ತನ್ನ ತಂದೆ ಅಂದು ವಿದ್ಯಾಭ್ಯಾಸಕ್ಕಾಗಿ ಮನೆಯ ಜಮೀನನ್ನು ಮಾರಿದರು, ಇಂದು ಮಗಳು ಅಪ್ಪ ತಲೆ ಎತ್ತಿ ನಿಲ್ಲುವಂತಹ ಸಾಧನೆ ಮಾಡಿದ್ದಾಳೆ ಏನಿದು ಕಥೆ?

1,854

ಬಡತನ ಎಂಬುವುದು ಹಾಗೆ ನೋಡಿ ಎಷ್ಟೋ ಜನರು ತಮ್ಮ ಕನಸುಗಳ ಗುತ್ತಿಯನ್ನು ಕಟ್ಟಿ ಮನೆಯೊಳಗೆ ಕುಳಿತುಕೊಳ್ಳುವ ಹಾಗೆ ಮಾಡುತ್ತದೆ. ಜೀವನದಲ್ಲಿ ಏನೋ ಮಾಡಬೇಕು ಎಂಬ ಛಲ ಮನಸಿನ ಒಳಗೆ ಇದ್ದರೂ ಬಡತನ ಎಂಬ ಭೂತ ಅವರ ಬೆನ್ನ ಮೇಲೆ ಏರಿ ಕುಳಿತು ಕೊಳ್ಳುತ್ತದೆ. ಹಾಗೆಯೇ ಕೆಲವರು ಮನೆಯಲ್ಲಿ ಏನೇ ಮಾಡಲು ತಯಾರಿದ್ದರು ಮನೆಯವರ ಪ್ರೋತ್ಸಾಹ ಎಲ್ಲೆಡೆ ಯಾವುದೋ ದಾರಿ ಹಿಡಿದು ಹೋಗುತ್ತಾರೆ. ಆದರೆ ಇಂದು ನಾವು ತಿಳಿಯಲು ಹೊರಟ ಈ ಕಥೆಯು ಬಡತನ ಒಂದೇ ಕಾರಣ ಅಲ್ಲ ಸಾಧನೆಗೆ, ಮನೆಯವರ ಪ್ರೋತ್ಸಾಹ ಒಂದಿದ್ದರೆ ಬಡತನವನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಬಹುದು ಎಂದು ಹೇಳುತ್ತದೆ.

ಇವರ ಹೆಸರು ಊರ್ವಶಿ ಸೆಂಗರ್ , ಮಧ್ಯ ಪ್ರದೇಶದ ಗ್ವಾಲಿಯರ್ ನವರು. ಕಡು ಬಡತನದಿಂದ ಬೆಳೆದು ಬಂದ ಇವರು ಚಿಕ್ಕಂದಿನಿಂದಲೇ ಕಷ್ಟ ಏನು ಎಂಬುವುದರ ಅರಿವು ಪಡೆದು ಛಲ ಬಿಡದೆ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಛಲ ಹಿಡಿದ ಚಲದಂಕ ಮಲ್ಲೆ. ಮನೆಯಲ್ಲಿ ಓದಲು ಆಗದೆ ಕೆಲಸಕ್ಕೆ ಹೋಗಲು ಆಗದೆ ತನ್ನ ಗುರಿ ತಲುಪುವ ವರೆಗೂ ಯಾವುದೇ ರೀತಿಯಲ್ಲೂ ತಾನು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಓದು ಮುಂದುವರೆಸಿದಳು. ಅವರ ತಂದೆಯು ಅದಕ್ಕೆ ಸಂಪೂರ್ಣ ಬೆಂಬಲವಾಗಿದ್ದರು.

ಒಂದು ಸಮಯ ಹೇಗೆ ಬಂತೆಂದರೆ ವಿಧ್ಯಾಭ್ಯಾಸಕ್ಕೆ ಹಣ ಇಲ್ಲ ಎಂದು ಮನೆಯ ಜಮೀನನ್ನು ಮಾರಿದರು ಅವರ ತಂದೆ. ಆದರೆ ತಂದೆಯ ಮರ್ಯಾದೆ ಹೋಗಲು ಬಿಡಲಿಲ್ಲ ಕಷ್ಟ ಪಟ್ಟು ಓದಿ ಓದಿ ಈಕೆ ಐಎಎಸ್ ಅಧಿಕಾರಿ ಆಗಿ ಬಂದರು. ಅದೆಷ್ಟೇ ಕಷ್ಟ ಇದ್ದರೂ ಆಕೆ ಛಲ ಬಿಡದೆ ಓದಿದರ ಪರಿಣಾಮವಾಗಿ ಆಕೆ ಐಎಎಸ್ ಅಧಿಕಾರಿ ಆದರು. ಇದರಿಂದ ಎಲ್ಲರೂ ಸ್ಫೂರ್ತಿ ಪಡೆದು ಜೀವನದಲ್ಲಿ ಸೋಲನ್ನು ಕಾಣದೆ ಕಷ್ಟಗಳ ಮೆಟ್ಟಿ ನಿಲ್ಲಬೇಕು.

Leave A Reply

Your email address will not be published.