ಚಾಕಲೇಟ್ ಉದ್ಯಮದತ್ತ ದೃಷ್ಟಿ ಹಾಯಿಸಿದ ಅಂಬಾನಿ. ಮಾರುಕಟ್ಟೆಗೆ ಬರಲಿದೆ ರಿಲಯನ್ಸ್ ಚಾಕಲೇಟ್? ವಿದೇಶಿ ಕಂಪನಿಗಳಿಗೆ ಕೊಡಲಿದೆಯಾ ಠಕ್ಕರ್?
ಭಾರತದಾದ್ಯಂತ ಟೆಲಿಕಾಂ ಕ್ಷೇತ್ರದಲ್ಲಿ ಹಾಗು ಎನರ್ಜಿ ಕ್ಷೇತ್ರದಲ್ಲಿ ಒಂದು ಹೊಸ ಅಲೆ ತಂದ ನಂತರ ಇದೀಗ ಮುಕೇಶ್ ಅಂಬಾನಿ ಚಿತ್ತ ಮಿಠಾಯಿ ಮರುಕಟ್ಟೆಗಳತ್ತ ತಿರುಗಿದೆ. ರಿಲಯನ್ಸ್ ರೆಟೈಲ್ಸ್ ದೇಶದ ೫೦ ಮಿಠಾಯಿ ತಯಾರಿಕಾ ಕಂಪನಿಗಳ ಜೊತೆಗೆ ಒಂದು ಪಾರ್ಟ್ನರ್ಶಿಪ್ ಮಾಡಿಕೊಂಡಿದೆ ಎಂದು ಸುದ್ದಿ ಹರಡುತ್ತಿದೆ. ರಿಲಯನ್ಸ್ ರಿಟೇಲ್ ತನ್ನ ನೆಟ್ವರ್ಕ್ ಮೂಲಕ ಈ ಸ್ವೀಟ್ ತಯಾರಿಕಾ ಕಂಪನಿಗಳಿಗೆ ದೇಶದಾದ್ಯಂತ ಅತಿ ವೇಗವಾಗಿ ಈ ಸ್ವೀಟ್ ಗಳನ್ನು ಪೂರೈಕೆ ಮಾಡುವ ಉದ್ದೇಶ ಇಟ್ಟುಕೊಂಡಿದೆ. ದೇಶದ ಸ್ವೀಟ್ ಗಳಾದ ಪೇಡ, ಬರ್ಫಿ ಲಡ್ಡು ಇನ್ನು ಅನೇಕ ದೇಶಿಯ ಸಿಹಿ ಉತ್ಪನ್ನಗಳ ಮೇಲೆ ತನ್ನ ದೃಷ್ಟಿ ನೆಟ್ಟಿದ್ದು ವಿದೇಶಿ ಕಂಪನಿ ಗಳಾದ ನೆಸ್ಲೆ, ಕಿಟ್ ಕ್ಯಾಟ್ ನಂತಹ ಕಂಪನಿಗಳಿಗೆ ನೇರ ಸ್ಪರ್ಧೆ ನೀಡಲು ತಯಾರಿ ನಡೆಸುತ್ತಿದೆ.
ಈ ದೇಶಿಯ ಸ್ವೀಟ್ ಗಳು ರಿಲಯನ್ಸ್ ಸ್ಟೋರ್, ಸ್ಮಾರ್ಟ್ ಸ್ಟೋರ್, ಜಿಒ ಮಾರ್ಟ್ ನಂತಹ ರಿಟೇಲ್ ಸ್ಥಳಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ದೇಶಿಯ ಸ್ವೀಟ್ ತಯಾರಕ ಕಂಪನಿಗಳಿಗೆ ಒಂದು ಮಾರುಕಟ್ಟೆ ಸ್ಥಳ ಒದಗಿಸುತ್ತಿದೆ ರಿಲಯನ್ಸ್. ರಿಲಯನ್ಸ್ ದೇಶಿಯ ಸಿಹಿ ತಿನಿಸುಗಳನ್ನು ಹೆಚ್ಚು ಪ್ರೋತ್ಸಾಹ ಮಾಡಲು ಬಯಸುತ್ತಿದೆ ಅಂತೇ, ರಿಲಯನ್ಸ್ ನ ಈ ನಡೆಯಿಂದ ದೇಶಿಯ ಸಿಹಿ ಕಂಪನಿಗಳ ಉದ್ಯಮ ೧೦ ಪಟ್ಟು ಹೆಚ್ಚಾಗಲಿದೆ ಎಂದು ರಿಲಯನ್ಸ್ ರಿಟೇಲ್ ಮುಖ್ಯ ಕಾರ್ಯನಿರ್ವಾಹಕ ದಾಮೋದರ್ ಮಾಲ್ ಹೇಳಿದ್ದಾರೆ.
ಭಾರತದಲ್ಲಿ ಚಾಕಲೇಟ್ ಉದ್ಯಮ ಸುಮಾರು ೨.೨ ಶತಕೋಟಿ ಡಾಲರ್ ನದ್ದಾಗಿದೆ. cadburry ಹಾಗು ನೆಸ್ಲೆ ನಂತಹ ವಿದೇಶಿ ಕಂಪನಿ ಗಳು ಈ ಮಾರುಕಟ್ಟೆಯಲ್ಲಿ ಪ್ರಾಭಲ್ಯ ಸಾಧಿಸಿವೆ. ಇದರ ಎದುರು ಭಾರತದ ಮಿಠಾಯಿ ಹಾಗು ಲಡ್ಡುಗಳಿಗೆ ಬೇಡಿಕೆ ಕುಸಿಯುತ್ತಿದೆ. ಅಲ್ಲದೆ ದೊಡ್ಡ ಕಂಪನಿಗಳ ಜೊತೆಗೆ ಉದ್ಯಮದಲ್ಲಿ ಸ್ಪರ್ಧೆ ಮಾಡಲು ದೇಶಿಯ ಕಂಪನಿಗಳಿಗೆ ಸಾಧ್ಯವಾಗುತ್ತಿಲ್ಲ. ಇದೀಗ ರಿಲಯನ್ಸ್ ಈ ಮಾರುಕಟ್ಟೆಗೆ ಕಾಲಿಟ್ಟಿದ್ದು ದೇಶಿಯ ಉತ್ಪನ್ನಗಳಿಗೆ ತುಸು ಚೇತರಿಕೆ ಕಾಣಬಹುದು ಎಂದು ಹೇಳಲಾಗುತ್ತಿದೆ. ಅದೇ ರೀತಿ ವಿದೇಶಿ ಕಂಪನಿಗಳ ಆಟಕ್ಕೆ ಸ್ವಲ್ಪ ಬ್ರೇಕ್ ಬೀಳಲಿದೆ ಎಂದು ಕೂಡ ಹೇಳಲಾಗುತ್ತಿದೆ.