ಟೈಯರ್ ಕಪ್ಪು ಬಣ್ಣದ್ದು ಮಾತ್ರ ಯಾಕೆ ಇರುತ್ತವೆ? ಬೇರೆ ಬಣ್ಣದ ಟೈಯರ್ ಗಳಿಲ್ಲ ಏಕೆ ಕಾರಣವೇನು?
ಬೇರೆ ಬೇರೆ ಶೈಲಿಯ, ಬೇರೆ ಬೇರೆ ಬಣ್ಣದ ಬೇರೆ ಬೇರೆ ಬ್ರಾಂಡ್ ನ ಶ್ರೀಮಂತ ಕಾರ್ ಆಗಿರಲಿ ಅಥವಾ ಚಿಕ್ಕ ನಾನೋ ಕಾರ್ ಗಳಾಗಿರಲಿ ಇವುಗಳಲ್ಲಿ ಸಾಮಾನ್ಯವಾಗಿ ಕಾಣುವುದು ಒಂದೇ ಒಂದು ಅದು ಆ ಕಾರುಗಳ ಟೈಯರ್. ಎಲ್ಲ ಕಾರ್ ಗಳಲ್ಲಿ ಕಪ್ಪು ಬಣ್ಣದ ಟೈಯರ್ ಗಳು ಮಾತ್ರ ಇರುತ್ತವೆ. ಇದಕ್ಕೆ ಕಾರಣವೇನು? ಒಂದು ಸಮಯದಲ್ಲಿ ಕಾರ್ ಗಳ ಟೈಯರ್ ಬಣ್ಣ ಬಿಳಿ ಹಾಗು beige ಬಣ್ಣದಿಂದ ಕೂಡಿತ್ತು. ನಂತರ ಅದನ್ನು ಬದಲಾಯಿಸಿ ಕಪ್ಪು ಬಣ್ಣದ್ದು ಮಾತ್ರ ಮಾಡಿದರು. ಇದರ ಹಿಂದಿನ ಕಾರಣವೇನು?
೧೯೧೭ ರ ಸಮಯದಲ್ಲಿ ಈ ಟೈಯರ್ ಗಳ ಬಣ್ಣ ಬಿಳಿ ಹಾಗು biege ಆಗಿರುತ್ತಿತ್ತು ಕಾರಣ ಅಂದಿನ ಸಮಯದಲ್ಲಿ ಟೈಯರ್ ಗಳನ್ನೂ ತಯಾರಿಸಲು ನೈಸರ್ಗಿಕ ರಬ್ಬರ್ ಬಳಸಲಾಗುತಿತ್ತು. ಆ ರಬ್ಬರ್ ಬಣ್ಣ ಬಿಳಿ ಹಾಗು biege ಇಂದ ಕೂಡಿರುತ್ತಿತ್ತು. ಅಂದಿನ ಸಮಯದಲ್ಲಿ ನೈಸರ್ಗಿಕ ರಬ್ಬರ್ ಅಲ್ಲಿ ಯಾವುದೇ ಬದಲಾವಣೆ ಮಾಡದೇ ಟೈಯರ್ ತಯಾರಿಸಲಾಗುತ್ತಿತ್ತು. ಕಾಲಕ್ರಮೇಣ ಈ ವಾಹನಗಳ ಬೇಡಿಕೆ ಎಂದು ಜಾಸ್ತಿ ಆಗಲು ಶುರು ಆಯಿತೋ ಅವಾಗ ಗಾಡಿಗಳ ಕಂಪನಿ ಮೇಲೆ ಕಾರ್ಯಕ್ಷಮತೆ ಹಾಗು ಹೊಸ ನಿರೀಕ್ಷೆಗಳು ಹುಟ್ಟಲಾರಂಭಿಸಿದವು.
ಹಾಗಾಗಿ ಕಾರ್ ಕಂಪನಿ ಗಳು ಟೈಯರ್ ಗುಣಮಟ್ಟ ಸುಧಾರಿಸುವತ್ತ ಚಿಂತನೆ ನಡೆಸಲು ಪ್ರಾರಂಭಿಸಿತು. ಹಾಗಾಗಿ ಟೈಯರ್ ಮೇಲೆ ಹೊಸ ಪ್ರಯೋಗಗಳನ್ನು ಶುರು ಮಾಡಿತು. ಈ ಟೈಯರ್ ಅನ್ನು ಗಟ್ಟಿ ಮಾಡಲು ಜಿಂಕ್ ಆಕ್ಸೈಡ್ ಎನ್ನುವ ವಿಶೇಷ ರಾಸಾಯನಿಕವನ್ನು ನೈಸರ್ಗಿಕ ರಬ್ಬರ್ ಗಳಿಗೆ ಸೇರಿಸಲಾಯಿತು. ಇದು ಟೈಯರ್ ಬಲಪಡಿಸಿದಲ್ಲದೆ ದೀರ್ಘ ಕಾಲದವರೆಗೆ ಹಾಳಾಗದೆ ಉಳಿಯಿತು. ಆದರೆ ಟೈಯರ್ ಬಣ್ಣ biege ಆಗಿತ್ತೇ ವಿನಃ ಬದಲಾಗಲಿಲ್ಲ. ೧೯೧೭ ರ ನಂತರ ಈ ರಬ್ಬರ್ ಗೆ ಇಂಗಾಲವನ್ನು ಸೇರಿಸಲಾಯಿತು. ಈ ಕಾರ್ಬನ್ ಇಂದಾಗಿ ಟೈಯರ್ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿತು.
೧೯೧೭ ರ ನಂತರ ಈ ಟೈಯರ್ ಗಳ ಬಣ್ಣ ಬಿಳಿ ಇಂದ ಕಪ್ಪು ಬಣ್ಣಕ್ಕೆ ಬದಲಾಯಿತು. ಈ ರಬ್ಬರ್ ಟೈಯರ್ ಗಳಿಗೆ ಇಂಗಾಲ ಸೇರಿಸುವುದರ ಮುಖ್ಯ ಉದ್ದೇಶ ಅವುಗಳಿಗೆ ಗರಿಷ್ಟ ಶಕ್ತಿಯನ್ನು ನೀಡುವುದಾಗಿದೆ. ಸೂರ್ಯನ ಕಿರಣಗಳು ಮತ್ತು ಬಿಸಿ ಟೈಯರ್ ಗಳಿಗೆ ಹನಿ ಉಂಟು ಮಾಡುತ್ತವೆ. ಟೈಯರ್ ಗಳು ಸೀಳಾಗುವುದರಿಂದ ಡ್ರೈವರ್ ನ ಜೀವಕ್ಕೂ ಕೂಡ ಅಪಾಯವಾಗಬಹುದು. ಹೀಗಾಗಿ ದಿನವಿಡೀ ಬಿಸಿಲಿನಲ್ಲಿ ಇರುವ ಟೈಯರ್ ಗಳಿಗೆ ಕನಿಷ್ಠ ಹಾನಿಯಾಗದಂತೆ ಕಾರ್ಬನ್ ಬಳಸಬೇಕು ಎಂದು ಕಂಪನಿಗಳು ಯೋಚಿಸಿದವು. ಅದೇ ರೀತಿ ಬಳಕೆ ಮಾಡಲು ಕೂಡ ಪ್ರಾರಂಭಿಸಿದವು.