ತಿಂಗಳಿಗೆ 15 ರೂಪಾಯಿ ದುಡಿಯುತ್ತಿದ್ದ ಈ ವ್ಯಕ್ತಿ ಇಂದು 1600 ಕೋಟಿ ವಹಿವಾಟು ನಡೆಸುವ ಕಂಪನಿ ಮಾಲೀಕ. ಇವರು ನಡೆಸಿದ ಉದ್ಯಮ ಯಾವುದು?

986

ಜೀವನದಲ್ಲಿ ಕಷ್ಟಗಳು ಯಾವಾಗಲೂ ಬರುತ್ತಲೇ ಇರುತ್ತದೆ. ಕಷ್ಟಕ್ಕೆ ಮಣಿದು ಕೂತರೆ ಜೀವನ ಅಲ್ಲಿಯೇ ಉಳಿದು ಹೋಗುತ್ತದೆ. ಬದಲಾಗಿ ಅದಕ್ಕೆ ಸರಿಯಾದ ಮಾರ್ಗದಲ್ಲಿ ನಡೆದರೆ ಯಶಸ್ಸು ಹೆಗಲೇರಿ ಕುಳಿತು ಕೊಳ್ಳುತ್ತದೆ. ಹಾಗೆಯೇ ಒಬ್ಬ ಮಾದರಿ ವ್ಯಕ್ತಿಯ ಕಥೆ ನಾವಿಂದು ತಿಳಿಯೋಣ. ಚಿಕ್ಕಂದಿನಿಂದಲೇ ಕಷ್ಟ, 16 ವರ್ಷ ಪ್ರಾಯ ಇರುವಾಗ ತನ್ನ ತಂದೆ ಮತ್ತು ಸಹೋದರನನ್ನು ಕಳೆದು ಕೊಂಡ ಇವರು, ತಾವೇ ಕೆಲಸಕ್ಕೆ ಹೋಗಿ ತಾಯಿಯನ್ನು ಸಾಕುವ ಪರಿಸ್ಥಿತಿಗೆ ಬಿದ್ದರು.

ಸ್ನೇಹಿತರ ಮಾತಿನಂತೆ ಇವರು ಹಿಂದೆ ಮುಂದೆ ನೋಡದೆ ಮುಂಬಯಿ ಕಡೆ ಪ್ರಯಾಣ ಬೆಳೆಸಿದರು. ಜೀವನ ಎಷ್ಟೊಂದು ಪಾಠ ಕಲಿಸುತ್ತದೆ ನೋಡಿ. ಮುಂಬಯಿ ಇಳಿಯುವಾಗ ಬಿಡಿಕಾಸು ಇರಲಿಲ್ಲ ಇವರ ಬಳಿ. ಅದು ಹೇಗೋ ಕೆಲಸ ಹುಡುಕಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಕೊಳ್ಳುತ್ತಾರೆ. ತಿಂಗಳಿಗೆ 15 ರೂಪಾಯಿ ಸಂಬಳ ಮತ್ತು ಉಳಿದುಕೊಳ್ಳಲು ಕೊಠಡಿ. ಆ ಕೊಠಡಿಯಲ್ಲಿ 40 ಕ್ಕುಂತಲೂ ಹೆಚ್ಚು ಮಂದಿ ವಾಸ ಮಾಡುತ್ತಿದ್ದರು. ಕಂಪನಿಯಿಂದ ಕೊಠಡಿಗೆ ಹೋಗಲು 40ಕಿಮೀ . ನಡೆದುಕೊಂಡೇ ಹೋಗುತ್ತಿದ್ದರು. ಅಲ್ಪ ಸ್ವಲ್ಪ ಹಣ ಉಳಿಸಿ ತಾಯಿಗೆ ಕಳುಹಿಸಿ ಕೊಡುತ್ತಿದ್ದರು. ಜೀವನದಲ್ಲಿ ಕಷ್ಟಗಳನ್ನು ಕಂಡಾಗ ಸಣ್ಣ ವಯಸ್ಸಿಗೇ ಮೆಚುರಿಟಿ ಬಂದು ಬಿಡುತ್ತದೆ ಎನ್ನುತ್ತಾರೆ.

ಹೀಗೆ ಕೆಲಸ ಮಾಡುತ್ತಿದ್ದ ಕಂಪನಿ ನಷ್ಟದ ಹಾದಿ ಹಿಡಿದಿತ್ತು. ಆಗ ಕಂಪನಿ ಮಾಲಕರು ಕಂಪನಿಯನ್ನು ಮಾರುವ ನಿರ್ಧಾರಕ್ಕೆ ಬರುತ್ತಾರೆ. ಎಲ್ಲರನ್ನೂ ಕೆಲಸ ಬಿಡುವಂತೆ ಸೂಚಿಸುತ್ತಾರೆ. ಆದರೆ ಈ ವ್ಯಕ್ತಿ ಮಾತ್ರ ಹೊಸ ಸವಾಲಿಗೆ ಸಿದ್ಧರಾಗುತ್ತಾರೆ. ತಾವೇ ಆ ಕಂಪನಿಯನ್ನು ಖರೀದಿ ಮಾಡುವುದಾಗಿ ಹೇಳುತ್ತಾರೆ. ಮತ್ತು ಕಂಪನಿಯ ಯಾರು ಕೆಲಸ ಬಿಡಬೇಕಾಗಿ ಇಲ್ಲ ತಾನೆ ಅವರನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಅವರ ಹೆಸರೇ ಸುದೀಪ್ ದತ್ತ, ESS DEE Aluminum PVT LTD ಕಂಪನಿಯ ಮಾಲಕ.

ಇವರು ಅದನ್ನು ಕೈಗೆತ್ತಿಕೊಂಡು ಸ್ವಲ್ಪ ಹಣ ಕೊಟ್ಟು ಮತ್ತೆ ಬರುವ ಲಾಭದಲ್ಲಿ ಪಾಳು ನೀಡುವುದಾಗಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಹೀಗೆ ಆರಂಭಿಸಿದ ವಹಿವಾಟು ಹಿಂದೆ ತಿರುಗಿ ನೋಡದೆ ಹಗಲು ಇರುಳು ಎನ್ನದೆ ದುಡಿದರು. ದೊಡ್ಡ ದೊಡ್ಡ ಕಂಪನಿಗಳಿಗೆ ಪೈಪೋಟಿ ಕೊಟ್ಟು ಇವರು ಎದ್ದು ನಿಂತರು. ಇಂದು ಅವರ ಈ ಕಂಪನಿ BSE ಮತ್ತು NSE ಅಲ್ಲಿ ಲಿಸ್ಟಿಂಗ್ ಕೂಡ ಆಗಿದ್ದು ವಾರ್ಷಿಕ 1600ಕೋಟಿ ರೂಪಾಯಿ ವಹಿವಾಟು ನಡೆಸುತ್ತಾ ಇದೆ. ಅದೇನೇ ಇರಲಿ ಜೀವನದಲ್ಲಿ ಕಷ್ಟ ಎಂದು ಬಂದಾಗ ಅದನ್ನು ಎದುರಿಸಬೇಕು ಎಂಬುವುದಕ್ಕೆ ಇವರೇ ನೈಜ ಉದಾಹರಣೆ.

Leave A Reply

Your email address will not be published.