ಜಿಯೋಗೆ ಪೈಪೋಟಿ ನೀಡಲು ಬಂದಿತ್ತು starlink, ಇದೀಗ ಮಸ್ಕ್ ಗೇ ಟಕ್ಕರ್ ಕೊಡಲು ಹೊರಟಿದ್ದಾರೆ ಮುಖೇಶ್ ಅಂಬಾನಿ?
ಟೆಲಿಕಾಂ ಕ್ಷೇತ್ರದಲ್ಲಿ ಒಂದು ರೆವಲ್ಯೂಷನರಿ ತಂದ ಮುಖೇಶ್ ಅಂಬಾನಿ ಭಾರತ ದೇಶದಲ್ಲಿ ಜನರು ಡಿಜಿಟಲ್ ಕ್ಷೇತ್ರದಲ್ಲಿ ಅನುಭವಿಸುತ್ತಿದ್ದ ದೊಡ್ಡ ಸಮಸ್ಯೆ ಗೆ ಪರಿಹಾರ ನೀಡಿದರು. ಅದೇ ಇಂಟರ್ನೆಟ್ ಹಾಗು ಕರೆ ಬೆಲೆ ಏರಿಕೆ ಸಮಸ್ಯೆ. ದೇಶಾದ್ಯಂತ ಸುದ್ದಿ ಮಾಡಿ ಇಂದಿಗೂ ನಂಬರ್ ಒನ್ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಇನ್ನೊಂದು ಸಂಚಲನ ಸೃಷ್ಟಿಸಲು ಮುಂದಾಗಿದೆ. ನೀವು ಇದರ ಹಿಂದೆ ಅಮೇರಿಕಾದ ಬಿಸ್‌ನೆಸ್ ಮಾನ್ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಬಗ್ಗೆ ಕೇಳಿರುತ್ತೀರ, ಅ ಸಂಸ್ಥೆ ಬರುತ್ತಿರುವುದೇ ಜಿಯೋಗೆ ಟಕ್ಕರ್ ಕೊಡಲು ಎಂದು ಹೇಳಲಾಗುತಿತ್ತು. ಇದೀಗ ಅಂಬಾನಿ ಮಸ್ಕ್ ಗೇ ಟಕ್ಕರ್ ಕೊಡಲು ತಯಾರಾಗಿದ್ದಾರೆ.
ಇತ್ತೀಚಿಗೆ ಸ್ಯಾಟಲೈಟ್ ಮೂಲಕ ಬ್ರಾಡ್‌ಬ್ಯಾಂಡ್ ಮೂಲಕ ಅತೀ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಸೇವೆ ಒದಗಿಸಲು ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಸಿದ್ದತೆ ಮಾಡಿತ್ತು. ಅದಕ್ಕೆ ಈಗಾಗಲೇ ಆಗಸದಲ್ಲಿ ತಮ್ಮ ಸ್ಯಾಟಲೈಟ್ ಕೂಡಾ ಬಿಟ್ಟಿದ್ದಾರೆ. ಇನ್ನೇನು ಭಾರತದಲ್ಲೂ ಅದನ್ನು ವಿಸ್ಯರಿಸಬೇಕು ಎಂದು ಭಾರತೀಯರ ಬಳಿ ಮುಂಗಡ ಹಣ ಕೂಡಾ ಪಡೆದಿದ್ದರು. ನಂತರ ಭಾರತ ಸರಕಾರ ಮಧ್ಯಪ್ರವೇಶಿಸಿ ಇದರ ಪರೀಕ್ಷೆ ನಡೆಸದೇ ಯಾರೂ ಕೂಡಾ ಮುಂಗಡ ಹಣ ಪಾವತಿಸಬೇಡಿ ಎಂದು ದೇಶದ ಜನತೆ ಬಳಿ ಹೇಳಿತ್ತು.
ಇತ್ತೀಚಿಗೆ ಸ್ಟಾರ್ ಲಿಂಕ್ ಸೆಟಲೈಟ್ ಬಾಹ್ಯಾಕಾಶ ದಲ್ಲಿ ಹಾಳಾಗಿ ಹೋಗಿದೆ ಎನ್ನುವ ಸುದ್ದಿ ಕೂಡಾ ಇತ್ತು. ಇದೀಗ ಭಾರತದ ಶ್ರೀಮಂತ ವ್ಯಕ್ತಿ ಹಾಗು ಅತೀ ದೊಡ್ಡ ಸಂಸ್ಥೆ ರಿಲಯನ್ಸ್ ಕೂಡಾ ಭಾರತದ ಜನರಿಗೆ ಈ ಸ್ಯಾಟಲೈಟ್ ಮೂಲಕ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸಲು ಮುಂದಾಗಿದ್ದಾರೆ. ಜಿಯೋ ಹಾಗು ಲಕ್ಸೆಂಬರ್ಗ್ ಮೂಲದ ಎಸ್ಇಎಸ್ ಕಂಪೆನಿ ಜೊತೆ ಸೇರಿ ಈ ಸೇವೆ ನೀಡಲು ಯೋಜನೆ ರೂಪಿಸಿದೆ. ಇದು ಭಾರತ ಅಲ್ಲದೇ ನೆರೆಯ ದೇಶಗಳಲ್ಲೂ ಕೂಡಾ ಈ ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಸೇವೆ ನೀಡುವ ಯೋಜನೆ ಹಾಕಿಕೊಂಡಿದೆ.