ಗ್ಯಾಸ್ ಸ್ಟವ್ ಚಿಂತೆ ಇಲ್ಲ ಪ್ರತಿ ತಿಂಗಳು ಕರೆಂಟ್ ಬಿಲ್ ಕಟ್ಟಬೇಕು ಅನ್ನೋ ಟೆನ್ಶನ್ ಇಲ್ಲ. ಭಾರತದ ಈ ಹಳ್ಳಿಯ ಪ್ರತಿ ಮನೆಯಲ್ಲಿದೆ ಸೋಲಾರ್ ವ್ಯವಸ್ಥೆ!

459

ಹಿಂದಿನ ದಿನಗಳಲ್ಲಿ ಒಂದು ಊರಿನ ಹೆಸರನ್ನು ಆ ಊರಿನಲ್ಲಿ ಹೆಚ್ಚು ಹೆಸರು ಮಾಡಿದ ವ್ಯಕ್ತಿಯ ಹೆಸರನ್ನೇ ಊರಿಗೆ ನಾಮಕರಣ ಮಾಡುತ್ತಿದ್ದರು. ಆ ಊರನ್ನು ಆ ಮಹಾನ್ ವ್ಯಕ್ತಿಗಳ ಕರ್ಮಭೂಮಿ ಎಂದು ಕೂಡ ಹೆಸರುವಾಸಿಯಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಆ ಊರಿನಲ್ಲಿ ಎಷ್ಟು ಹೆಚ್ಚಿನ ಸೌಲಭ್ಯ ಹಾಗು ಆಧುನಿಕವಾಗಿದೆ ಅದರ ಮೇಲೆ ಎಲ್ಲ ಕಡೆ ಚರ್ಚೆ ಆಗುತ್ತದೆ. ಇಂದು ನಾವು ಇಂತಹ ಒಂದು ಒಳ್ಳೆ ಅಭಿವೃದ್ಧಿ ಹೊಂದಿದ ಹಳ್ಳಿ ಬಗ್ಗೆ ಹೇಳುತ್ತೇವೆ. ಹಳೆಯ ಸಂಪ್ರದಾಯ ಬಿಟ್ಟು ಆಧುನಿಕತೆಯತ್ತ ಸಾಗಿದೆ ಹಳ್ಳಿ.

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಬಾಂಚಾ ಗ್ರಾಮ ದ ಬಗ್ಗೆ ಹೇಳುತ್ತಿದ್ದೇವೆ. ಇದು ಸೋಲಾರ್ ಗ್ರಾಮ ಎಂದೇ ಪ್ರಸಿದ್ದಿ ಪಡೆದಿದೆ. ಇದು ದೇಶ ಮತ್ತು ಪ್ರಪಂಚದ ಮೊದಲ ಆದರ್ಶ ಗ್ರಾಮವಾಗಿದೆ. ಪ್ರತಿ ಮನೆಯಲ್ಲೂ ಸೋಲಾರ್ ಓಲೆ ಇರುತ್ತದೆ ಹಾಗು ಆಹಾರ ಪಧಾರ್ಥ ಅದರಲ್ಲೇ ತಯಾರು ಮಾಡಲಾಗುತ್ತದೆ. ವಿದ್ಯುತ್ ವಿಚಾರದಲ್ಲಂತೂ ಗ್ರಾಮ ಸಂಪೂರ್ಣ ಸ್ವಾವಲಂಭನೆ ಆಗಿದೆ. ಮಕ್ಕಳು ಕೂಡ ಅಧ್ಯಯನ ಸೌರ ಚಾಲಿತ ವಿದ್ಯುತ್ ಬೆಳಕಿನಲ್ಲೇ ಮಾಡುತ್ತಾರೆ. ಇಲ್ಲಿನ ಜನರು ಪರಿಸರವನ್ನು ಗಮನದಲ್ಲಿಟ್ಟು ಸಂಪೂರ್ಣ ಆಹಾರ ಸೌರಚಾಕ್ತಿ ಮೂಲಕ ಮಾಡುತ್ತಾರೆ.

ಮಧ್ಯ ಪ್ರದೇಶದ ಈ ಗ್ರಾಮವು ಜನ ಜಾಗೃತಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಗಾಗಿಯೇ ಆದರ್ಶ ಗ್ರಾಮ ಎನ್ನುವ ಬಿರುದು ಪಡೆದಿದೆ. ಈ ಗ್ರಾಮದ ಗ್ರಾಮಸ್ಥರು ಕೋರೋಣ ತಡೆಗಟ್ಟಲು ಜನತಾ ಕರ್ಫ್ಯೂ ವಿಧಿಸಿ ಹೊರಗಿನವರು ಬರದಂತೆ ತಡೆದಿದ್ದಾರೆ. ಜನರು ಕೂಡ ತುರ್ತು ಕೆಲಸಕ್ಕೆ ಮಾತ್ರ ಹೊರಗೆ ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಯುವಕರ ತಂಡ ರಚಿಸಲಾಗಿತ್ತು. ಪ್ರತಿ ಮನೆಗೂ ಮಾರುಕಟ್ಟೆ ಇಂದ ಅಗತ್ಯ ವಸ್ತುಗಳನ್ನು ತರುವ ಜವಾಬ್ದಾರಿ ಈ ಯುವಕರಿಗೆ ವಹಿಸಲಾಗಿತ್ತು. ಅದೇ ಕಾರಣಕ್ಕೆ ಈ ಗ್ರಾಮವು ಇನ್ನು ಕೂಡ ಕೋರೋಣ ದಿಂದ ರಕ್ಷಿಸಲ್ಪಟ್ಟಿದೆ. ಅಲ್ಲಿನ ಮುಖ್ಯಮಂತ್ರಿಗಳು ಕೂಡ ಆ ಗ್ರಾಮದ ಬಗ್ಗೆ ಟ್ವೀಟ್ ಮಾಡುವ ಮೂಲಕ ಶ್ಲಾಘಿಸಿದ್ದಾರೆ.

೨೦೧೬-೧೭ ರಲ್ಲಿ ONGC ಹಾಗು ಭಾರತ ಸರಕಾರ ಒಂದು ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಸೋಲಾರ್ ಸ್ಟವ್ ಅನ್ನು ತಯಾರಿಸಬೇಕಿತ್ತು. ಇಲ್ಲಿನ ವಿದ್ಯಾರ್ಥಿಗಳು ಅದನ್ನು ತಯಾರಿಸಿ ಪ್ರಥಮ ಬಹುಮಾನ ಪಡೆದಿದ್ದರು. ಅದಾದ ನಂತರ ಮುಂಬೈ IIT ನೊಂದಿಗೆ ಮಾತುಕತೆ ನಡೆಸಿ ಆ ಗ್ರಾಮದ ಎಲ್ಲ ಮನೆಗಳಿಗೂ ಸೋಲಾರ್ ಸ್ಟವ್ ಒದಗಿಸಲಾಯಿತು. ಇಂದು ಪ್ರತಿ ಕುಟುಂಬವು ಕೂಡ ಸೋಲಾರ್ ಸ್ಟವ್ ಮೂಲಕ ಎರಡು ಹೊತ್ತಿನ ಊಟ ಯಾವುದೇ ಸಮಸ್ಯೆ ಇಲ್ಲದೆ ತಯಾರಿಸುತ್ತಾರೆ.

ಈ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ತಗಲುವ ಖರ್ಚು ೭೦ ಸಾವಿರ ತನಕ ಆಗುತ್ತದೆ. ಆದರೆ ONGC ಬುಡಕಟ್ಟು ಪ್ರದೇಶವಾದ ಈ ಗ್ರಾಮದಲ್ಲಿ CSR ಇಂದ ಹಣ ಪಡೆದು ಸೋಲಾರ್ ಪ್ಯಾನೆಲ್ ೨೦೧೮ ರ ಒಳಗೆ ಅಳವಡಿಸಲಾಯಿತು. ಈ ಸೌರ ಶಕ್ತಿ ಸಂಪೂರ್ಣವಾಗಿ ಉಪಯೋಗಿಸುತ್ತಿರುವ ಇಲ್ಲಿನ ಜನತೆ ಇದೀಗ ನೀರಿನ ಸಂರಕ್ಷಣೆಗೆ ಪ್ರತಿ ಮನೆಯಲ್ಲಿ ಸೊಕಿಂಗ್ ಹೊಂಡಗಳನ್ನು ಮಾಡಿದೆ. ಛಾವಣಿಗಳಲ್ಲಿ ಸಂಗ್ರಹವಾದ ನೀರು ನೇರವಾಗಿ ಹೊಂಡಗಳಿಗೆ ಸೇರುತ್ತದೆ. ೭೪ ಮನೆಗಳಿರುವ ಈ ಗ್ರಾಮದಲ್ಲಿ ಶೇಕಡಾ ೯೦% ರಷ್ಟು ಮನೆಯಲ್ಲಿ ಚಾವಣಿ ನೀರಿನ ಕೊಯ್ಲು ನಡೆಯುತ್ತದೆ.

Leave A Reply

Your email address will not be published.