ಜಾಂಬುವಂತ ಎಂದರೆ ಅಷ್ಟು ಸಾಮಾನ್ಯನಲ್ಲ: ರಾಮಾಯಣ, ಮಹಾಭಾರತದಲ್ಲಿ ಕಾಣಿಸಿಕೊಳ್ಳುವ ಜಾಂಬುವಂತ ನಿಜಕ್ಕೂ ಯಾರು ಗೊತ್ತೇ??

262

ನಮ್ಮ ಭಾರತೀಯ ಮಹಾ ಗ್ರಂಥಗಳಾದ ಈ ರಾಮಾಯಣ ಮತ್ತು ಮಹಾಭಾರತ ದಲ್ಲಿ ಅನೇಕಾನೇಕ ಪಾತ್ರ ವ್ಯಕ್ತಿತ್ವಗಳು ನಮ್ಮನ್ನು ಕಾಡುತ್ತವೆ. ಆದರೆ ಕೆಲವು ಕಾರಣಾಂತರಗಳಿಂದ ಈ ರಾಮಾಯಣ ಮಹಾಭಾರತ ದ ಪ್ರಮುಖ ವಾಗಿದ್ದು ಅನೇಕರನ್ನ ತಿಳಿದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅಂತಹ ಪಾತ್ರ ವ್ಯಕ್ತಿತ್ವಗಳಲ್ಲಿ ಜಾಂಬುವಂತ ಕೂಡ ಒಂದು ಮಹತ್ವದ ಪಾತ್ರ. ಈ ಜಾಂಬುವಂತನ ಬಗ್ಗೆ ತಿಳಿಯುವುದಾದರೆ.

ಜಾಂಬವಂತನು ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಭಾಗವಹಿಸಿದ್ದ ಧೀರ್ಘ ಜೀವಿ. ಅಶ್ವತ್ತಾಮ, ನಳ, ಹನುಮಂತನ ರೀತಿ ಯುಗ ಯುಗಾಂತಗಳವರೆಗೆ ಜೀವಿಸಿದ್ದವನು. ಹಾಗಾದರೆ ಈ ಜಾಂಬುವಂತನಿಂದ ಈ ರಾಮಾಯಣ ಮತ್ತು ಮಹಾಭಾರತಕ್ಕೆ ಯಾವ ರೀತಿಯಾದ ಕೊಡುಗೆ ಇದೆ ಅನ್ನೋದನ್ನ ನೋಡೋಣ. ಜಾಂಬುವಂತನನ್ನ ಕರಡಿಗಳ ರಾಜ ಎಂದು ಕರೆಯಲಾಗುತ್ತಾರೆ. ಅವನ ತಂದೆಯನ್ನ ಹೊರತುಪಡಿಸಿ ಜಾಂಬುವಂತ ಎಲ್ಲಾರಿಗೂ ಕೂಡ ಅಮರ. ಅದಾಗಿಯೂ ವಾಲ್ಮೀಕಿ ರಾಮಾಯಣದಲ್ಲಿ ಜಾಂಬುವಂತನನ್ನು ವಾನರ ಎಂದೂ ವಿವರಿಸಲಾಗಿದೆ. ಅವನನ್ನ ರಿಕ್ಷಾ ರಾಜ್ ಎಂದು ಸಹ ಕರೆಯಲಾಗಿದೆ. ರಿಕ್ಷಾಗಳು ಅಂದರೆ ಕರಡಿಗಳು ಎಂಧರ್ಥ. ರಾವಣ ಮತ್ತು ರಾಮನ ನಡುವೆ ನಡೆಯುತ್ತಿದ್ದ ಯುದ್ದದಲ್ಲಿ ರಾಮನಿಗೆ ನೆರವಾಗಲು ಎಂದೇ ಬ್ರಹ್ಮದೇವನು ಜಾಂಬುವಂತನನ್ನ ವಾನರನ ರೂಪದಲ್ಲಿ ಸೃಷ್ಟಿಸಿದನು ಎಂದು ಹೇಳಲಾಗುತ್ತದೆ.

ಸಾಗರ ಮಂಥನ ಸಮಯದಲ್ಲಿ ಜಾಂಬುವಂತನನ್ನು ಉಲ್ಲೇಖ ಮಾಡಲಾಗಿದೆ. ಮಹಾಬಲಿಯಿಂದ ಮೂರು ಲೋಕಗಳನ್ನ ವಶಪಡಿಸಿಕೊಳ್ಳುವಾಗ ವಾನರನನ್ನ ಏಳು ಬಾರಿ ಪ್ರದಕ್ಷಿಣೆ ಹಾಕಿದ್ದಾರೆ ಎಂದು ಹೇಳಲಾಗುತ್ತದೆ. ಜಾಂಬುವಂತನ ಇತಿಹಾಸ ಏನು ಅನ್ನೋದನ್ನ ತಿಳಿಯುವುದಾದರೆ ಶ್ರೀ ರಾಮನ ಸೇವೆ ಮಾಡಲೆಂದು ಕರಡಿಯಾಗಿ ಅವತಾರ ತಾಳಿದ ಹಿಮಾಲಯದ ರಾಜನೇ ಈ ಜಾಂಬುವಂತ. ಜಾಂಬುವಂತನು ಭಗವಾನ್ ಶ್ರೀ ರಾಮನಿಂದ ಧೀರ್ಘಾಯುಷ್ಯ ಮತ್ತು ಸ್ಪುರದ್ರೂಪಿ ಆಗಿರುವಂತೆ ಜೊತೆಗೆ ಹತ್ತು ಸಾವಿರಕ್ಕೂ ಹೆಚ್ಚು ಸಿಂಹ ಬಲವನ್ನು ತನಗೆ ನೀಡುವಂತೆ ವರವನ್ನು ಪಡೆದುಕೊಳ್ಳುತ್ತಾನೆ. ಜಾಂಬುವಂತ ಅತ್ಯಂತ ಬುದ್ದಿವಂತ ಮತ್ತು ಅನುಭವಿ ಎಂದು ಹೇಳಲಾಗುತ್ತದೆ. ಜಾಂಬುವಂತನಿಗೆ ತನ್ನ ರಾಜ್ಯವನ್ನು ಹೇಗೆ ನಿಭಾಯಿಸಬೇಕು ಎಂಬ ಅಪಾರ ಜ್ಞಾನವನ್ನು ಹೊಂದಿದ್ದನು. ರಾಜ್ಯಾಡಳಿತದಲ್ಲಿ ಚಾಣಕ್ಯ ಅಂತಾನೇ ಹೇಳಬಹುದು.

ಸುಗ್ರೀವನ ಪರಿಣಿತರಲ್ಲಿ ಜಾಂಬುವಂತ, ನೀಲ, ನಳ , ಹನುಮಂತ ಸೇರಿದಂತೆ ಬೆರಳೆಣಿಕೆ ಮಂದಿಯಷ್ಟು ಮಾತ್ರ ಇದ್ದರು. ಸುಗ್ರೀವನು ತನ್ನ ರಾಜ್ಯ ಖುಷಿಮುಖ ಪರ್ವತದಲ್ಲಿ ಈ ಎಲ್ಲರ ಸಲಹೆ ಮಾರ್ಗದರ್ಶನ ಪಡೆದು ವಾಸ ಮಾಡುತ್ತಿದ್ದನು. ರಾಮ ಮತ್ತು ಲಕ್ಷ್ಮಣರನ್ನ ಗುರುತಿಸಲು ಅವರು ಯಾರೆಂದು ತಿಳಿದು, ಅವರ ಉದ್ದೇಶವನ್ನು ಅರಿಯಲು ಹನುಮಂತನನ್ನ ಕಳುಹಿಸಿ ಸುಗ್ರೀವನಿಗೆ ಸಲಹೆ ನೀಡಿದ್ದನು. ಬಳಿಕ ಹನುಮಂತನಿಗೆ ತನ್ನ ಅಗಾಧ ಸಾಮರ್ಥ್ಯವನ್ನು ಅರಿತುಕೊಂಡು ಸಾಗರವನ್ನು ದಾಟಿಕೊಂಡು ಸೀತೆಯನ್ನ ರಕ್ಷಣೆ ಮಾಡಲು ಹುಡುಕುವುದಕ್ಕೆ ಪ್ರೇರಣೆ ನೀಡಿದವನು ಈ ಜಾಂಬುವಂತ. ಒಮ್ಮೆ ಹೀಗೇ ರಾವಣನ ಜೊತೆ ದ್ವಂದ್ವ ಯುದ್ದದಲ್ಲಿ ಜಾಂಬುವಂತನು ತನ್ನ ಉಗ್ರ ಸ್ವರೂಪವನ್ನು ತೋರಿಸಿ ತನ್ನ ಬಲಿಷ್ಠ ಶಕ್ತಿ ಹೊಂದಿದ ಕೈಗಳಿಂದ ರಾವಣನಿಗೆ ಹೊಡೆದು ರಾವಣನ ಎದೆಗೆ ಜಾಡಿಸಿ ಹೊದೆಯುತ್ತಾನೆ. ಇದರಿಂದ ಜಾಂಬುವಂತನ ಶಕ್ತಿ ಸಾಮರ್ಥ್ಯ ಏನೆಂಬುದನ್ನ ಅರಿತು ರಾವಣನ ಸಾರಥಿ ರಾವಣನನ್ನ ಯುದ್ದದಿಂದ ಹಿಂದೆ ಎಳೆದುಕೊಂಡು ಹೋಗುತ್ತಾನೆ.

ಇನ್ನು ಮಹಾಭಾರತದಲ್ಲಿ ಜಾಂಬುವಂತನ ಕೊಡುಗೆ ಏನೆಂಬುದನ್ನ ಅರಿಯುವುದಾದರೆ ಮಹಾಭಾರತದಲ್ಲಿ ಜಾಂಬುವಂತನು ಸಿಂಹವನ್ನು ಕೊಂದು ಆ ಸಿಂಹವು ರಾಜ ಪ್ರಸೇನನಿಂದ ಕಿತ್ತುಕೊಂಡಿದ್ದ ಸೈಮಂತಿಕ ಮಣಿಯನ್ನ ಹಿಂಪಡೆಯುತ್ತಾನೆ. ಹಿಂದೂ ದಂತಕಥೆಯ ಪ್ರಕಾರ ಈ ಸೈಮಂತಿಕ ಮಣಿಯನ್ನ ಇಂದು ಕೊಹಿನೂರ್ ವಜ್ರ ಎಂದು ಮರು ನಾಮಕರಣ ಮಾಡಲಾಯಿತು. ಆದರೆ ಪ್ರತ್ಯೇಕವಾಗಿ ರತ್ನಕ್ಕಾಗಿ ಶ್ರೀ ಕೃಷ್ಣನು ರಾಜ ಪ್ರಸೇನನ್ನು ಕೊಂದನು ಎಂಬ ಸಂಶಯ ಅನುಮಾನ ಇಡೀ ಸಾಮ್ರಾಜ್ಯದಲೆಲ್ಲಾ ಹರಡುತ್ತದೆ. ಆಗ ಪ್ರಸೇನನ್ನ ಮೋಸದಿಂದ ರತ್ನಕ್ಕಾಗಿ ಕೊಂದ ಸಿಂಹವನ್ನು ಮತ್ತು ಕರಡಿಯಿಂದ ಸಾವನ್ನಪಿದ ಸಿಂಹವನ್ನ ಪತ್ತೆ ಹಚ್ಚಲು ಶ್ರೀ ಕೃಷ್ಣ ವಿಹಾರ ಮಾಡುತ್ತಾನೆ‌. ಆಗ ಗುಹೆಯೊಂದರಲ್ಲಿ ಇದ್ದ ಜಾಂಬುವಂತನನ್ನ ಶ್ರೀ ಕೃಷ್ಣ ಕಾಣುತ್ತಾನೆ.

ಆಗ ಶ್ರೀ ಕೃಷ್ಣ ಮತ್ತು ಜಾಂಬುವಂತನ ನಡುವೆ ಯುದ್ದ ಆರಂಭವಾಗುತ್ತದೆ. ಕೃಷ್ಣ ಮತ್ತು ಜಾಂಬುವಂತನ ನಡುವೆ ಯುದ್ದ ಬರೋಬ್ಬರಿ ಇಪ್ಪತ್ತೊಂದು ದಿನಗಳವರೆಗೆ ನಡೆಯುತ್ತಿರುತ್ತದೆ. ಹೀಗೆ ಅಂತಿಮದಲ್ಲಿ ಕೃಷ್ಣ ಯಾರೆಂದು ಜಾಂಬುವಂತನಿಗೆ ಅರಿವಿಗೆ ಬರುತ್ತದೆ. ಇನ್ನೂ ರಾಮಾಯಣದಲ್ಲಿ ಜಾಂಬುವಂತನ ಪಾತ್ರ ಹೇಗಿತ್ತು ಅನ್ನೋದನ್ನ ತಿಳಿಯುವುದಾದರೆ ಶ್ರೀ ರಾಮ ತನ್ನ ಧರ್ಮ ಪತ್ನಿ ಸೀತೆಯನ್ನ ಕಳೆದುಕೊಂಡಾಗ ಜಾಂಬುವಂತನು ರಾವಣನ ಹಿಡಿತದಿಂದ ಸೀತೆಯನ್ನ ರಕ್ಷಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಇದರಲ್ಲಿ ರಾಮನ ಭಂಟನಾಗಿದ್ದ ಹನುಮಂತನಿಗೆ ತನ್ನಲ್ಲಿ ಎಷ್ಟು ಮಹಾ ಶಕ್ತಿ ಸಾಮರ್ಥ್ಯವಿದೆ ಅನ್ನೋದನ್ನ ಅರಿವಿಗೆ ತಂದು ಆತನಲ್ಲಿ ಸೀತೆಯನ್ನ ಹುಡುಕುವಂತೆ ಪ್ರೇರಣೆ ತಂದಿದ್ದು ಇದೇ ಜಾಂಬುವಂತ. ಈ ರಾಮಾಯಾಣ ಇರಬಹುದು ಅಥವಾ ಮಹಾಭಾರತ ಇರಬಹುದು ಜಾಂಬುವಂತನ ಕೊಡುಗೆ ಅಪಾರ. ಅವನ ಗುಣ ಸ್ವಭಾವ ಅತ್ಯುತ್ತಮವಾಗಿತ್ತು ಎಂದು ಪುರಣದ ಕಥೆಗಳು ಹೇಳುತ್ತವೆ. ಆದರೆ ಇಂದಿನ ಜನಾಂಗಕ್ಕೆ ಜಾಂಬುವಂತನ ಬಗ್ಗೆ ಹೆಚ್ಚು ಮಾಹಿತಿ ಪ್ರಚಾರವೇ ಆಗಿಲ್ಲ.

Leave A Reply

Your email address will not be published.