ತಪ್ಪು ಸರಿ ಮಾಡಿಕೊಂಡ ಮೇಲು ಬಿಡದ ಕನ್ನಡಿಗರು, ಅರವಿಂದ್ ಲಿಂಬಾವಳಿ ರವರು ಗೂಗಲ್ ಶಾಕ್ ನೀಡಲು ಸಿದ್ಧತೆ. ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇಂದು ಬೆಳ್ಳಂಬೆಳಗ್ಗೆ ಕನ್ನಡಿರಿಗೆಲ್ಲಾ ಒಂದು ಆಘಾತಕರ ಸುದ್ದಿ ಕಂಡು ಬಂದಿತು. ಗೂಗಲ್ ನಲ್ಲಿ ಭಾರತದ ಅತ್ಯಂತ ಕೊಳಕು ಭಾಷೆ ಯಾವುದು ಎಂದು ಸರ್ಚ್ ಮಾಡಿದರೇ ಅದು ಕನ್ನಡ ಎಂದು ತೋರಿಸುತ್ತಿತ್ತು. ಇದು ಹಲವಾರು ಸ್ವಾಭಿಮಾನಿ ಕನ್ನಡಿಗರಿಗೆ ಮನಸ್ಸಿಗೆ ನೋವಾಗಿತ್ತು. Debtconsolidationsquad ಎಂಬ ಖಾಸಗಿ ವೆಬ್ ಸೈಟ್ ಈ ತಪ್ಪು ಮಾಹಿತಿ ಪ್ರಕಟಿಸಿತ್ತು.
ಇದನ್ನ ಪ್ರತಿಷ್ಠೆಗೆ ತೆಗೆದುಕೊಂಡ ಕನ್ನಡಿಗರು , ಸಾಮಾಜಿಕ ಜಾಲತಾಣಗಳಲ್ಲಿ ಬೆಳಗ್ಗಿನಿಂದ ನಾವು ಕನ್ನಡಿಗರು ಎಂಬ ಅಭಿಯಾನ ಶುರು ಮಾಡಿದರು. ಈ ಅಭಿಯಾನ ಯಾವ ರೀತಿ ತನ್ನ ವ್ಯಾಪ್ತಿಯನ್ನ ಪಸರಿಸಿತೆಂದರೇ, ವಿಶ್ವಾದ್ಯಂತ ಇರುವ ಕನ್ನಡಿಗರೆಲ್ಲರೂ ಕೈ ಜೋಡಿಸಿದರು. ಗೂಗಲ್ ನಲ್ಲಿ ಇದ್ದ ಆ ಮಾಹಿತಿಯನ್ನ ತಪ್ಪು ಎಂದು ರಿಪೋರ್ಟ್ ಮಾಡಿದರು. ಕೇವಲ ರಿಪೋರ್ಟ್ ಅಷ್ಟೆ ಅಲ್ಲದೇ, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆಯ ಸೊಗಡನ್ನ ಹಾಗೂ ಗರಿಮೆಯನ್ನ ಗೂಗಲ್ ಗೆ ತಿಳಿಸುವಂತೆ ಮಾಡಿತು.
ಇದಕ್ಕೆ ಪುಷ್ಠಿ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್ ಲಿಂಬಾವಳಿ ಸಹ ಪತ್ರಿಕಾಗೋಷ್ಠಿ ನಡೆಸಿ, ಗೂಗಲ್ ಸಂಸ್ಥೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದರು. ಅದಲ್ಲದೇ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಿಗೆ , ಗೂಗಲ್ ಸಂಸ್ಥೆಗೆ ಈ ಸಂಭಂದಿತ ನೋಟಿಸ್ ಸಹ ಕಳಿಸಿ ಎಂದು ಹೇಳಿದರು.
ಈ ಎಲ್ಲಾ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸಿದ ಗೂಗಲ್ ಈಗ ತನ್ನ ತಪ್ಪನ್ನು ತಿದ್ದಿಕೊಂಡಿದೆ. ಇದಕ್ಕೆ ಸ್ಪಷ್ಟನೆ ಸಹ ನೀಡಿರುವ ಗೂಗಲ್, ಭಾರತದಲ್ಲಿ ಕೆಟ್ಟ ಭಾಷೆ ಎಂಬುದು ಯಾವುದು ಇಲ್ಲ, ಎಲ್ಲಾ ಭಾಷೆಗಳಿಗೂ ತನ್ನದೇ ಆದ ಗೌರವವಿದೆ. ಕನ್ನಡ ಭಾಷೆ ಕರ್ನಾಟಕದ ಹೆಮ್ಮೆ ಎಂದು ಘೋಷಿಸಿದೆ. ಅದರ ಜೊತೆ ಈ ವಿವಾದಕ್ಕೆ ಕಾರಣವಾಗಿದ್ದ ಆ ವೆಬ್ ಸೈಟನ್ನು ಸಹ ಗೂಗಲ್ ತನ್ನ ಸರ್ಚ್ ಇಂಜಿನ್ ನಿಂದ ಸಂಪೂರ್ಣವಾಗಿ ತೆಗೆದು ಹಾಕಿದೆ. ಒಟ್ಟಿನಲ್ಲಿ ಶಾಂತಿಪ್ರಿಯರಾದ ಕನ್ನಡಿಗರ ತಂಟೆಗೆ ಯಾರೇ ಬಂದರೂ ಅವರನ್ನ ಕನ್ನಡಿಗರ ಒಗ್ಗಟ್ಟೇ ಹಿಂದೆ ಸರಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಯಿತು. ಈ ವಿವಾದದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ. ಜೈ ಕನ್ನಡ, ಜೈ ಕರ್ನಾಟಕ.