿ ಕೊಂಡಿದ್ದಾರೆ.

Leave A Reply

Your email address will not be published.