ಜಿಯೋ ಗೆ ಟಕ್ಕರ್ ಕೊಡಲು ಬರುತ್ತಿದೆ ಈ ಕಂಪನಿ ಯಾವುದು ಇದು?
ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಹೊಸ ಇತಿಹಾಸ ಸೃಷ್ಟಿಸಿತ್ತು. ಟೆಲಿಕಾಂ ಕ್ರಾಂತಿ ಎಂದರೂ ತಪ್ಪಾಗಲಾರದು ಎಲ್ಲಾ ಜನರ ಕೈಗೆಟಕುವ ದರದಲ್ಲಿ ಡೇಟಾ ಸೇವೆಯನ್ನು ಪರಿಚಯ ಪಡಿಸಿದ್ದು ಜಿಯೋ. ಜಿಯೋ ಬಂದ ನಂತರ ಎಲ್ಲಾ ಇತರೆ ಕಂಪನಿಗಳು ಸರಿ ದಾರಿಗೆ ಬಂದಿದ್ದವು. ಆದರೆ ಈಗ ಜಿಯೋ ಗೆ ಟಕ್ಕರ್ ಕೊಡಲೆಂದೆ ಈಗ ಬರುತ್ತಿದೆ ಮತ್ತೊಂದು ಕಂಪನಿ , ಯಾವುದು ಅದು ? ಎಲ್ಲಿಯ ಕಂಪನಿ ಬನ್ನಿ ತಿಳಿಯೋಣ.
ಸ್ಟಾರ್ ಲಿಂಕ್ ಹೌದು ಈ ಕಂಪನಿ ಹೆಸರು ಹೊಸದು ಎಂದು ಆಗಬಹುದು, ಆದರೆ ಇದರ ಒಡೆತನ ಹೊಂದಿದ ವ್ಯಕ್ತಿ ಎಲ್ಲರಿಗೂ ಚಿರಪರಿಚಿತ . ಅವರು ಮತ್ಯಾರು ಅಲ್ಲ ಎಲಾನ್ ಮಸ್ಕ್ . ಟೆಸ್ಲಾ ಕಂಪನಿ ಯ ಸಂಸ್ಥಾಪಕರು ಇವರು. ಇವರು ಇತ್ತೀಚೆಗೆ ಘೋಷಣೆ ಮಾಡಿದಂತೆ ಅವರ ಒಡೆತನದ ಸ್ಟಾರ್ ಲಿಂಕ್ ಸಂಸ್ಥೆ ಭಾರತದಲ್ಲಿ ಕಾರ್ಯಾಚರಣೆ ಮಾಡಲು ಪೂರ್ವ ಅನುಮತಿ ಪಡೆಯಲು ಮಾತುಕತೆ ನಡೆಯುತ್ತಿದೆ ಎಂದು. ಇದೇನಾದರೂ ಭಾರತಕ್ಕೆ ಬಂದರೆ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಕ್ರಾಂತಿ ಆಗುವುದು ಖಂಡಿತ ಏನಿದರ ವಿಶೇಷತೆ ಹಾಗಾದ್ರೆ ಬನ್ನಿ ತಿಳಿಯೋಣ.
ಇದು ಬರೋಬ್ಬರಿ 150mb ಪರ್ ಸೆಕೆಂಡ್ ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ. ಈಗ ಪ್ರಸ್ತುತ ಇರುವ ಡೇಟಾ 12mb ಪರ್ ಸೆಕೆಂಡ್ ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಸ್ಟಾರ್ ಲಿಂಕ್ ನವರ ಈ ನೆಟ್ವರ್ಕ್ ಬೆಟ್ಟ ಗುಡ್ಡಗಳಲ್ಲಿ ಕೂಡ network ಸೌಲಭ್ಯ ಒದಗಿಸುತ್ತದೆ. ಕಾರಣ ಇದು ಡೈರೆಕ್ಟ್ ಸ್ಯಾಟಲೈಟ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದೇನಾದರೂ ಭಾರತಕ್ಕೆ ಬರುವ ಒಪ್ಪಿಗೆ ಪಡೆದದ್ದು ಹೌದಾದಲ್ಲಿ ಜಿಯೋ ಏರ್ಟೆಲ್ ನಂತಹ ದಿಗ್ಗಜ ಕಂಪನಿಗಳಿಗೆ ಪೆಟ್ಟು ಬೀಳುವುದು ಖಂಡಿತ.