ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು. ಭಾರತದಲ್ಲಿ ಎಲ್ಲಿ ಸಿಗುತ್ತದೆ? ಇದರ ಬೆಲೆ ಕೇಳಿದರೆ ಶಾಕ್ ಆಗುತ್ತೀರಾ.

268

ಭಾರತೀಯರು ಮಾವಿನ ಹಣ್ಣನ್ನು ಬಹಳ ಇಷ್ಟ ಪಡುತ್ತಾರೆ. ಯಾವುದೇ ತಳಿ ಇರಲಿ ಭಾರತೀಯರಿಗೆ ಮಾವು ಬಹಳ ಪ್ರಿಯ. ಈ ಮಾವನ್ನು ಜ್ಯೂಸ್, ಪದಾರ್ಥ ಹಾಗೂ‌ ಇತರ ಆಹಾರಗಳಾಗಿ ಭಾರತೀಯರಾದ ನಾವು ಬಳಸುತ್ತೇವೆ. ಆದರೆ ನಿಮಗೆ ಗೊತ್ತೆ ಈ ಬೇರೆ ಬೇರೆ ತಳಿಯ ಮಾವುಗಳಲ್ಲಿ ಅತ್ಯಂತ ದುಬಾರಿ ತಳಿಯ ಮಾವು ಯಾವುದು? ಅದರ ಬೆಲೆ ಎಷ್ಟೆಂದು? ಮಿಯಾಜಕಿ ಎನ್ನುವ ಮಾವು ಪ್ರತಿ ಕೆಜಿಗೆ ಬರೋಬ್ಬರಿ ೮,೦೦೦ ದಿಂದ ೨.೭ ಲಕ್ಷ ರೂಪಾಯಿಗಳು. ಈ ಮಾವು ಮೂಲತಃ ಜಪಾನಿನ ಮಿಯಾಜಕಿ ಎನ್ನುವ ಪ್ರದೆಶದ್ದಾಗಿದ್ದು ಅತ್ಯಂತ ದುಬಾರಿ ಹಣ್ಣು ಎಂದು ಕರೆಯಲ್ಪಡುತ್ತದೆ.

ಈ ಮಿಯಾಜಕಿ ಮಾವಿನ ಹಣ್ಣಿಗೆ ಅಷ್ಟು ಬೆಲೆ‌ ಏಕಿದೆ? ಈ ಮಿಯಾಜಕಿ ಮಾವು ಅತೀ ಉತ್ತಮ ಗುಣಮಟ್ಟದ್ದಾಗಿದ್ದು ಇದರ ಗಾತ್ರ ಕೂಡಾ ಬಹಳ ದೊಡ್ಡದಿದೆ. ಈ ಮಾವು ಕೆಂಪು ಹಾಗು ಹಸಿರು ಬಣ್ಣದಾಗಿದ್ದು ನೋಡಲು ಬಹಳ ಸುಂದರ ಕೂಡಾ ಆಗಿದೆ. ಒಂದು ಮಾವಿನ ಹಣ್ಣಿನ ತೂಕ 350 ಗ್ರಾಂ ಇದ್ದರೆ ಇದು ೧೫% ಅಷ್ಟು ಸಕ್ಕರೆಯ ಪ್ರಮಾಣವನ್ನು ಹೊಂದಿರುತ್ತದೆ. ಈ ಮಾವು ಉತ್ಪಾದನೆಗೆ ಸೂರ್ಯನ ಕಿರಣ, ಹಾಗು ಬಹಳ ನೀರಿನ ಅವಶ್ಯಕತೆ ಇರುತ್ತದೆ. ಹಾಗಿದ್ದರೆ ಮಾತ್ರ‌ ಇದರ ಉತ್ಪಾದನೆ ಸಾಧ್ಯವಾಗುತ್ತದೆ. ಇದರ ಉತ್ಪಾದನೆ ಜಪಾನಿನಲ್ಲಿ ೧೯೮೪ ರಲ್ಲಿ ಶುರುವಾಗಿದೆ ಎಂದು‌ ಹೇಳಲಾಗುತ್ತದೆ. ಈ ತಳಿ ಎಪ್ರಿಲ್ ಇಂದ ಆಗಸ್ಟ್‌ವರೆಗೆ ಮಾತ್ರ ಲಭ್ಯವಿರುತ್ತದೆ. ಜಾಸ್ತಿ ಪ್ರಮಾಣದಲ್ಲಿ ಈ ಮಾವಿನ ಹಣ್ಣುಗಳ ಮಾರಾಟ ಮೇ ಹಾಗು ಜೂನ್ ತಿಂಗಳಲ್ಲಿ ನಡೆಯುತ್ತದೆ.

ಈ ತಳಿಯ ಮಾವು ಜಪಾನ್ ಅಲ್ಲದೆ ಫಿಲಿಪೈನ್ಸ್, ತೈಲಾಂಡ್ ಹಾಗು ಭಾರತದಲ್ಲಿ ಬೆಳೆಯಲಾಗುತ್ತಿದೆ. RT ನ್ಯೂಸ್ ವರದಿ ಪ್ರಕಾರ ಭಾರತದ ಮಧ್ಯಪ್ರದೇಶದಲ್ಲಿ ಒಂದು ದಂಪತಿಗಳು ತಮ್ಮ ತೋಟದಲ್ಲಿ ಈ ತಳಿಯ ಮಾವುಗಳನ್ನು ಬೆಳೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ‌ ಕಾವಲಿಗೆ ೪ ಗಾರ್ಡ್‌ಗಳು ಹಾಗು ೭ ನಾಯಿಗಳನ್ನು ಇಟ್ಟಿದ್ದಾರೆ ಎಂಬ ಸುದ್ದಿ ಇಡೀ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಲೇಖನ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.