ಕೋವಿಡ್ ನಿಂದಾಗಿ ಬಂದಾಯಿತು ವಜ್ರ ವ್ಯಾಪಾರ, ಆದರೆ ಹಳ್ಳಿಗೆ ಮರಳಿ ಮಾಡಿದ ವಹಿವಾಟು ಕೈ ಹಿಡಿಯಿತು, ಇಂದು ಪ್ರತಿ ತಿಂಗಳು ಸಂಪಾದಿಸುತ್ತಿದ್ದಾರೆ 25ಲಕ್ಷ?

408

ಕೋವಿಡ್ ಎಂಬುವುದು ಇಡೀ ಜನರ ಜೀವನವನ್ನೇ ಅಸ್ತವ್ಯಸ್ತ ಮಾಡಿದೆ. ಎಲ್ಲರೂ ಇದರಿಂದ ತಮ್ಮ ಜೀವನ ಕಟ್ಟಿ ಕೊಳ್ಳಲು ಹಿಂದೆ ಮುಂದೆ ನೋಡುವಂತೆ ಆಗಿದೆ. ಅದೆಷ್ಟೋ ಜನರು ಪರವುರು ಬಿಟ್ಟು ತಮ್ಮ ಹಳ್ಳಿಗೆ ಬಂದು ನೆಲೆಸಿದ್ದಾರೆ. ಕೆಲವರಂತೂ ತಮ್ಮವರನ್ನೆಲ್ಲ ಕಳೆದುಕೊಂಡು ಅನಾಥರಾಗಿದ್ದಾರೆ. ಆದರೆ ಇದು ಹಲವಾರು ಜನರಿಗೆ ಹಲವಾರು ರೀತಿಯಲ್ಲಿ ಪಾಠ ಕಲಿಸಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಹಾಗಾದರೆ ಇಂತಹ ಒಂದು ಕಥೆಯನ್ನು ನೋಡೋಣ ಬನ್ನಿ.

ಇವರ ಹೆಸರು ಮಗನ್ ಬಾಯ್ ಇವರು ಮೂಲತಃ ಗುಜರಾತಿನ ಹಳ್ಳಿಯವರು. ಆದರೆ ತಮ್ಮ ಪ್ರಬುದ್ಧತೆಯ ನಂತರ ಹಳ್ಳಿಯಲ್ಲಿನ ಕೃಷಿ ಕೃಷ ಬಿಟ್ಟು ಸೂರತ್ ಗೆ ಬಂದು ವಜ್ರದ ವ್ಯಾಪಾರ ಶುರು ಮಾಡುತ್ತಾರೆ. ಇವರದ್ದೇ ಹಾದಿ ಹಿಡಿದು ಇವರ ಸಹೋದರರು ಕೂಡ ಸೂರತ್ ಗೆ ಬಂದು ನೆಲೆ ನಿಂತರು. ಹೀಗೆ ಎಲ್ಲರೂ ಹಳ್ಳಿ ಬಿಟ್ಟು ಪಟ್ಟಣದಲ್ಲಿ ನೆಲೆಸಿದರು. ಆದರೆ ಇವರ ಪತ್ನಿ ಪಶು ಸಂಗೋಪನೆ ಎಂದರೆ ಇಷ್ಟ ಪಡುತ್ತಿದ್ದರು. ಅದಕ್ಕೆ ಅವರಿಗಾಗಿ ಸ್ವಲ್ಪ ಜಮೀನು ಖರೀದಿಸಿ ಎರಡು ಹಸುಗಳನ್ನು ಖರೀದಿ ಮಾಡಿದ್ದರು. ಶುರುವಿಗೆ ಪಾರ್ಟ್ ಟೈಮ್ ರೀತಿಯಲ್ಲೂ ಇದನ್ನು ಆರಂಭಿಸಿದ್ದರು, ಆದರೆ ಮುಂದಿನ ದಿನಗಳಲ್ಲಿ ಇದುವೇ ಅವರ ಕೈ ಹಿಡಿಯುತ್ತದೆ ಎಂದು ಅವರು ಎಣಿಸಿರಲಿಲ್ಲ.

ಹೌದು ಎರಡು ವರ್ಷಗಳ ಹಿಂದೆ ಬಂದ ಕೋವಿಡ್ ಎಲ್ಲವನ್ನೂ ತಲೆಬುಡ ಮಾಡಿತು. ವಜ್ರ ವ್ಯಾಪಾರ ಕೈಕೊಟ್ಟಿತು ಆದರೆ ಪಾರ್ಟ್ ಟೈಮ್ ಆಗಿ ಆರಂಭಿಸಿದ ಈ ಉದ್ಯಮ ಕೈ ಬಿಡಲಿಲ್ಲ . ಕುಟುಂಬದ ಎಲ್ಲಾ ಸದಸ್ಯರು ಸೇರಿ ಇದನ್ನೇ ಮುಂದುವರೆಸಿದರು. ಇದು ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ ಇಂದು ಅವರ ಬಳಿ 80ಕ್ಕಂತಲೂ ಹೆಚ್ಚು ಹಸುಗಳು ಇವೆ. ಅವರು ಹೇಳುವ ಪ್ರಕಾರ ವರ್ಷಕ್ಕೆ ಇದರಿಂದ 1 ಕೋಟಿ ಅಷ್ಟು ವಹಿವಾಟು ನಡೆಯುತ್ತದೆ ಎನ್ನುತ್ತಾರೆ ಇವರು. ಅದೇನೇ ಆಗಲಿ ಸಂಕ್ಷ್ಟದ ಸಮಯದಲ್ಲಿ ನಮ್ಮ ಮೂಲ ಉದ್ಯೋಗವೇ ನಮ್ಮ ಕೈ ಹಿಡಯುವುದಕ್ಕೆ ಇದೊಂದು ನೈಜ ಉದಾಹರಣೆ.

Leave A Reply

Your email address will not be published.