ಚಿನ್ನದಿಂದ ಮಾಡಿದ ವಿಶ್ವದ ಮೊದಲ ಹೋಟೆಲ್ ಎಲ್ಲಿದೆ ಗೊತ್ತೇ? ರೂಮ್ ಇಂದ ಹಿಡಿದು ಟಾಯ್ಲೆಟ್ ವರೆಗೂ ಎಲ್ಲ ಬಂಗಾರವೇ.

405

ಇಂದಿನ ವೇಗವಾಗಿ ಸಾಗುವ ಸಮಯದಲ್ಲಿ ಜನರು ಸಮಯ ಹೊಂದಿಸಿ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುವುದೇ ಒಂದು ದೊಡ್ಡ ಸಮಸ್ಯೆ. ಮನೆಯಲ್ಲಿ ಬಂದು ಜನರು ಇರುವುದೇ ಕಡಿಮೆ ಎಂದರೆ ಸಮಯದ ಅಭಾವ ಮನುಷ್ಯನಿಗೆ ಎಷ್ಟಿದೆ ಎಂದು ಅರಿವಾಗುತ್ತದೆ. ಅದೇ ರೀತಿ ಇರಲು, ಊಟ ಮಾಡಲು ಕೂಡ ಹೋಟೆಲ್ ಗೆ ಹೋಗುವುದು ಇಂದು ಸಾಮಾನ್ಯ ಆಗಿ ಬಿಟ್ಟಿದೆ.

ನೀವು ಕೂಡ ರೆಸ್ಟೋರೆಂಟ್ ಹಾಗು ಹೋಟೆಲ್ ಇಂದ ಅನೇಕ ಬಾರಿ ಊಟ ತಿಂಡಿ ಮನೆಗೆ ತಂದಿರುತ್ತೀರಾ. ಹಾಗೇನೇ ಒಂದಲ್ಲದೆ ಅನೇಕ ಹೋಟೆಲ್ ಗಳನ್ನೂ ಕೂಡ ನಿಮ್ಮ ಸುತ್ತ ಮುತ್ತ ನೋಡಿರುತ್ತೀರಾ. ಒಂದು ಹೋಟೆಲ್ ಉತ್ತಮ ಶೈಲಿ ಅಲ್ಲಿದ್ದರೆ ಅದು ಜನರನ್ನು ಆಕರ್ಷಣೆ ಮಾಡುತ್ತದೆ ಹಾಗು ಜನರು ಆ ಹೋಟೆಲ್ ಗೆ ಹೋಗುತ್ತಾರೆ. ಇದರಿಂದ ಹೋಟೆಲ್ ಉದ್ಯಮ ಹೆಚ್ಚುತ್ತದೆ. ಆದರೆ ಇಲ್ಲೊಂದು ಹೋಟೆಲ್ ಸಂಪೂರ್ಣ ಚಿನ್ನಮಯ ಆಗಿದೆ. ಎಂದರೆ ನೀವು ನಂಬಲೇ ಬೇಕು.

ಇತ್ತೀಚಿನ ದಿನಗಳಲ್ಲಿ ಹೋಟೆಲ್ ಗೆ ಬರ್ತ್ ಡೇ ಹಾಗು ಇನ್ನಿತರ ಶುಭ ಸಮಾರಂಭಗಳಿಗೆ ಆಚರಣೆ ಮಾಡಲು ಹೋಗುವುದು ಸಾಮಾನ್ಯವಾಗಿದೆ. ಚಿಕ್ಕ ಪುಟ್ಟ ಪಾರ್ಟಿ ಗಳು ಕೂಡ ಹೋಟೆಲ್ ಗೆ ಹೋಗಿ ತಮ್ಮ ಗೆಳೆಯರು ಹಾಗು ಫ್ಯಾಮಿಲಿ ಜೊತೆ ಸಂಭ್ರಮಿಸುತ್ತಾರೆ. ಹಾಗೇನೇ ಬೇರೆ ಊರಿಗೆ ಬ್ಯುಸಿನೆಸ್ ಅಥವಾ ಸುತ್ತಾಡಲು ಹೋಗುವಾಗ ಹೋಟೆಲ್ ರೂಮ್ ಬುಕ್ ಕೂಡ ಮಾಡುತ್ತೀರ.

ಇಲ್ಲೊಂದು ಹೋಟೆಲ್ ಸಂಪೂರ್ಣ ಚಿನ್ನಮಯವಾಗಿದೆ. ಹಾಗೇನೇ ಆಕರ್ಷಕ ತಾಣ ಕೂಡ ಆಗಿ ಬದಲಾಗಿದೆ. ವಿಯೆಟ್ನಾಮ್ ಎನ್ನುವ ದೇಶದ ರಾಜಧಾನಿ ಹನೋಯ್ ಎನ್ನುವಲ್ಲಿದೆ ಈ ಗೋಲ್ಡನ್ ಹೋಟೆಲ್. ಈ ಹೋಟೆಲ್ ಅಲ್ಲಿರುವ ಬಾಗಿಲು, ಕುರ್ಚಿ, ತಟ್ಟೆ, ಚಮಚ ಅಲ್ಲದೆ ಟಾಯ್ಲೆಟ್ ಗಳು ಕೂಡ ಚಿನ್ನದ ಲೇಪನ ಪಡೆದುಕೊಂಡಿದೆ.

ಈ ಹೋಟೆಲ್ ಅಲ್ಲಿ ಉಳಿಯಲು, ಮೋಜು ಮಾಡಲು ಹೋಗಬೇಕೆಂದು ಅನಿಸಿದರೆ ಇಲ್ಲಿಗೆ ಹೋಗಬಹುದು. ಈ ಹೋಟೆಲ್ ಸುಮಾರು ೨೫ ಅಂತಸ್ತಿನದ್ದಾಗಿದೆ. ಒಟ್ಟಾರೆ ಈ ಹೋಟೆಲ್ ಅಲ್ಲಿ ಸುಮಾರು 400 ರೂಮ್ ಗಳಿವೆ. ವಿಶೇಷವೆಂದರೆ ಇಲ್ಲಿ ಕೆಲಸ ಮಾಡುವ ನೌಕರಿರಿಗೂ ಕೂಡ ಡ್ರೆಸ್ ಕೋಡ್ ಕೆಂಪು ಮತ್ತು ಬಂಗಾರ ಲೇಪನದಿಂದ ಕೂಡಿದೆ.

Leave A Reply

Your email address will not be published.