ಕ್ರೆಡ್ ಆ್ಯಪ್ ಬಳಸಿ 5 ಲಕ್ಷದವರೆಗೆ ಸಾಲ ಪಡೆಯಿರಿ ಬರಿ 30 ಸೆಕೆಂಡ್ ಗಳಲ್ಲಿ. ಹೇಗೆ ಪಡೆಯುವುದು?

725

ಇತ್ತೀಚಿನ ದಿನಗಳಲ್ಲಿ ಕಾರ್ಡ್ ಲೆಸ್ ಟ್ರನ್ಸ್ಯಾಕ್ಷನ್ ಹೆಚ್ಚಾಗುತ್ತಾ ಇದೆ. ಜನಗಳು ಕೂಡ ಡಿಜಿಟಲೀಕರಣವನ್ನು ಒಪ್ಪಿಕೊಂಡು ಹಣಕಾಸಿನ ವಹಿವಾಟು ಕಡಿಮೆ ಮಾಡಿದ್ದಾರೆ. ಅದಕ್ಕೆ ಬದಲಾಗಿ ಕಾರ್ಡ್ ಯುಪಿಐ ಪೇಮೆಂಟ್ ಹೆಚ್ಚಾಗಿ ಮಾಡುತ್ತಿದ್ದಾರೆ. 5 ಸ್ಟಾರ್ ಹೋಟೆಲ್ ಇಂದ ಹಿಡಿದು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ವ್ಯಾಪಾರಿಗಳ ವರೆಗೂ QR ಕೋಡ್ ಮೂಲಕವೇ ಪಾವತಿ ಮಾಡಲಾಗುತ್ತದೆ. ಹಾಗಾದರೆ ಕ್ರೆಡ್ ಆ್ಯಪ್ ಮೂಲಕ ನೀವು ಅಷ್ಟೊಂದು ಮೊತ್ತ ಹೇಗೆ ಪಡೆಯಬಹುದು ಬನ್ನಿ ತಿಳಿಯೋಣ.

ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ನೀವು ಇದರ ಲಾಭ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕಡಿಮೆ ಎಂದರೂ ಎರಡು ಮೂರು ಬ್ಯಾಂಕ್ ಖಾತೆ ಮತ್ತು ಕಾರ್ಡ್ ಇದ್ದೆ ಇರುತ್ತದೆ. ಬ್ಯಾಂಕ್ ನವರೆ ಕರೆ ಮಾಡಿ ಕೊಡುತ್ತಾರೆ ಕ್ರೆಡಿಟ್ ಡೆಬಿಟ್ ಕಾರ್ಡ್ ಗಳನ್ನು. ಹಿಗೊಂದುವೇಳೆ ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ನಿಮ್ಮ ಮೊಬೈಲ್ ಪ್ಲೇ ಸ್ಟೋರ್ ನಲ್ಲಿ ಈ Cred ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ ನಿಮ್ಮ ಬಳಿ ಇರುವ ಕ್ರೆಡಿಟ್ ಕಾರ್ಡ್ ಅನ್ನು ಈ ಆ್ಯಪ್ ಗೆ ಲಿಂಕ್ ಮಾಡಿಕೊಳ್ಳಿ ನಂತರದ ಎಲ್ಲಾ ಬಿಲ್ ಗಳನ್ನು ಕೂಡ ಇದೆ ಆ್ಯಪ್ ಮೂಲಕ ಪಾವತಿ ಮಾಡುತ್ತಾ ಇರಿ. ನಿಮ್ಮ ವಹಿವಾಟು ತುಂಬಾ ದೊಡ್ಡ ಮೊತ್ತದ ಆದಲ್ಲಿ ನಿಮಗೆ ಈ ಸೌಲಭ್ಯ ಬೇಗನೆ ದೊರೆಯುತ್ತದೆ.

Cred cash ಎಂಬ ಮೆನು ಒಂದು ನಿಮಗೆ ಕಾಣುತ್ತದೆ. ಇದು ಆರಂಭದಲ್ಲಿ ಇರುವುದಿಲ್ಲ ನೀವು ಬಳಕೆ ಮಾಡುತ್ತಾ ಅದರ ಮೂಲಕ ಪೇಮೆಂಟ್ ಮಾಡುತ್ತಾ ಇದ್ದಾರೆ ಇದು ಆಕ್ಟಿವೇಟ್ ಆಗುತ್ತದೆ. ಇದರಲ್ಲಿ ನಿಮ್ಮ ಕಾರ್ಡ್ ಬಳಕೆಗೆ ತಕ್ಕಂತೆ ಲಿಮಿಟ್ ಕೊಟ್ಟಿರುತ್ತಾರೆ. ನೀವು ಅದನ್ನು ಬಳಸಿಕೊಂಡು ನಿಮ್ಮ ಖಾತೆಗೆ ಪಡೆದುಕೊಳ್ಳಬಹುದು. ಇದರ ಮರುಪಾವತಿ ಕಂತುಗಳನ್ನು ಕೂಡ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮತ್ತು ಪಾವತಿ ದಿನಾಂಕ ಕೂಡ ನಮಗೆ ಆಯ್ಕೆ ಮಾಡುವ ಆಪ್ಷನ್ ಇದರಲ್ಲಿ ಬರುತ್ತದೆ.

Leave A Reply

Your email address will not be published.