ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಸಿಕ್ಕಿತು ರಾಷ್ಟ್ರ ಮಟ್ಟದ ಸ್ವರ್ಣ ಕಮಲ ಪ್ರಶಸ್ತಿ? ಯಾರಿವರು ಇವರು ಮಾಡಿದ ಸಾಧನೆ ಏನು?

380

ಬಡತನ ಕಷ್ಟ ಎಂದರೆ ಹಾಗೆ ನೋಡಿ ಜೀವನದಲ್ಲಿ ಒಂದಲ್ಲ ಒಂದು ಪಾಠವನ್ನು ಕಲಿಸುತ್ತದೆ. ಆ ಪಾಠಗಳನ್ನು ಕಲಿತು ಜೀವನದಲ್ಲಿ ಅಳವಡಿಸಿ ಕೊಂಡರೆ ಯಶಸ್ಸು ಎಂಬುವುದು ಕಟ್ಟಿಟ್ಟ ಬುತ್ತಿ. ಅಂತಹ ಸಾಧನೆ ಮಾಡಿದ ಒಬ್ಬ ವ್ಯಕ್ತಿಯ ಬಗೆಗೆ ನಾವು ತಿಳಿದು ಕೊಳ್ಳೋಣ. ಮೂಲತಃ ಇವರು ಉಡುಪಿ ಜಿಲ್ಲೆಯವರು, ಕಡು ಬಡತನದಿಂದ ಬೆಳೆದವರು. 6 ನೆಯ ತರಗತಿಯಲ್ಲಿ ಇರುವಾಗ ಮನೆಯ ಖರ್ಚು ವೆಚ್ಚ ನೋಡಲು ಅಣ್ಣನ ಗುಜಿರಿ ಅಂಗಡಿಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಹೀಗೆ ಕೆಲಸ ಮಾಡುತ್ತಾ ಇದ್ದಾಗ ಅಲ್ಲಿ ಗುಜಿರಿಗೆ ಬಂದ ತುಂತುರು ಬಾಲ ಮಂಗಳ ಇಂತಹ ಪುಸ್ತಕಗಳನ್ನು ಓದಲು ಆರಂಭಿಸಿದರು. ಹೀಗೆ ಆರಂಭವಾದ ಓದುವ ಹವ್ಯಾಸ ಮುಂದುವರೆಯಿತು ಮತ್ತಷ್ಟು ಪುಸ್ತಕಗಳ ಓದಲು ಶುರು ಮಾಡಿದರು. ಶಾಲೆಯಿಂದ ಕಲಿತ ವಿದ್ಯೆಗಿಂತ ಗುಜರಿ ಪುಸ್ತಕಗಳಲ್ಲಿ ಕಲಿತದ್ದೇ ಹೆಚ್ಚು ಎನ್ನುತ್ತಾರೆ ಇವರು.

ಹೀಗೆ ಬೆಳೆಯುತ್ತಿದ್ದಾಗ ನೆರೆ ಮನೆಯವರ ಮನೆಯಲ್ಲಿ ಸಿನೆಮಾ ನೋಡುವ ಹವ್ಯಾಸ ಬೆಳೆಸಿಕೊಂಡರು. ಅವರು ಎಷ್ಟು ಆತ್ಮೀಯರು ಎಂದರೆ ರಾತ್ರಿ ದಿನಾ 3 ಚಲನಚಿತ್ರ ತೋರಿಸುತ್ತಿದ್ದರು. ಗೋಣಿ ಹೊದ್ದು ಮಲಗಿಕೊಂಡು ಸಿನೆಮಾ ನೋಡುತ್ತಿದ್ದಾಗಲೆ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಯಿತು ಎನ್ನುತ್ತಾರೆ ಇವರು. ಹೀಗೆ ಒಂದೊಮ್ಮೆ ಅನಿರೀಕ್ಷಿತವಾಗಿ ಗಿರೀಶ್ ಕಾಸರವಳ್ಳಿ ಅವರು ಕರೆ ಮಾಡಿ ಕುಂದಾಪುರ ಕನ್ನಡದಲ್ಲಿ ಸಿನೆಮಾ ಮಾಡುತ್ತಿದ್ದೇನೆ ನನಗೆ ನಿಮ್ಮ ಸಹಕಾರ ಬೇಕು ಎಂದು ಕೇಳಿದಾಗ ಅಚ್ಚರಿಯೇ ಕಾದಿತ್ತು. ಹೀಗೆ ಶುರುವಾಗಿದ್ದು ಅವರ ಸಿನಿ ಜರ್ನಿ.

ಹೀಗೆ ಮುಂದಕ್ಕೆ ಸಾಗಿ ಹಜ್ ಸಿನೆಮಾ ಮಾಡಿದರು ಇದಕ್ಕೆ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂತು ಇದೆ ಸಿನೆಮಾಗೆ ಸ್ವರ್ಣ ಕಮಲ ಪ್ರಶಸ್ತಿ ಬಂದಿತ್ತು. ಅದೆಷ್ಟೋ ರಾಷ್ಟೀಯ ಪ್ರಶಸ್ತಿಗಳು ಇವರ ಮುಡಿಗೆ ಏರಿದವು. ಕಷ್ಟ ಎಂದು ಕುಳಿತಿದ್ದರೆ ಇನ್ನು ಅವರು ಅಲ್ಲೇ ಇರಬೇಕಿತ್ತು. ಆದರೆ ಇಷ್ಟು ಎತ್ತರಕ್ಕೆ ಬೆಳೆದರೂ ತಮ್ಮ ಕಸುಬು ಬಿಡಲಿಲ್ಲ ಈಗಲೂ ಅವರು ಗುಜಿರಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಇದುವರೆಗೂ ವಸ್ತು ಆಧಾರಿತ ಸಿನೆಮಾ ಮಾಡುತ್ತಿದ್ದ ಇವರು ಮೊದಲ ಬಾರಿಗೆ ಕಮರ್ಷಿಯಲ್ ಸಿನೆಮಾ ಮಾಡಿದ್ದು ಇದೆ ತಿಂಗಳಲ್ಲಿ ತೆರೆ ಕಾಣಲಿದೆ. “ಆ 90 ದಿನಗಳು” ಆ ಚಿತ್ರ. ಇಷ್ಟೊಂದು ವಿಷಯ ತಿಳಿದ ನಿಮಗೆ ಆ ವ್ಯಕ್ತಿ ಯಾರೆಂದು ಕುತೂಹಲ ಮೂಡಿರಬಹುದು. ಅವರು ಮತ್ಯಾರು ಅಲ್ಲ ಯಾಕುಬ್ ಖಾದರ್ ಗುಲ್ವಾಡಿ. ಹೌದು ಕರಾವಳಿಯ ಅಪ್ಪಟ ಪ್ರತಿಭೆ. ಇವರು ದೇಶದಲ್ಲೇ ಅಷ್ಟೇ ಅಲ್ಲ ವಿದೇಶದಲ್ಲಿ ಕೂಡ ಚಿರ ಪರಿಚಿತರು. ಅದೆಷ್ಟೋ ರಾಷ್ಟ್ರ ಪ್ರಶಸ್ತಿ ಇವರ ಸಿನೆಮಾಗಳಿಗೆ ಸಿಕ್ಕಿದೆ. ಇವರ ಸಾಧನೆ ಹೀಗೆ ಮುಂದುವರೆಯಲಿ ಎಂದು ಆಶಿಸುವ.

Leave A Reply

Your email address will not be published.