ಗ್ರಾಹಕರು ಇದುವರೆಗೂ ಓಡೋಡಿ ಹೋಗಿ ರೀಚಾರ್ಜ್ ಮಾಡಿಸಿಕೊಳ್ಳುತ್ತಿರುವ ಜಿಯೋ ಪ್ಲಾನ್ ಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕಡಿಮೆ ದುಡ್ಡು, ಹೆಚ್ಚು ಲಾಭ ಇದು ಈಗಿನ ಜನಮಾನಸ ನೀರಿಕ್ಷಿಸುತ್ತಿರುವುದು. ಪ್ರತಿಯೊಂದರಲ್ಲಿಯೂ ಹೆಚ್ಚು ಲಾಭವನ್ನು ನೀರಿಕ್ಷಿಸುತ್ತಾರೆ. ಅದೇ ರೀತಿ ಟೆಲಿಕಾಂ ಕಂಪನಿಗಳು ಸಹ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹೊಸ ಹೊಸ ಆಫರ್ ಗಳನ್ನು ನೀಡುತ್ತಿರುತ್ತವೆ. ಅದೇ ರೀತಿ ಜಿಯೋ ಕೂಡ ಕೆಲವು ಗ್ರಾಹಕ ಸ್ನೇಹಿ ಆಫರ್ ಗಳನ್ನು ಪರಿಚಯಿಸಿದೆ. ಬನ್ನಿ ಆ ಆಫರ್ ಗಳು ಯಾವುವು ಎಂಬುದನ್ನು ತಿಳಿಯೋಣ.
1.ಜಿಯೋ 299 ಪ್ಲಾನ್ : ಇದು 28 ದಿನದ ವ್ಯಾಲಿಡಿಟಿ ಇರುವ ರೀಚಾರ್ಜ್ ಪ್ಲಾನ್ ಆಗಿದೆ. ಪ್ರತಿದಿನ 2ಜಿಬಿ ಡೇಟಾ ರೀತಿ ಒಟ್ಟು 56ಜಿಬಿ ಡೇಟಾ ಉಚಿತವಾಗಿ ಪಡೆಯಬಹುದು. ಜಿಯೋ ದಲ್ಲಿ ದೊರೆಯುವ ಇತರ ಅಪ್ಲಿಕೇಶನ್ಗಳನ್ನು ಸಹ ಉಚಿತವಾಗಿ ಆನಂದಿಸಬಹುದಾಗಿದೆ. 2.ಜಿಯೋ 333 ಪ್ಲಾನ್ : ಇದು ಸಹ 28 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲಾನ್ ಆಗಿದೆ. ಪ್ರತಿದಿನ 1.5 ಜಿಬಿ ಡೇಟಾ ಉಚಿತವಾಗಿ ಪಡೆಯಬಹುದು. ಅದಲ್ಲದೇ ಅನಿಯಮಿತ ಕರೆಗಳು ಹಾಗೂ ಪ್ರತಿದಿನ 100 ಎಸ್.ಎಮ್.ಎಸ್ ಸಹ ದೊರೆಯಲಿದೆ. ಇದರ ಜೊತೆ ಮೂರು ಒಟಿಟಿ ಪ್ಲಾಟ್ ಫಾರಂ ಆದ ಡಿಸ್ನಿ ಹಾಟ್ ಸ್ಟಾರ್ ನ ಚಂದಾದಾರಿಕೆ ದೊರೆಯಲಿದೆ.
3.ಜಿಯೋ 499 ಪ್ಲಾನ್ : ಇದು ಸಹ 28 ದಿನಗಳ ವ್ಯಾಲಿಡಿಟಿ ಇರುವ ರೀಚಾರ್ಜ್ ಪ್ಲಾನ್ ಆಗಿದೆ. ಪ್ರತಿದಿನ 2ಜಿಬಿ ಡೇಟಾ ಉಚಿತವಾಗಿ ದೊರೆಯಲಿದೆ. ಜೊತೆಗೆ ಅನಿಮಿಯತ ಕರೆಗಳು ಸಹ ಹಾಗೂ 100 ಎಸ್.ಎಮ್.ಎಸ್ ಗಳು ಇವೆ. ಇದರ ಜೊತೆ ಒಂದು ವರ್ಷಗಳ ಕಾಲ ಡಿಸ್ನಿ ಹಾಟ್ ಸ್ಟಾರ್ ನ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ. 4.ಜಿಯೋ 666 ಪ್ಲಾನ್ : ಇದು 84 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲಾನ್ ಆಗಿದೆ. ಪ್ರತಿದಿನ 1.5ಜಿಬಿ ಡೇಟಾ ಉಚಿತವಾಗಿ ದೊರೆಯಲಿದೆ. ಜಿಯೋ ದ ಇತರ ಸೇವೆಗಳು ಸಹ ಮುಕ್ತವಾಗಿ ಲಭ್ಯವಿದೆ.
5.ಜಿಯೋ 719 ಪ್ಲಾನ್ : ಇದು ಸಹ 84 ದಿನಗಳ ರೀಚಾರ್ಜ್ ಪ್ಲಾನ್ ಆಗಿದೆ. ಪ್ರತಿದಿನ 2ಜಿಬಿ ಡೇಟಾ ಉಚಿತವಾಗಿ ದೊರೆಯಲಿದೆ. ಅದಲ್ಲದೇ ಪ್ರತಿದಿನ 100 ಎಸ್.ಎಮ್.ಎಸ್ ಜೊತೆ ಅನಿಯಮಿತ ಕರೆಗಳು ಲಭ್ಯವಿದೆ. ಇದಲ್ಲದೆ ಜಿಯೋ ಅಪ್ಲಿಕೇಶನ್ ನ ಇತರ ಸೇವೆಗಳು ಸಹ ಲಭ್ಯವಿದೆ. 6.ಜಿಯೋ 2999 ಪ್ಲಾನ್ : ಇದು 365 ದಿನಗಳ ರೀಚಾರ್ಜ್ ಪ್ಲಾನ್ ಆಗಿದೆ. ಪ್ರತಿ ದಿನ 2.5ಜಿಬಿ ಡೇಟಾ ಉಚಿತವಾಗಿ ದೊರೆಯಲಿದೆ. ಇದಲ್ಲದೆ ಅನಿಮಿಯತ ಕರೆಗಳ ಜೊತೆ ಪ್ರತಿ ದಿನ 100 ಉಚಿತ ಎಸ್.ಎಮ್.ಎಸ್ ದೊರೆಯಲಿದೆ. ಹಾಗೂ ಒಂದು ವರ್ಷದ ಉಚಿತ ಡಿಸ್ನಿ ಹಾಟ್ ಸ್ಟಾರ್ ನ ಚಂದಾದಾರಿಕೆ ದೊರೆಯಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.