ತನ್ನ ಕಾರನ್ನೇ ಕ್ಲಿನಿಕ್ ಮಾಡಿಕೊಂಡು ರಸ್ತೆ ಬದಿ ವಾಸಿಸುವ ರೋಗಿಗಳಿಗೆ ಉಚಿತ ತಪಾಸಣೆ ಮತ್ತು ಮದ್ದು ನೀಡುತ್ತಿದ್ದಾರೆ. ಯಾರಿವರು?
“ವೈದ್ಯೋ ನಾರಾಯಣೋ ಹರಿಃ” ಎಂಬ ಮಾತನ್ನು ನಾವು ವೇದಗಳಲ್ಲಿ ಕೇಳಿದ್ದೇವೆ. ವೈದ್ಯರು ಎಂದರೆ ದೇವರಿಗೆ ಸಮ. ದೇಹಕ್ಕೆ ಇಂತಹ ಖಾಯಿಲೆ ಬಂದರೂ ಅದನ್ನು ಗುಣ ಪಡಿಸುವ ಶಕ್ತಿ ಇರುವುದು ವೈದ್ಯರಿಗೆ ಮಾತ್ರ. ಏನೇ ಆಪತ್ತು ಬಂದರು ಭಗವಂತನ ಮೊರೆಗೆ ಹೋಗುತ್ತೇವೆ. ಅಂತಹ ಭಗವಂತ ಪ್ರತಿ ಬಾರಿ ಬರಲು ಅಸಾಧ್ಯ ಎಂಬುದರಿಂದ ಇಂತಹ ವೈದ್ಯರನ್ನು ಸೃಷ್ಟಿಸಿದ್ದಾನೆ ಎಂಬ ವಾಡಿಕೆ ಮಾತುಗಳು ಕೂಡ ಇವೆ . ಅದೆಷ್ಟೋ ವೈದ್ಯರುಗಳು ತಾವು ಕಲಿತ ವಿದ್ಯೆಯ ಸಾರ್ಥಕತೆ ಕಾಣುವುದು ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ. ಹೌದು ಅಂತಹುದೇ ಒಬ್ಬರು ಡಾಕ್ಟರ್ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಇವರ ಹೆಸರು ಸುನಿಲ್, ಇವರು ನಮ್ಮ ಕರ್ನಾಟಕದ ಬೆಂಗಳೂರಿನವರು. ಎಲ್ಲಾ ಡಾಕ್ಟರ್ ತರ ಇವರು ಕೂಡ ನಾನು ಕಲಿತು ಒಳ್ಳೆಯ ಆಸ್ಪತ್ರೆಯಲ್ಲಿ ಉದ್ಯೋಗ ಪಡೆಯಬೇಕು ಎಂದು. ಆದರೆ ಜೀವನದಲ್ಲಿ ನಡೆದ ಒಂದು ಘಟನೆ ಅವರ ದಿಕ್ಕನ್ನೇ ಬದಲಿಸಿ ಬಿಟ್ಟಿತು. ಎಂದಿನಂತೆ ಅವರು ಆಸ್ಪತ್ರೆಗೆ ಹೋಗುತ್ತಿದ್ದಾಗ ಅವರ ಕಣ್ಣೆದುರೇ ಒಂದು ಅಪಘಾತ ನಡೆಯಿತು, ಅವರು ತಕ್ಷಣ ಹೋಗಿ ಪ್ರಥಮ ಚಿಕಿತ್ಸೆ ಕೊಟ್ಟು ಹತ್ತಿರದ ಆಸ್ಪತ್ರೆಗೆ ಸೇರಿಸಿದರು.
ಅಲ್ಲಿಂದ ತಮ್ಮ ಕೆಲಸಕ್ಕೆ ಹೋದರು. ಮರುದಿನ ಆ ರೋಗಿಯ ತಾಯಿ ಕರೆ ಮಾಡಿ ಧನ್ಯವಾದ ತಿಳಿಸಿ ಮನೆಗೆ ಬರುವಂತೆ ವಿನಂತಿ ಮಾಡಿಕೊಳ್ಳುತ್ತಾರೆ. ಆಕೆಗೆ ಬೇಸರ ಬೇಡ ಎಂಬಂತೆ ಅವರು ಹೋದಾಗ ಅವರಿಗೆ ಮನೆ ಕಂಡು ಅತೀವ ಬೇಸರ ಆಯಿತು. ಎಷ್ಟೊಂದು ಕಷ್ಟ , ನಾನು ಒಂದು ವೇಳೆ ಬದುಕಿಸದೆ ಹೋಗಿದ್ದಾರೆ ಇವರ ಪರಿಸ್ಥಿತಿ ಹೇಗಿರುತ್ತಿತ್ತು. ಡಾಕ್ಟರ್ ಫೀಸ್ ಕಟ್ಟಲು ಕೂಡ ದುಡ್ಡಿಲ್ಲ ಎಂದು ತಿಳಿದು ಬಂತು. ಹೀಗೆ ಈ ಒಂದು ಘಟನೆ ಅವರ ಎಲ್ಲಾ ಆಸೆಗಳನ್ನು ಬದಿಗೊತ್ತಿ ಸಾಮಾನ್ಯ ಜನರ ಸೇವೆಗಾಗಿ ಬದುಕಬೇಕು ಎಂಬ ನಿರ್ಧಾರ ಮಾಡುವಂತೆ ಮಾಡಿತು.
ಆರಂಭದಲ್ಲಿ ಶನಿವಾರ ಮತ್ತು ಭಾನುವಾರ ಅವರು ರೋಗಿಗಳು ಇದ್ದಲ್ಲಿಗೆ ಹೋಗಿ ಚಿಕಿತ್ಸೆ ಕೊಡಲು ಆರಂಭಿಸಿದರು. ಆದರೂ ಮನಸಿಗೆ ಸಮಾಧಾನ ಇಲ್ಲದೆ ಕೊನೆಗೆ ತಮ್ಮ ಕೈಲಿದ್ದ ಒಳ್ಳೆಯ ಕೆಲಸವನ್ನು ಬಿಟ್ಟು ತಮ್ಮದೇ ಕಾರ್ ಅನ್ನು ಮೊಬೈಲ್ ಕ್ಲಿನಿಕ್ ಮಾಡಿಕೊಂಡು ಫೌಂಡೇಶನ್ ಒಂದನ್ನು ಕಟ್ಟಿಕೊಂಡು ಎಲ್ಲಾ ಬಡವರ ಸೇವೆಯನ್ನು ಮಾಡುತ್ತಿದ್ದಾರೆ. ಕೊವಿದ್ ಸಮಯದಲ್ಲೂ ಎಗ್ಗಿಲ್ಲದೆ ದುಡಿದಿದೆ ಈ ಜೀವ. ಈಗ ಇದನ್ನೇ ತಮ್ಮ ಕರ್ತವ್ಯ ಎಂದು ಭಾವಿಸಿ ದುಡಿಯುತ್ತಿದ್ದಾರೆ ಇವರು. ಇವರ ಈ ಒಳ್ಳೆಯ ಗುಣಕ್ಕೆ ದೇವರು ಇವರನ್ನು ಸಂತಸವಾಗಿದೆ ಇಡಲಿ ಎಂದು ಹಾರೈಸುವ. ಇಂತಹ ಡಾಕ್ಟರ್ ಗಳನ್ನ ನೋಡಿದಾಗ ನಿಜವಾಗಲೂ ಅನಿಸುತ್ತದೆ “ವೈದ್ಯೋ ನಾರಾಯಣೋ ಹರಿಃ” ಎಂದು.