ಚಿಕನ್ ಆರ್ಡರ್ ಮಾಡಿದವನಿಗೆ ಬಂತು ಬರಿ ಮೂಳೆ ಮೂಳೆ: ಜೊತೆಗೊಂದು ಪತ್ರ ಕೂಡ ಬಂದಿದೆ. ಡೆಲಿವರಿ ಬಾಯ್ ಏನು ಹೇಳಿದ್ದಾನೆ ಗೊತ್ತೇ?
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಆನ್ ಲೈನ್ ನಲ್ಲಿ ಊಟ ಆರ್ಡರ್ ಮಾಡಿಕೊಳ್ಳುವ ಅಭ್ಯಾಸ ಹೊಂದಿದ್ದಾರೆ. ಅದರಲ್ಲೂ ಮನೆಯಿಂದ ಹೊರಗೆ ಉಳಿದಿರುವವರು ಹೀಗೆ ಮಾಡುವುದು ಹೆಚ್ಚು. ಕೆಲವೊಮ್ಮೆ ಮನೆಯಲ್ಲಿದ್ದು, ಅಡುಗೆ ಮಾಡಲು ಬೇಸರ ಆದಾಗಲೂ ಜೋಮ್ಯಾಟೋ, ಸ್ವಿಗ್ಗಿ ಇಂತಹ ಆಪ್ ಗಳಲ್ಲಿ ಊಟ ಆರ್ಡರ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಫುಡ್ ಡೆಲಿವರಿ ವಿಚಾರದಲ್ಲಿ ಕೆಲವು ವಿಭಿನ್ನ ಘಟನೆಗಳು ನಡೆಯುವುದನ್ನು ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಇತ್ತೀಚೆಗೆ ಇಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಆನ್ ಲೈನ್ ನಲ್ಲಿ ಚಿಕನ್ ಆರ್ಡರ್ ಮಾಡಿದ್ದು, ಡೆಲಿವರಿ ಆದಾಗ, ಬಾಕ್ಸ್ ನಲ್ಲಿ ಮೂಳೆಗಳು ಮಾತ್ರ ಕಾಣಿಸಿದೆ, ಅದರ ಜೊತೆಗೆ ಡೆಲಿವರಿ ಬಾಯ್ ಒಂದು ಲೆಟರ್ ಸಹ ಇಟ್ಟಿದ್ದಾನೆ. ಆತನೇ ಚಿಕನ್ ಸೇವಿಸಿದ್ದಾಗಿ ಪತ್ರದಲ್ಲಿ ಬರೆದಿದ್ದು, ಆತನ ದುಃಖವನ್ನು ಬರೆದುಕೊಂಡಿದ್ದಾರೆ. ಚಿಕನ್ ಮೂಳೆಗಳು ಕಾತರ ಕಾಣಿಸಿದ್ದು, ಅದರ ಜೊತೆಗಿದ್ದ ಸಾಫ್ಟ್ ಡ್ರಿಂಕ್ ಹಾಗೆಯೇ ಸರಿಯಾಗಿತ್ತು. ಜೊತೆಗೆ ಡೆಲಿವರಿ ಬಾಯ್ ಬರೆದಿರುವ ಪತ್ರ ಸಹ ಆರ್ಡರ್ ಜೊತೆಗಿತ್ತು, ತನಗೆ ಬಹಳ ಹಸಿವಾದ ಕಾರಣ ಚಿಕನ್ ತಿಂದಿರುವುದಾಗಿ ಆತ ಪತ್ರದಲ್ಲಿ ಬರೆದಿದ್ದಾನೆ.
ಜೊತೆಗೆ, ತಾವು ನನ್ನ ಆಹಾರಕ್ಕೆ ಈಗಾಗಲೇ ಹಣ ಪಾವತಿ ಮಾಡಿದ್ದೀರಿ ಎಂದು ಭಾವಿಸುತ್ತೇನೆ. ಮಾನಸಿಕವಾಗಿ ನಾನು ತುಂಬಾ ಕುಗ್ಗಿ ಹೋಗಿದ್ದು, ಈ ಕೆಲಸವನ್ನು ಸಹ ಬಿಡುತ್ತಿದ್ದೇನೆ..ಎಂದು ಪತ್ರದಲ್ಲಿ ಬರೆದಿದ್ದಾನೆ. ಆ ಬಾಕ್ಸ್ ಮತ್ತು ಡೆಲಿವರಿ ಬಾಯ್ ಬರೆದಿದ್ದ ಲೆಟರ್ ಪಡೆದ ಆರ್ಡರ್ ಮಾಡಿದ ವ್ಯಕ್ತಿಗೆ ಮೊದಲಿಗೆ ಕೋಪ ಬಂದು, ನಂತರ ಏನು ಮಾಡಬೇಕೆಂದು ತಿಳಿಯದೆ, ಇದನ್ನು ಟಿಕ್ ಟಾಕ್ ವಿಡಿಯೋ ಮಾಡಿ, ಅಪ್ಲೋಡ್ ಮಾಡಿದ್ದಾನೆ, ನಾನು ಏನು ಮಾಡಬೇಕು ಎಂದು ಜನರನ್ನೇ ಕೇಳಿದ್ದು, ನೆಟ್ಟಿಗರು ತಮಾಷೆಯ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಆಗಸ್ಟ್ ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋ ಈಗಾಗಲೇ 2 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಪಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.