ಜಿದ್ದಾ ಜಿದ್ದಿಗೆ ಬಂದ ಅಮೆಜಾನ್. ಅದರದೇ ಭಾಷೆಯಲ್ಲಿ ಪಾಠ ಕಲಿಸಿದ ಭಾರತದ ಮುಕೇಶ್ ಅಂಬಾನಿ. ಇದು ಭಾರತದ ತಾಕತ್ತು!

421

ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಅಮೆಜಾನ್ ನ ಕಟ್ಟಿದವ ಜೆಫ್ ಬೆಝೋಜ್. ತನ್ನ ವ್ಯಾಪಾರವನ್ನ ಪ್ರಪಂಚದ ಮೂಲೆ ಮೂಲೆಗು ತಲುಪವಂತೆ ಮಾಡಿ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗು ಅತ್ಯಂತ ದೊಡ್ಡ ಕಂಪೆನಿ ಅನ್ನಾಗಿ ಮಾಡಿದವರು. ಹಾಗೇನೇ ಭಾರತದಲ್ಲಿ ಮುಕೇಶ್ ಅಂಬಾನಿ. ಇವರನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಇನ್ನು ಕೆಲವರು ಬಿಸಿನೆಸ್ ಗಾಗಿ. ಒಟ್ಟಾರೆ ಹೇಳಬೇಕೆಂದರೆ ಮುಕೇಶ್ ಅಂಬಾನಿಯವರ ಈ ರಿಲಯನ್ಸ್ ಗ್ರೂಪ್ ಭಾರತಕ್ಕೆ ಒಂದು ವರದಾನವಾಗಿದೆ.

ಅದೆಷ್ಟೋ ಜನರಿಗೆ ಉದ್ಯೋಗ ನೀಡಿದರೆ ಇನ್ನು ಅನೇಕ ಬಿಸಿನೆಸ್ ಗಳಿಗೆ ಬಂಡವಾಳ ಹಾಕಿ ಅನೇಕ ಜನರ ಕುಶಿಗೆ ಕಾರಣರಾಗಿದ್ದಾರೆ. ೨೦೧೯ ರಲ್ಲಿ ಅಮೆಜಾನ್ ಭಾರತದ ಫ್ಯೂಚರ್ ಕೋಪನ್ಸ್ ಅನ್ನುವ ಫ್ಯೂಚರ್ ಗ್ರೂಪ್ ನ SUBSIDIARY ಕಂಪನಿ ಯಾ ೪೯ ಪ್ರತಿಶತ ಖರೀದಿ ಮಾಡಿತ್ತು. ಇದರ ಉದ್ದೇಶ ಭಾರತದಲ್ಲಿ ತನ್ನ ಉದ್ಯಮವನ್ನು ಬೆಳೆಸುವ ಉದ್ದೇಶವಾಗಿತ್ತು. ಈ ಫ್ಯೂಚರ್ ಕೋಪನ್ ಫ್ಯೂಚರ್ ರಿಟೈಲ್ ಎನ್ನುವ ಇನ್ನೊಂದು ಕಂಪನಿಯ ೭.೩% ಭಾಗವನ್ನು ಹೊಂದಿತ್ತು. ಇದು ಅಮೆಜಾನ್ ಗೆ ಪರೋಕ್ಷವಾಗಿ ಫ್ಯೂಚರ್ ರಿಟೇಲ್ ನ ೭.೩% ಕಂಪನಿ ಯನ್ನು ಸ್ವಾಧೀನಪಡಿಸಿಕೊಂಡ ಹಾಗಾಯಿತು.

ಕೂಡಲೇ ಒಂದು ವರ್ಷದ ನಂತರ ಭಾರತದ ರಿಲಯನ್ಸ್ ಕಂಪನಿ ಫ್ಯೂಚರ್ ಗ್ರೂಪ್ ನ ರಿಟೇಲ್, ಹೋಲ್ಸೇಲ್, ಲಾಜಿಸ್ಟಿಕ್ಸ್ ಹಾಗು WAREHOUSE ಉದ್ಯಮವನ್ನು ೨೪,೭೧೩ ಕೋಟಿ ನೀಡಿ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತ್ತು. ಇದು ಅಮೆಜಾನ್ ಹಾಗು ರಿಲಯನ್ಸ್ ನಡುವೆ ಫ್ಯೂಚರ್ ಗ್ರೂಪ್ ಯಾರಿಗೆ ಸೇರಬೇಕು ಎನ್ನುವ ಕಾನೂನು ಹೋರಾಟಕ್ಕೆ ನಾಂದಿ ಹಾಡಿತ್ತು. ಆದರೆ ಕಳೆದ ಡಿಸೆಂಬರ್ ಇಂದ ಕಾನೂನು ರೀತಿಯಲ್ಲೂ ಕೂಡ ರಿಲಯನ್ಸ್ ಕೈ ಮೇಲಾಗುತ್ತಿದೆ. ಅದೇ ರೀತಿ ಅಮೆಜಾನ್ ಹಾಗು ಫ್ಯೂಚರ್ ಕೋಪನ್ ನಡುವೆ ನಡೆದ ಒಪ್ಪಂದ ಕೂಡ ಕಾನೂನು ಬಾಹಿರವಾಗಿತ್ತು ಹಾಗು ಅಮಾನ್ಯ ಎಂದು ಪರಿಗಣಿಸಿ ಅಮೆಜಾನ್ ಗೆ ೨೦೦ ಕೋಟಿ ದಂಡ ಕೂಡ ವಿಧಿಸಿತ್ತು.

ಆದರೆ ಈ ಕಾನೂನು ಹೋರಾಟ ಇಂದು ಕೂಡ ನಡೆಯುತ್ತಿರುವಾಗಲೇ ರಿಲಯನ್ಸ್ ಅಮೆಜಾನ್ ಗೆ ಶಾಕ್ ನೀಡಿದೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ಅಚಾನಕ್ಕಾಗಿ ಸುಮಾರು ೨೦೦ ಫ್ಯೂಚರ್ ರಿಟೇಲ್, ಲೈಫ್ ಸ್ಟೈಲ್ ಸ್ಟೋರ್ ಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದು ನಡೆದದ್ದು ೨೫ ಫೆಬ್ರವರಿ ಗೆ ಈ ಸ್ಟೋರ್ ಮ್ಯಾನೇಜ್ಮೆಂಟ್ ಗಳಿಗೂ ಏನಾಗಿದೆ ಎನ್ನುವುದು ಗೊತ್ತಿರಲಿಲ್ಲ. ಇದು ಮುಕೇಶ್ ಅಂಬಾನಿ ರಾತ್ರೋರಾತ್ರಿ ಅಮೆಜಾನ್ ಮೇಲೆ ಮಾಡಿದ ಸುರ್ ಜಿಕಲ್ ಸ್ತ್ರ್ ಐಕ್, ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಅಮೆಜಾನ್ ದೊಡ್ಡ ಕಂಪನಿ ಆಗಿರಬಹುದು, ಜೆಫ್ ದೊಡ್ಡ ಶ್ರೀಮಂತರಿರಬಹದು ಆದರೆ ಬಿಸಿನೆಸ್ ಬಗ್ಗೆ ಭಾರತದಿಂದ ಕಲಿಯುವುದು ತುಂಬಾ ಇದೆ ಎಂದಿದ್ದಾರೆ.

Leave A Reply

Your email address will not be published.