ಟಾಟಾ ವಾಹನಗಳ ಮೇಲೆ ಸುಮಾರು ೮೫ ಸಾವಿರ ರೂಪಾಯಿಗಳಷ್ಟು ರಿಯಾಯಿತಿ. ಯಾವ ಕಾರಿಗೆ ಎಷ್ಟು ಡಿಸ್ಕೌಂಟ್? ಕೆಲವೇ ದಿನಗಳ ಆಫರ್.

1,079

ಟಾಟಾ ಮೋಟರ್ಸ್ ತನ್ನ ವಾಹನಗಳ ಮೇಲೆ ಸುಮಾರು ೮೫೦೦೦ ರೂಪಾಯಿಗಳ ವರೆಗೆ ರಿಯಾಯಿತಿ ನೀಡುತ್ತಿದೆ. ಅದೇ ರೀತಿ ಈ ವಾಹನಗಳ ಮೇಲಿನ ರಿಯಾಯಿತಿ ಕೇವಲ ಜನವರಿ ೩೧ ರ ವರೆಗೆ ಮಾತ್ರ ಮಾನ್ಯ ಇರಲಿದೆ. ರಿಯಾಯಿತಿ ದರದಲ್ಲಿ ಖರೀದಿಸಬಹುದಾದ ವಾಹನಗಳಲ್ಲಿ ಟಾಟಾ ಹ್ಯಾರಿಯರ್. ಟಾಟಾ ಸಫಾರಿ, ಟಾಟಾ ಟೆಗೋರ್, ಟಾಟಾ ಟಿಯಾಗೋ, ಮತ್ತು ಟಾಟಾ ಆಲ್ಟೋಸ್ ಸೇರಿವೆ. ಟಾಟಾ ಹ್ಯಾರಿಯರ್ ಮೇಲೆ ಅತಿ ದೊಡ್ಡ ರಿಯಾಯಿತಿ ನೀಡಲಾಗುತ್ತಿದೆ ಎನ್ನಲಾಗಿದೆ. ಯಾವ ಕಾರಿನ ಮೇಲೆ ಎಷ್ಟು ರಿಯಾಯಿತಿ ಇಲ್ಲಿದೆ ನೋಡಿ ಮಾಹಿತಿ.

ಟಾಟಾ ಹ್ಯಾರಿಯರ್- ಟಾಟಾ ಹ್ಯಾರಿಯರ್ ಕಾರಿನ ಬೆಲೆ ಸುಮಾರು ೧೪.೩೯ ಲಕ್ಷದಿಂದ ಪ್ರಾರಂಭವಾಗಿ ೨೧.೧೯ ಲಕ್ಷದವರೆಗೆ ಇದೆ. ಈ SUV ಕಾರ್ ನ ಮೇಲೆ ಸುಮಾರು ೮೫ ಸಾವಿರದಷ್ಟು ರಿಯಾಯಿತಿ ನೀಡುತ್ತಿದೆ ಟಾಟಾ ಮೋಟರ್ಸ್. ೨೦೨೧ ರ ಮಾಡೆಲ್ ಗೆ ೬೦ ಸಾವಿರ ದವರೆಗೆ ನಗದು ರಿಯಾಯಿತಿ ಹಾಗು ಎಕ್ಸ್ಚೇಂಜ್ ಬೋನಸ್ ಕೂಡ ಸಿಗುತ್ತಿದೆ. ೨೦೨೨ ರ ಮಾಡೆಲ್ ಗೆ ೪೦ ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ. ಇದಲ್ಲದೆ ೨೫ ಸಾವಿರ ರೂಪಾಯಿಗಳ ವರೆಗೆ ಕಾರ್ಪೊರೇಟ್ ಡಿಸ್ಕೌಂಟ್ ಕೂಡ ನೀಡುತ್ತಿದೆ ಟಾಟಾ ಮೋಟರ್ಸ್.

ಟಾಟಾ ಸಫಾರಿ- ಟಾಟಾ ಸಫಾರಿ SUV ಮೇಲೆ ೬೦ ಸಾವಿರದ ವರೆಗೆ ರಿಯಾಯಿತಿ ದೊರಕುತ್ತಿದೆ. ೨೦೨೧ ರ ಮಾಡೆಲ್ ಮೇಲೆ ೬೦ ಸಾವಿರ ಕ್ಯಾಶ್ ಡಿಸ್ಕೌಂಟ್ ಹಾಗು ಎಕ್ಸ್ಚೇಂಜ್ ಬೋನಸ್ ಕೂಡ ಸಿಗುತ್ತಿದೆ. ಈ ಕಾರಿಗೆ ಕಾರ್ಪೊರೇಟ್ ಡಿಸ್ಕೌಂಟ್ ಸಿಗುತ್ತಿಲ್ಲ, ಟಾಟಾ ಸಫಾರಿ ಕಾರ್ ನ ಬೆಲೆ ೧೪.೯೯ ಲಕ್ಷದಿಂದ ಶುರುವಾಗಿ ೨೩.೧೯ ಲಕ್ಷದವರೆಗೆ ಇದರ ಬೆಲೆ ಇದೆ.

ಟಾಟಾ ಟಿಗೋರ್- ಟಾಟಾ ಟಿಗೋರ್ ಇದು ಉತ್ಪಾಧನೆ ಮಾಡಿದ್ದೆ ಮಾರುತಿ ಡಿಸೈರ್, ಹುಂಡೈ ಆರ್, ಮತ್ತು ಹೋಂಡಾ ಅಮೇಜ್ ಗೆ ಠಕ್ಕರ್ ಕೊಡಲು. ಇದರ ಮೇಲೆ ೩೫ ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಟಾಟಾ ಮೋಟರ್ಸ್ ನೀಡುತ್ತಿದೆ. ೨೦೨೧ ರ ಮಾಡೆಲ್ ಗೆ ೨೫ ಸಾವಿರ ರೂಪಾಯಿಗಳ ವರೆಗೆ ಕ್ಯಾಶ್ ಡಿಸ್ಕೌಂಟ್ ಹಾಗು ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ. ೨೦೨೨ ರ ಮಾಡೆಲ್ ಗೆ ೨೦ ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್ ಹಾಗು ಎಕ್ಸ್ಚೇಂಜ್ ಬೋನಸ್ ಜೊತೆಗೆ ೧೦ ಸಾವಿರ ರೂಪಾಯಿಗಳ ವೆರೆಗಿನ ಕಾರ್ಪೊರೇಟ್ ಡಿಸ್ಕೌಂಟ್ ಕೂಡ ನೀಡುತ್ತಿದೆ. ಈ ಕಾರ್ ನ ಬೆಲೆ ೫.೬೭ ಲಾಸ್ಖದಿಂದ ಶುರುವಾಗುತ್ತದೆ.

ಟಾಟಾ ಟಿಯಾಗೋ- ಈ ಟಾಟಾ ಮಾಡೆಲ್ ಕಾರ್ ನ ಬೆಲೆ ೪.೯೯ ಲಕ್ಷದಿಂದ ಶುರುವಾಗಿ ೭.೦೭ ಲಕ್ಷದವರೆಗೆ ಹೋಗುತ್ತದೆ. ಈ ಕಾರ್ ನ ಮೇಲೆ ೩೦ ಸಾವಿರದವೆರೆಗೆ ರಿಯಾಯಿತಿ ಸಿಗುತ್ತಿದೆ. ೨೦೨೧ ಮಾಡೆಲ್ ಮೇಲೆ ೨೫ ಸಾವಿರದವರೆಗೆ ಕ್ಯಾಶ್ ಡಿಸ್ಕೌಂಟ್ ಹಾಗು ಎಕ್ಸ್ಚೇಂಜ್ ಬೋನಸ್ ನೀಡಿದರೆ, ೨೦೨೨ ರ ಟಿಯಾಗೋ ಮೇಲೆ ೨೦ ಸಾವಿರದವರೆಗೆ ಕ್ಯಾಶ್ ಡಿಸ್ಕೌಂಟ್ ಹಾಗು ಎಕ್ಸ್ಚೇಂಜ್ ಬೋನಸ್ ಜೊತೆಗೆ ೫ ಸಾವಿರ ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ಸಿಗುತ್ತದೆ.

ಟಾಟಾ ನೆಕ್ಸಾನ್- ಟಾಟಾ ನೆಕ್ಸಾನ್ SUV ಮೇಲೆ ೨೫ ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಸಿಗುತ್ತಿದೆ. ಇದರ ೨೦೨೧ ರ ಡೀಸೆಲ್ ಮಾಡೆಲ್ ಮೇಲೆ ೧೫ ಸಾವಿರದ ಎಕ್ಸ್ಚೇಂಜ್ ಬೋನಸ್ ಸಿಗುತ್ತಿದೆ. ಇದಲ್ಲದೆ ಪೆಟ್ರೋಲ್ ಮಾಡೆಲ್ ಮೇಲೆ ೫ ಸಾವಿರ ರೂಪಾಯಿಗಳು ಹಾಗು ಡೀಸೆಲ್ ಮಾಡೆಲ್ ಮೇಲೆ ೧೦ ಸಾವಿರ ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ಕೂಡ ಇದೆ. ಟಾಟಾ ನೆಕ್ಸಾನ್ ಕಾರ್ ನ ಬೆಲೆ ೭.೨೯ ಲಕ್ಷದಿಂದ ಪ್ರಾರಂಭವಾಗಿ ೧೩.೩೪ ಲಕ್ಷದವರೆಗೆ ಇದೆ. ಮೊದಲೇ ಹೇಳಿದ ಹಾಗೆ ಈ ಆಫರ್ ಕೇವಲ ಜನವರಿ ೩೧ ರ ವರೆಗೆ ಮಾತ್ರ ಇರಲಿದೆ.

Leave A Reply

Your email address will not be published.