ಗುಜುರಿಗೆ ಹಾಕಿದ್ದ ವಿಮಾನವನ್ನು ಕೇವಲ ೧ ಪೌಂಡ್ (೧೦೦ರೂ) ಗೆ ಖರೀದಿಸಿದ ಈ ಮಹಿಳೆ ಇಂದು ಸಂಪಾದಿಸುತ್ತಿದ್ದಾಳೆ ಕೋಟಿ ಕೋಟಿ?
ಮನುಷ್ಯನ ಮೆದುಳು ಎಂಬುವುದು ಐಡಿಯಾಗಳು ಆಗರ ಅದು. ಅದಕ್ಕೆ ಸ್ವಲ್ಪ ಕೆಲಸ ಕೊಟ್ಟರೆ ಅದು ಅದ್ಭುತಗಳನ್ನು ಮಾಡುತ್ತದೆ. ಜೀವನದಲ್ಲಿ ನೇರವಾಗಿ ಯೋಚನೆ ಮಾಡಿ ಕೆಲಸ ಮಾಡುವುದಕ್ಕಿಂತ ಸ್ವಲ್ಪ ಭಿನ್ನವಾಗಿ ಮಾಡಿದರೆ ಬಹುಬೇಗ ಯಶಸ್ಸು ಸಿಗುತ್ತದೆ. ನಾವು ಇಂದು ತಿಳಿಯಲು ಹೊರಟ ಈ ವಿಚಾರ ಅಂತಹುದೇ. ಇವರ ಹೆಸರು ಹಾರ್ವೆ ಮೂಲತಃ ಬ್ರಿಟನ್ ಮೂಲದವರು. ಇವರ ಭಿನ್ನವಾದ ಯೋಚನೆ ಇಂದು ಇವರನ್ನು ಕೋಟ್ಯಾಂತರ ರೂಪಾಯಿ ಓಡೆಯರನ್ನಾಗಿ ಮಾಡಿದೆ. ಹೌದು ಇವರು ಗುಜಿರಿಯಿಂದ ಖರೀದಿಸಿದ ವಸ್ತುವಿನಿಂದ ಕೋಟ್ಯಾಧಿಪತಿ ಆಗಿದ್ದಾರೆ. ಬನ್ನಿ ಅವರ ಯೋಜನೆ ಏನಾಗಿತ್ತು ಬನ್ನಿ ತಿಳಿಯೋಣ.
ಅದು ಬ್ರಿಟಿಷ್ ಏರ್ಲೈನ್ ಗೆ ಸೇರಿದ ವಿಮಾನ 1994ರಲ್ಲಿ ತನ್ನ ಸೇವೆಯನ್ನು ಆರಂಭಿಸಿತ್ತು. 26 ವರ್ಷದವರೆಗೆ ತನ್ನ ಸೇವೆಯನ್ನು ಸಲ್ಲಿಸಿದ ಇದು 13398 ಉಡಾವಣೆ ಮಾಡಿದ್ದು ಬರೋಬ್ಬರಿ 118445 ಗಂಟೆ ಕ್ರಮಿಸಿದ. ಇದು 6 ಏಪ್ರಿಲ್ 2020ರಂದು ತನ್ನ ಕೊನೆಯ ಉಡಾವಣೆ ಮಾಡಿತ್ತು. ಅಲ್ಲಿಂದ ನಂತರ ಇದು ನಿಂತಲ್ಲಿಯೇ ಇದ್ದು, ಇದನ್ನು ಗುಜೀರಿಗೆ ಹಾಕುವ ಯೋಚನೆ ಮಾಡಿತ್ತು ಕಂಪನಿ . ಆಗಲೇ ಹಾರ್ವೆ ಅವರು 1 ಪೌಂಡ್ ಎಂದರೆ 101 ಕೊಟ್ಟು ಖರೀದಿಸಿದ್ದರು.
ಈ ವಿಮಾನವನ್ನು ಮಿನಿ ಬಾರ್ ಆಗಿ ಮಾಡಿದ್ದರು ಹಾರ್ವೆ ಇದಕ್ಕಾಗಿ ಅವರು 5 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಐಷಾರಾಮಿ ಬಾರ್ ಆಗಿರುವ ಇದರ ಒಂದು ಗಂಟೆಯ ಬೆಲೆ 1ಲಕ್ಷ , ಅಚ್ಚರಿ ಎನಿಸಿದರೂ ಸತ್ಯ ಇದು. ಅಷ್ಟರ ಮಟ್ಟಿಗೆ ಐಷಾರಾಮಿ ಅನುಭವ ನೀಡುತ್ತದೆ ಇದು. ಇದೀಗ ಇವರು ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ ಇವರು. ಹೌದು ಅದೇನೇ ಆಗಲಿ ಇವರ ಈ ವಿಭಿನ್ನ ಯೋಜನೆಯಿಂದಾಗಿ ಈ ಯಶಸ್ಸು ಕಂಡಿದ್ದಾರೆ ಇವರು .