ಟಾಟಾ ಸ್ಟೀಲ್ ನಲ್ಲಿ ಕೆಲಸ ಮಾಡುವವರಿಗೆ ಒಳಿತಾಗಲು ಹೊಸ ಯೋಜನೆ ತಂದ ರತನ್ ಟಾಟಾ. ಏನಿದು ಹೊಸ ಎರಡು ಯೋಜನೆ?

1,554

ದೇಶದಲ್ಲಿ ಉತ್ತಮವಾಗಿ ಹೆಸರು ಮಾಡಿರುವ ಕಂಪೆನಿ ಟಾಟಾ ಒಡೆತನದ ಟಾಟಾ ಸ್ಟೀಲ್. ಬಹಳಷ್ಟು ಜನ ಈ ಕಂಪೆನಿಯಲ್ಲಿ ಕೆಲಸ ಮಾಡಲು ಕನಸು ಕಾಣುತ್ತಾರೆ. ಒಂದು ವೇಳೆ ಯಾರಾದರೂ ನಿಮ್ಮ ಕುಟುಂಬಸ್ಥರು ಈ ಟಾಟಾ ಸ್ಟೀಲ್ ಅಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತಾದರೇ ನಿಮಗೆ ಇಲ್ಲಿದೆ ಖುಷಿ ಸುದ್ದಿ. ಹೊಸ ಯೋಜನೆ ತರುತ್ತಿದೆ ಟಾಟಾ ಸ್ಟೀಲ್. ಈ ಯೋಜನೆಯಲ್ಲಿ ಎರಡು ಸ್ಕೀಮ್ ತರಲು ಹೊರಟಿದೆ ಕಂಪೆನಿ. ಈ ಎರಡು ಸ್ಕೀಮ್ ಯಾವುದೆಂದರೆ ಮೊದಲನೆಯದು ಜಾಬ್ ಪಾರ್ ಜಾಬ್ ಹಾಗು ಇನ್ನೊಂದು ಈಎಸ್‌ಎಸ್(Early Separation Scheme) ಈ ಯೋಜನೆ ನವೆಂಬರ್ ೧ ರಂದು ಶುರುವಾಗಿದ್ದು, ನೀವೂ ಈ ಯೋಜನೆ ಲಾಭ ಪಡೆಯ ಬಯಸುವುದಾದರೆ ಈ ಲೇಖನ ಪೂರ್ತಿ ಓದಿ.

ಜಾಬ್ ಪಾರ್ ಜಾಬ್ ಯೋಜನೆಯ ಲಾಭ ಪಡೆಯಲು ಗರಿಷ್ಠ ವಯಸ್ಸು ೫೨ ವರ್ಷಗಳಾಗಿರಬೇಕು. ಈ ವಯಸ್ಸಿನ ವ್ಯಕ್ತಿ ತನ್ನ ಮಗ, ಮಗಳು ಅಥವಾ ಅಳಿಯನಿಗೆ ತಮ್ಮ ಕೆಲಸ ವರ್ಗಾವಣೆ ಮಾಡವಹುದಾಗಿದೆ. ಅದೇ ಇನ್ನೊಂದು ಯೋಜನೆಯಾದ Early Separation ಸ್ಕೀಮ್ ನ ಲಾಭ ಪಡೆಯಲು ಕೆಲಸಗಾರರ ವಯಸ್ಸು ೪೫ ಆಗಿರಬೇಕು. ಆದರೆ ಈ‌ ಯೋಜನೆ ಲಾಭ ಕೆಲಸಗಾರರ ಡಿಪಾರ್ಟ್ಮೆಂಟ್ ಹೆಡ್ ನ ಅನುಮತಿ ಸಿಕ್ಕಿದರೆ ಮಾತ್ರ ಸಿಗುತ್ತದೆ.

ಎರಡೂ ಯೋಜನೆ ಒಟ್ಟಿಗೆ ಸ್ವೀಕರಸುವುದಾದರೆ ಈ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಈಎಸ್‌ಎಸ್ ಯೋಜನೆ ಮೂಲಕ ಕೆಲಸ ಬಿಡುವ ಕೆಲಸಗಾರರಿಗೆ ಕೆಲಸ ಬಿಟ್ಟ ನಂತರವೂ ಬೇಸಿಕ್ DA, ಮೆಡಿಕಲ್ ಅಲೌವೆನ್ಸ್, ಕ್ವಾರ್ಟರ್ ವ್ಯವಸ್ಥೆ ಸಿಗುತ್ತದೆ. ಈ ಯೋಜನೆ ಸ್ಕೀಮ್ ಸ್ವೀಕರಿಸಿದ ೬ ವರ್ಷಗಳವರೆಗೆ ಅಥವಾ ೫೦ ವರ್ಷ ವಯಸ್ಸಾಗುವ ವರೆಗೆ ಸಿಗುತ್ತದೆ. ಒಂದು ವೇಳೆ ಕೆಲಸಗಾರರ ಎರಡೂ ಯೋಜನೆ ಒಟ್ಟಿಗೆ ಪಡೆಯಬಯಸಿದರೆ ಕೆಲಸಗಾರರ ವಯಸ್ಸು ೫೦ ವರ್ಷಗಳಾಗಿರಬೇಕು ಎಂದು ನಿಯಮ ಮಾಡಲಾಗಿದೆ. ಇದಕ್ಕಾಗಿ ಕೆಲಸಗಾರರು ತಮ್ಮ ಮನವಿ ಪತ್ರದಲ್ಲಿ ಸ್ವಿಚ್ ಓವರ್ ಎನ್ನುವ ಆಪ್ಷನ್ ತೆಗೆದುಕೊಳ್ಳಬೇಕಾಗುತ್ತದೆ.

ಪರೀಕ್ಷೆ ಮೂಲಕ ಆಯ್ಕೆ.
ಎರಡೂ ಸ್ಕೀಮ್ ಪಡೆದ ಕೆಲಸಗಾರರಿಗೆ ಅವರ ೫೫ ವರ್ಷಗಳವರೆಗೆ ತಮ್ಮ basic DA ಸಿಗುತ್ತದೆ. ೫೫ ವರ್ಷದ ನಂತರವೇ ತಾನು ಹೆಸರಿಸಿದ‌ ವ್ಯಕ್ತಿಗೆ ಕೆಲಸದ ಅವಕಾಶ ಸಿಗುತ್ತದೆ. ಇಷ್ಟಕ್ಕೆ ಕೆಲಸ ಸಿಗುವುದಿಲ್ಲ, ಆ ವ್ಯಕ್ತಿ AITT ಪರೀಕ್ಷೆ ಬರೆದು ತೇರ್ಗಡೆಗೊಂಡರೆ ಮಾತ್ರ ಕೆಲಸ ಪಕ್ಕಾ. ಇಲ್ಲವಾದಲ್ಲಿ ಕೆಲಸಗಾರನಾಗಿ‌ ಆಯ್ಕೆಯಾಗುವುದಿಲ್ಲ. ಪರೀಕ್ಷೆ ತೇರ್ಗಡೆಯಾದರಿಗೆ ತರಭೇತಿ ಕೂಡಾ ನೀಡಲಾಗುತ್ತದೆ.

Leave A Reply

Your email address will not be published.