ತನ್ನಲ್ಲಿದ್ದ ನಾನೋ ಕಾರನ್ನು ಹೆಲಿಕಾಪ್ಟರ್ ಮಾಡಿದರು ಈ ವ್ಯಕ್ತಿ. ಒಂದು ದಿನದ ಬಾಡಿಗೆ ಎಷ್ಟು ಗೊತ್ತೆ?

588

ದಿನದಿಂದ ದಿನಕ್ಕೆ ಒಂದಲ್ಲ ಒಂದು ಆವಿಷ್ಕಾರ ನಡೆಯುತ್ತಲೇ ಇರುತ್ತದೆ. ಅದೂ ಇತ್ತೀಚಿನ ದಿನಗಳಲ್ಲಿ ಇದು ಸರ್ವೇ ಸಾಮಾನ್ಯ ಸಂಗತಿ ಆಗು ಹೋಗಿದೆ. ಎಲ್ಲರಿಗೂ ಒಂದು ವಾಹನ ಖರೀದಿ ಮಾಡಬೇಕು ಎಂಬ ಮನಸ್ಸು ಇರುತ್ತದೆ. ಅಂತಹವರಲ್ಲಿ 60% ಜನರು ತಮ್ಮ ವಾಹನವನ್ನು ಮೊಡಿಫೈ ಮಾಡುವುದರಲ್ಲೇ ಕಾಲ ಕಳೆಯುತ್ತಾರೆ. ಹೌದು ಅದೆಷ್ಟೋ ಅಂತಹ ಬೈಕ್ ಕಾರ್ ಬಸಗಳನ್ನು ನಾವು ನೋಡಿದ್ದೇವೆ. ಇದನ್ನೇ ಬಳಸಿಕೊಂಡು ಹೊಸ ಮಾದರಿಯ ಮಾಡೆಲ್ ಗಳನ್ನೂ ಕಂಪನಿ ಕೂಡ ಮಾರುಕಟ್ಟೆ ಮಾಡುತ್ತಿದೆ.

ನಾವು ಇಂದು ತಿಳಿಯಲು ಹೊರಟ ವಿಚಾರ ಅಂತಹದೇ . ಏನಿದು ಬನ್ನಿ ತಿಳಿಯೋಣ. ಅವರ ಹೆಸರು ಗುಡ್ಡು ಬಿಹಾರ ಮೂಲದ ವ್ಯಕ್ತಿ ಇವರು. ಸಾಮಾನ್ಯರಂತೆ ಕೆಲಸ ಮಾಡುತ್ತಾ ದುಡಿದು ತಿನ್ನುತ್ತಿದ್ದ. ಈತನಿಗೂ ಎಲ್ಲರ ರೀತಿಯಲ್ಲಿ ಕಾರು ಖರೀದಿ ಮಾಡಬೇಕು ಎಂಬ ಆಶಯ. ಅದೇ ರೀತಿಯಲ್ಲಿ ತಮ್ಮ ಆಸೆಯನ್ನು ಪೂರೈಸಲು ಖರೀದಿ ಮಾಡಿದ್ದೆ ಟಾಟಾ ನ್ಯಾನೋ ಕಾರು. ಹೌದು ಇದನ್ನೇ ಎಲ್ಲಿ ಹೋಗಲು ಕೂಡ ಬಳಸುತ್ತಿದ್ದರು. ಇದೀಗ ಅವರು ತಮ್ಮ ಕಾರನ್ನು ಬದಲಾಯಿಸಿ ಹೆಲಿಕಾಪ್ಟರ್ ಮಾದರಿಯಲ್ಲಿ ತಯಾರಿಸಿದ್ದಾರೆ. ಹೆಲಿಕಾಪ್ಟರ್ ಎಷ್ಟು ಎತ್ತರಕ್ಕೆ ಹಾರುತ್ತದೆ ಎಂದು ಎಲ್ಲರಿಗೂ ಗೊತ್ತು.

ಆದರೆ ಈ ಮೊಡಿಫೈಡ್ ಕಾರು ಹಾರುದಿಲ್ಲ ಬದಲಾಗಿ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತದೆ. ಇದನ್ನು ಹಲವಾರು ಜನರು ಮದುವೆ ಸಮಾರಂಭಗಳಲ್ಲಿ ಮದುಮಗ ಮದುಮಗಳು ಬರಲು ಬಳಸುತ್ತಾರೆ. ಇದೀಗಲೇ ಅದೆಷ್ಟೋ ದಿನಗಳ booking ಆಗಿದೆ ಎಂದು ಹೇಳುತ್ತಾರೆ. ಇವರು ಪ್ರತಿ ಸಮಾರಂಭಕ್ಕೂ 15,000ರೂಪಾಯಿಯಂತೆ ತೆಗೆದುಕೊಳ್ಳುತ್ತಾರೆ. ಇದು ನೋಡಲು ಆಕರ್ಷಕ ಮತ್ತು ನಯನ ಮನೋಹರ ಆಗಿರುತ್ತದೆ. ಇದಕ್ಕೆಂದೇ ಅವರು 2 ಲಕ್ಷ ರೂಪಾಯಿ ವರೆಗಿನ ಖರ್ಚು ಮಾಡಿ ಈ ಮಾಡಿಫಿಕೇಷನ್ ಮಾಡಿದ್ದಾರೆ.

Leave A Reply

Your email address will not be published.