ಡೆಲಿವೆರಿ ಬಾಯ್ ಆಗಿ ಕೆಲಸ ಮಾಡುತ್ತಿದವ ಅದೃಷ್ಟ ರಾತ್ರೋ ರಾತ್ರಿಯೇ ಬದಲಾಗಿ ಹೋಯ್ತು. 6000 ಕೋಟಿ ಅಸ್ತಿ ಗಳಿಸಿದ್ದು ಹೇಗೆ ಗೊತ್ತೇ??
ಜೀವನದಲ್ಲಿ ನಾವು ಊಹೆ ಮಾಡಲು ಕೂಡ ಸಾಧ್ಯವಾಗದ ಕೆಲವು ಘಟನೆಗಳು ನಡೆಯುತ್ತವೆ, ಅವು ಯಾವುದೇ ಸಿನಿಮಾ ಸ್ಕ್ರಿಪ್ಟ್ ಗೆ ಕಡಿಮೆ ಇಲ್ಲ ಎನ್ನುವ ಹಾಗಿರುತ್ತದೆ. ಹೀಗೆ ಪಿಜ್ಜಾ ಡೆಲಿವರಿ ಮಾಡುತ್ತಿದ್ದ ಹುಡುಗನೊಬ್ಬ 6000 ಕೋಟಿ ಆಸ್ತಿ ಒಡೆಯನಾದ ಕಥೆಯನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ಹುಡುಗನ ಹೆಸರು ಬೆನ್ ಫ್ರಾನ್ಸಿಸ್. ಈತ 30 ವರ್ಷವಿದ್ದಾಗ, ಜಿಮ್ ಶಾರ್ಕ್ ಎನ್ನುವ ದೊಡ್ಡ ಬ್ರ್ಯಾಂಡ್ ನ ಸಂಸ್ಥಾಪಕನಗುತ್ತಾನೆ. ಈ ಹುಡುಗನ ಕಥೆ ನಿಜಕ್ಕೂ ಸ್ಪೂರ್ತಿದಾಯಕ. ಎಲ್ಲರೂ ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ.
ಬೆನ್ ಫ್ರಾನ್ಸಿಸ್ ಎನ್ನುವ ಈ ಹುಡುಗ ಓದುವುದರ ಜೊತೆಗೆ ಪಿಜ್ಜಾ ಡೆಲಿವರಿ ಮಾಡುತ್ತಿದ್ದರು. ಕಠಿಣ ಪರಿಶ್ರಮ, ನಂಬಿಕೆ ಮತ್ತು ಸಮರ್ಪಣೆಯಿಂದ ಇಂದು ಈ ಮಟ್ಟವನ್ನು ತಲುಪಿದ್ದಾರೆ. ಒಂದು ಸಾರಿ ಇವರು ಜಿಮ್ ಗೆ ಹೋಗುವ ಸಲುವಾಗಿ ಬಟ್ಟೆ ಖರೀದಿ ಮಾಡಲು ಹೋದಾಗ, ಅಲ್ಲಿದ್ದ ಯಾವ ಬಟ್ಟೆಗಳು ಸಹ ಬೆನ್ ಫ್ರಾನ್ಸಿಸ್ ಅವರಿಗೆ ಇಷ್ಟವಾಗಲಿಲ್ಲ, ಮನೆಗೆ ಬಂದ ಬಳಿಕ ತಮಗಾಗಿ ತಾವೇ ಬಟ್ಟೆಯನ್ನು ಡಿಸೈನ್ ಮಾಡಲು ಶುರುಮಾಡಿದರು. ತಾವು ಡಿಸೈನ್ ಮಾಡಿದ ಬಟ್ಟೆಗಳನ್ನು ಮಾರಾಟ ಮಾಡಲು ಶುರು ಮಾಡಿದರು. ಇವರ ಮೊದಲ ಬಟ್ಟೆ ಅಂಗಡಿ ಶುರುವಾಗಿದ್ದು ಗ್ಯಾರೇಜ್ ನಲ್ಲಿ. 2012ರಲ್ಲಿ ತಂದೆಯ ಗ್ಯಾರೇಜ್ ನಲ್ಲಿ ಬಟ್ಟೆ ಅಂಗಡಿ ಶುರು ಮಾಡಿದರು. ಮಾರಾಟ ಹೆಚ್ಚಾಗಿ, ಲಾಭ ಗಳಿಸಿದರು ಎಂದು ಹೇಳಲಾಗಿದೆ.
ಇದರಿಂದ ಒಂದು ಕಂಪನಿ ಪ್ರಾರಂಭಿಸಿ, ಅದನ್ನು ದೊಡ್ಡ ಮಟ್ಟದಲ್ಲಿ ಎತ್ತರಕ್ಕೆ ಬೆಳೆಸಿಕೊಂಡು ಹೋದರು. ಜಿಮ್ ಶಾರ್ಕ್ ಕಂಪನಿ ಶುರುಮಾಡುವಾಗ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದು ಅವರು ಕೂಡ ಊಹಿಸಿರಲಿಲ್ಲ. ಈ ಸಂಸ್ಥೆಯಲ್ಲಿ ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಧರಿಸಲು ಬಳಸುವ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಕಂಪನಿ ಶುರುವಾದ ಕೆಲವೇ ವರ್ಷಗಳಲ್ಲಿ ಯುಕೆ ನಲ್ಲಿ ಬಾನೆತ್ತರಕ್ಕೆ ಬೆಳೆಯಿತು. ಜಿಮ್ ಶಾರ್ಕ್ ಕಂಪನಿಯಲ್ಲಿ ಬೆನ್ ಫ್ರಾನ್ಸಿಸ್ ಅವರು ಶೇ.70 ರಷ್ಟು ಶೇರ್ ಹೊಂದಿದ್ದಾರೆ. 2021ರ ವರದಿಯ ಪ್ರಕಾರ ಬೆನ್ ಫ್ರಾನ್ಸಿಸ್ ಅವರ ಒಟ್ಟು ಆಸ್ತಿ ₹6,000 ಕೋಟಿ ರೂಪಾಯಿಗಳು. ಇವರ ಬಳಿ ಐಷಾರಾಮಿ ಕಾರ್ ಗಳು ಮತ್ತು ಬೈಕ್ ಗಳ ಸಂಗ್ರಹ ಸಹ ಇದೆ.