ಗಾಡಿ ಚಾರ್ಜ್ ಕೂಡ ಮಾಡಬೇಕೆಂದಿಲ್ಲ, ISRO ತಯಾರು ಮಾಡಿದೆ ಸೋಲಾರ್ ಕಾರ್. ಶೀಘ್ರದಲ್ಲೇ ಮಾರುಕಟ್ಟೆಗೆ ತರಲಿದೆ ಟಾಟಾ ಹಾಗು ಮಾರುತಿ ಕಂಪನಿಗಳು.

2,707

ಕಳೆದೆರಡು ವರ್ಷಗಳಿಂದ ದೇಶದಲ್ಲಿ ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಗಗನಕ್ಕೇರಿದೆ. ಇಂಧನದ ಏರುತ್ತಿರುವ ಬೆಲೆ ಇಂದ ಜನ ಬೇಸತ್ತು ಹೋಗಿದ್ದಾರೆ. ಈಗ ಇದರಿಂದ ಬೇಸತ್ತು ಜನರು ಸಾರ್ವಜನಿಕ ಬಸ್ ಗಳನ್ನೂ ಪರ್ಯಾಯವಾಗಿ ಪ್ರಯಾಣಕ್ಕಾಗಿ ಬಳಸುತ್ತಿದ್ದಾರೆ. ಸರಕಾರ ಕೂಡ ಈ ಬೆಲೆ ಏರಿಕೆಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆ ಸರಕಾರವನ್ನು ಏನು ಮಾಡಲಾಗದ ಸ್ಥಿತಿಗೆ ತಂದು ಇಟ್ಟಿದೆ.

ಕೇಂದ್ರ ಸರಕಾರ ಈ ಇಂಧನದ ಮೇಲಿನ ಅವಲಂಬನೆ ಕಡಿಮೆಗೊಳಿಸಲು ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಜನರನ್ನು ಈ ಎಲೆಕ್ಟ್ರಿಕ್ ವಾಹನ ಖರೀದಿಸಲು ಸಬ್ಸಿಡಿ ಕೂಡ ನೀಡುತ್ತಿದೆ. ಆದರೆ ಈ ವಾಹನಗಳ ಬೆಲೆ ಸಾಮಾನ್ಯ ಜನರ ಕೈಗೆ ಎಟಕುತ್ತಿಲ್ಲ. ಇದರ ನಡುವೆ ಸೌರಚಾಕ್ತಿ ಬಗ್ಗೆ ಮಾತಾಡುವ ಸರಕಾರಗಳು ವಾಹನಗಳಿಗೆ ಇದನ್ನು ಏಕೆ ಬಳಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಜನರಲ್ಲಿ ಕಾಡುತ್ತಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.

ಎಲ್ಲರ ಪ್ರಶ್ನೆ ಭವಿಷ್ಯದಲ್ಲಿ ವಾಹನಗಳು ಸೂರ್ಯನ ಶಕ್ತಿ ಇಂದ ಓಡಾಡುತ್ತ ಎನ್ನುವುದು. ಇದಕ್ಕೆ ಉತ್ತರ ಎಂಬಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಒಂದು ಸೋಲಾರ್ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಗೊಳಿಸಿದೆ. ಇದನ್ನು ತಯಾರಿಸಲು ದೇಶದ ಉತ್ಪನ್ನಗಳನ್ನೇ ಬಳಸಲಾಗಿದೆ. ಇದರ ಬಿಡುಗಡೆ ಕೇರಳದ ರಾಜಧಾನಿ ತಿರುವನಂತಪುರ ದ ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್ ಅಲ್ಲಿ ಪ್ರದರ್ಶನ ಮಾಡಲಾಗಿದೆ. ಅದಲ್ಲದೆ ಇದು ಒಂದು ಪರಿಸರ ಪ್ರಿಯ ಗಾಡಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದರ ಬ್ಯಾಟರಿ ಲಿತಿಯಮ್ ಆಗಿದ್ದು ಇದನ್ನು ಸೂರ್ಯನ ಕಿರಣದಿಂದ ಚಾರ್ಜ್ ಮಾಡಬಹುದಾಗಿದೆ. ೨೦೧೭ ರಲ್ಲೇ ಇದನ್ನು ಪ್ರದರ್ಶನಕ್ಕೆ ಇಟ್ಟಿದ್ದು ಇದನ್ನು ಸಾರ್ವಜನಿಕರಿಗೆ ಉಪಯೋಗಿಸಲು ಯಾವಾಗ ಸಿಗುತ್ತದೆ ಎನ್ನುವುದು ಕಾದು ನೋಡಬೇಕಿದೆ. ಅಲ್ಲದೆ ಇಸ್ರೋ ಇಂದ ಗ್ರೀನ್ ಸಿಗ್ನಲ್ ಸಿಕ್ಕಿದ ಕೂಡಲೇ ದೊಡ್ಡ ಕಾರ್ ಕಂಪನಿಗಳಾದ ಟಾಟಾ ಹಾಗು ಮಾರುತಿ ಇದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬಹುದು.

Leave A Reply

Your email address will not be published.