ಜಿಯೋ ದಲ್ಲಿ ೫ GB ಇಂಟರ್ನೆಟ್ ಸಾಲ ಪಡೆಯುವುದು ಹೇಗೆ? ತಕ್ಷಣ ಈ ರೀತಿ ಮಾಡಿ.
ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಪ್ರತಿಯೊಂದು ಕಂಪನಿ ಕೂಡ ಜನರಿಗೆ ಉತ್ತಮ ಯೋಜನೆ ನೀಡಲು ಒಂದಲ್ಲ ಒಂದು ಆಫರ್ ಒಂದಿಗೆ ಬರ್ತಿದೆ. ಇದು ಈ ಟೆಲಿಕಾಂ ಸೆಕ್ಟರ್ ಅಲ್ಲಿ ಅತಿ ಹೆಚ್ಚಾಗಿ ನೋಡಲು ಸಿಗುತ್ತಿದೆ. ಒಂದು ೫ ವರ್ಷಗಳ ಹಿಂದೆ ಇಂಟರ್ನೆಟ್ ಬೆಲೆ ಒಂದು gb ಗೆ ೩೦೦ ಕ್ಕೂ ಅಧಿಕವಾಗಿತ್ತು, ಆದರೆ ಇಂದು ಅದರ ಬೆಲೆ ಬಹಳ ಕಡಿಮೆ ಆಗಿದೆ. ಇದಕ್ಕೆ ಕಾರಣ ಮುಕೇಶ್ ಅಂಬಾನಿ ಅವರ ಜಿಯೋ.
ಒಂದು GB ಗೆ ಒಂದು ರೂಪಾಯಿ ಅಂತೇ ಜಿಯೋ ಯಾವಾಗ ಕೊಡಲು ಶುರು ಮಾಡಿತೋ ಅವತ್ತಿಂದ ಬೇರೆ ಕಂಪನಿ ಗಳು ಕೂಡ ತಮ್ಮ ಬೆಳೆಯನ್ನು ಬಹಳಷ್ಟು ಕಡಿಮೆ ಮಾಡಿತ್ತು. ಜಿಯೋ ಬಂದ ರಭಸಕ್ಕೆ ಅನೇಕ ಟೆಲಿಫೋನ್ ಕಂಪನಿಗಳು ನಿಂತೇ ಹೋಯಿತು. ಈಗ ಜಿಯೋ ಇನ್ನೊಂದು ಆಫರ್ ಒಂದಿಗೆ ಉಳಿದ ಟೆಲಿಕಾಂ ಕಂಪನಿ ಗಳಿಗೆ ತಲೆಬಿಸಿ ನೀಡಲು ತಯಾರಾಗಿ ಬಂದಿದೆ. ಇನ್ನು ಮುಂದೆ ಜಿಯೋ ಗ್ರಾಹಕರು ತಮ್ಮ ಡೇಟಾ ಮುಗಿದ ಮೇಲೆ ಡೇಟಾ ಸಾಲ ಪಡೆಯಬಹುದು ಅದು ಕೂಡ ಆಗಲೇ ಹಣ ನೀಡದೆ.
ಜಿಯೋ ತಮ್ಮ ಗ್ರಾಹಕರಿಗೆ ಸಾಲದ ರೀತಿ ೫ ಡೇಟಾ ವೌಚೆರ್ ನೀಡಲು ಮುಂದಾಗಿದೆ. ಈ ಪ್ರತಿ ವೌಚೆರ್ ಗಳು ೧ GB ಡೇಟಾ ಸೌಲಭ್ಯ ಹೊಂದಿದೆ. ನೀವು ಒಂದು ಅಥವಾ ೫ ವೌಚೆರ್ ಗಳನ್ನೂ ಒಮ್ಮೆಲೇ ಪಡೆಯಬಹುದು. ಈ ಯೋಜನೆಯ ಸೌಲಭ್ಯ ಹೇಗೆ ಪಡೆಯುವುದು? ನಿಮ್ಮ ಫೋನ್ ಅಲ್ಲಿ My Jio ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಅಲ್ಲಿ ಮೆನು ಒಪ್ಶನ್ ಇರುತ್ತದೆ. ಅದನ್ನು ಒತ್ತಿದ ನಂತರ ಮೊಬೈಲ್ ಸೇವೆಗಳು ಎನ್ನುವ ಒಪ್ಶನ್ ಸಿಗುತ್ತದೆ ಅಲ್ಲಿ ತುರ್ತು ಡೇಟಾ ಯೋಜನೆ ಆಯ್ಕೆ ಮಾಡಿ. ನಂತರ ಪ್ರೊಸೆಎಡ್ ಒತ್ತಿ ಮತ್ತು ಯೋಜನೆ ಸಕ್ರಿಯಗೊಳಿಸಲು ಗೆಟ್ ಎಮರ್ಜೆನ್ಸಿ ಡೇಟಾ ಆಯ್ಕೆಯನ್ನು ಕ್ಲಿಕ್ ಮಾಡಿ. ಹೀಗೆ ನೀವು ತುರ್ತು 5GB ಡೇಟಾ ಪಡೆಯಬಹುದು.