ಗೃಹಿಣಿಯರು ಕಾಲುಂಗುರ ಹಾಗು ಕರಿಮಣಿಯೇಕೆ ಧರಿಸಬೇಕು? ನಮ್ಮ ಸನಾತನ ಸಂಸ್ಕೃತಿಯಲ್ಲಿ ಇದರ ಮಹತ್ವವೇನು?

290

ನಮ್ಮ ರಾಮಾಯಣ ಕಾಲದಲ್ಲಿ ಗೃಹಿಣಿಯರಿಗೆ ಮಾಂಗಲ್ಯವಾಗಲಿ ಕಾಲುಂಗುರಗಳಾಗಲಿ ಕರಿಮಣಿಗಳಾಗಲೀ, ಇರಲಿಲ್ಲ ಇದನ್ನು ಕೇಳಿದರೆ ನಮ್ಮ ಮನಸ್ಸು ಸ್ವಲ್ಪ ಗೊಂದಲವಾಗುತ್ತದೆ. ಆದರೂ ಇದು ಸತ್ಯ. ತಾಳಿ’ ಎನ್ನುವುದು ಆರಂಭವಾಗಿದ್ದು ಮೊದಲು ದ್ರಾವಿಡ ದೇಶದಲ್ಲಿ, (ತಮಿಳರಲ್ಲಿ ಪ್ರಾಚೀನ ಕಾಲದಲ್ಲಿ ಆರ್ಯರಿಗೆ ವಿವಾಹ ವಿಧಿಯಲ್ಲಿ ತಾಳಿಯನ್ನು ಕಟ್ಟುವ ಪದ್ದತಿಯಿಲ್ಲ. ರಾಮಾಯಣ ಭಾರತಾದಿಗಳಲ್ಲಿ ತಾಳಿಯ ಪ್ರಸಂಗವೇ ಇಲ್ಲ. ಈಗಲೂ ಆರ್ಯ ಜಾತಿಗಳಲ್ಲಿ ಜನರು ತಾಳಿಯನ್ನು ಕಟ್ಟುವುದಿಲ್ಲ. ತಾಳಿಯ ಸಂಪ್ರದಾಯವು ದ್ರಾವಿಡ ರದ್ದು. (ಆಂದ್ರ, ಕರ್ನಾಟಕ, ಕೇರಳ, ತಮಿಳ ದೇಶದವರು ದ್ರಾವಿಡರು, ವಿಂದ್ಯಾ ಮಹಾಪರ್ವತವು ಆರ್ಯ ದ್ರಾವಿಡರಿಗೆ ಸೇರಿದ್ದ ಕಾಲದಲ್ಲಿ ಇದು ಜಾರಿಗೆ ಬಂದಿದೆ.”

ಯಾನ್ತೆವಂ ಗೃಹಿಣೀಪದಂಯುವತಿಯೋ :ವಾಮಾಕುಲಸ್ಯಾದಯಃ ಎಂದಿದ್ದಾನೆ ಮಹಾಕವಿ ಕಾಳಿದಾಸ, ಅಂದರೆ ಗೃಹಿಣಿ ಪಟ್ಟವನ್ನು ನಿರ್ವಹಿಸುವುದು ನಿಭಾಯಿಸುವುದು ಸುಲಭತರವಾದ ಕೆಲಸವಲ್ಲ. ಹಿತ ವಿಹಿತಗಳು ತಿಳಿಯಬೇಕು ಮಾಡಬಹುದಾದ ಮಾಡಬಾರದ ಕೆಲಸಗಳ ಮಾಹಿತಿ ಇರಬೇಕು. ಕೆಲವೊಂದು ವಿಷಯಗಳಲ್ಲಿ ಮೂಕಿ ಯಂತಿರಬೇಕು . ಕೆಲವೊಂದು ವಿಷಯಗಳಲ್ಲಿ ಜಾಣತನವಿರಬೇಕು ಪತಿ ಮನೆಯ ವಿಷಯಗಳನ್ನು ತವರು ಮನೆಯಲ್ಲಿ ಹೇಳಬಾರದು. ತವರಿನವರ ಗುಣಗಾನವನ್ನು ಪತಿ ಮನೆಯವರ ಮುಂದೆ ಮಾಡ ಬಾರದು ಪರ ಪುರುಷರು ಸೋದರ ಸಂಬಂಧ ದವರಾದರೂ ಏಕಾಂತದಲ್ಲಿ ಇರಬಾರದು. ಪತಿ ಕಡೆಯ ಬಂಧುಗಳನ್ನು ಆದರ ದಿಂದ ನೋಡಬೇಕು. ಎಲ್ಲರಿಗೂ ತಾಯಿಯಾಗಬೇಕು. ಶಾಂತಿ ಸಹನೆಗಳ ಸಾಕಾರವಾಗಬೇಕು. ಗೃಹಿಣಿ ಧರ್ಮವೆಂಬುದು ಒಂದು ರೀತಿಯ ತಪಸ್ಸಿನಂತೆ ನಿಜ! ಗೃಹಿಣಿ ಧರ್ಮದಲ್ಲಿರುವ ಮಹಿಳೆ ಯರನ್ನು ಪರ ಪುರುಷರು ತಲೆಬಾಗಿಸಿ ನೋಡಿದರೂ ತಲೆಯೆತ್ತಿ ನೋಡಿದರೂ ಇವಳು ಮತೊಬ್ಬರ ಆರ್ಧಾಂಗಿ| ಎಂದು ತಿಳಿಯಲಿಕ್ಕೆ.

ಜಲಜ

ಹಾಗೆಯೇ ಅನ್ಯ ಪುರುಷರೆಲ್ಲರೂ ಕಾಲುಂಗುರ ಕರಿಮಣಿ ಧರಿ ಸಿರುವ ಹೆಣ್ಣನ್ನು ಕಾಮದೃಷ್ಟಿಯಿಂದ ನೋಡುವುದಾಗಲೀ ಹಾಸ್ಯೊ ಕ್ತಿಗಳನ್ನು ಆಡುವುದಾಗಲಿ ಕಾಮ ಸಂದೇಶ ಕ್ರಿಯೆಗಳನ್ನು ಮಾಡು ವುದಾಗಲಿ, ಮಹಾ ಪಾಪವಾಗುತ್ತದೆ ಎಂಬ ಸಂಕೇತ ಸೂಚಕಗಳೇ ಈ ಕಾಲುಂಗುರ ಕರಿಮಣಿಗಳು. ಹೆಣ್ಣಿನ ಮುಖ ನೋಡಿದ ಕೂಡಲೇ ಕರಿಮಣಿಗಳು ಕಾಣಿಸಬೇಕು. ಇದರ ಪ್ರತೀಕವಾಗಿ ಗೃಹಿಣಿಯರು ಬೈತಲೆಗೆ ಕುಂಕುಮವನ್ನು ಸಹ ಹಚ್ಚುತ್ತಾರೆ ಪರ ಪುರುಷರು, ಗೃಹಿಣಿ ಜನರನ್ನು ಕಾಮದ ದೃಷ್ಟಿ ಯಿಂದ ನೋಡಬಯಸಿದರೂ ಮಾಂಗಲ್ಯ ಕರಿಮಣಿ ಕಾಲುಂಗುರ ಗಳನ್ನು ನೋಡಿದ ಕೂಡಲೇ ಕಾಮ ವಿಕಾರವು ಕಡಿಮೆ ಯಾಗು ತ್ತದೆಂದು ಹಿರಿಯರು ಕಲಿಯುಗ ಧರ್ಮ ಅನುಗುಣವಾಗಿ ಈ ಆಚಾರವನ್ನು ಕಲ್ಪಿಸಿದ್ದಾರೆ.‌ ಅವರ ಮೇಧೋಶಕ್ತಿಗೆ ವಂದನೆ ಅಭಿವಂದನೆಯನ್ನು ನಾವು ಸಲ್ಲಿಸಬೇಕು.

Leave A Reply

Your email address will not be published.