ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಬಗೆಗಿನ ಈ ವಿಷಯಗಳು ನಿಮಗೆ ಗೊತ್ತಿದೆಯೇ ??
ಕೊರಗ ತನಿಯ ಕೊರಗಜ್ಜನಾದ ಕಥೆ
ಪಣಂಬೂರಿನ ಓಡಿ ಮತ್ತು ಅಚ್ಚು ಮೈರೆದಿ ಎಂಬ ಕೊರಗ ದಂಪತಿಗಳಿಗೆ ಒಂದು ಗಂಡು ಮಗು ಹುಟ್ಟುತ್ತದೆ. ಅವನಿಗೆ ತನಿಯ ಎಂಬ ಹೆಸರನ್ನು ಇಟ್ಟಿದ್ದರು. ತನಿಯಯನಿಗೆ ಕೇವಲ 30 ದಿವಸವಾಗುತ್ತಲೇ ಅವನ ತಂದೆ ಮತ್ತು ತಾಯಿ ವಿ’ಧಿವ’ಶವಾಗುತ್ತಾರೆ. ತನಿಯ ಅನಾ’ಥನಾಗುತ್ತಾನೆ. ಅವನು ಅಳುತ್ತಿರುವಾಗ ಬೈದೆರೆ ಜಾತಿಗೆ ಸೇರಿದ ಮೈರಕ್ಕ ಬೈದೆದಿ ಮತ್ತು ಅವರ ಮಗ ಚೆನ್ನಯ್ಯನನ್ನು ತನಿಯ ನೋಡುತ್ತಾನೆ. ಮೈರಕ್ಕನ ಬಳಿ ಬಂದು ಅಮ್ಮಾ ನನಗೆ ಬಟ್ಟೆ ಕೊಡಿ ಎಂದು ಕೇಳುವಾಗ ಅವರು ತನ್ನ ತಲೆಯ ನೀರು ಹೀ’ರಿಕೊಳ್ಳಲು ಕಟ್ಟಿದ ಬಟ್ಟೆಯನ್ನೇ ಆ ಮಗುವಿಗೆ ಕೊಟ್ಟು ಮಗುವನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾರೆ.
ಮೈರಕ್ಕ ಶೇಂದಿ ಮಾರುವವರಾಗಿದ್ದರು.ಕೆಲಸವನ್ನು ಅತ್ಯಂತ ಶ್ರದ್ದೆಯಿಂದ ಮಾಡುತ್ತಿದ್ದ ತನಿಯ ಎಷ್ಟೇ ದೊಡ್ಡ ಕೆಲಸವಾದರೂ ಅದನ್ನು ಮಾಡಿ ಮುಗಿಸುತ್ತಿದ್ದ. ಹೀಗಿರುವಾಗ ಒಂದು ದಿನ ತನಿಯನ ಬಳಿ ತಂದ ಶೇಂದಿಯನ್ನು ಮಂಡೆಗೆ ತುಂಬಿಸಲು ಹೇಳುತ್ತಾರೆ. ಅವನು ತುಂಬಿಸುತ್ತಾನೆ. ಆದರೆ ಇಲ್ಲಿ ವಿಚಿತ್ರ ಏನೆಂದರೆ ಏಳು ರಾತ್ರಿ ಏಳು ಹಗಲು ಕಳೆದರೂ ಶೇಂದಿ ಖಾಲಿಯಾಗುವುದಿಲ್ಲ. ಕಡೆಗೆ ಆ ಶೇಂದಿಯನ್ನು ಕದ್ರಿಯ ಮಂಜುನಾಥ ದೇವರಿಗೆ ಶೇಂದಿ ಎಲ್ಲಾ ಖಾಲಿಯಾದ್ರೆ ಕಂಚಿನ ಪೆಂಡಕೆಯನ್ನು ಅರ್ಪಿಸುತ್ತೇನೆಂದು ಹರಕೆ ಮಾಡುತ್ತಾನೆ. ಆವಾಗ ಶೇಂದಿ ಎಲ್ಲಾ ಖಾಲಿಯಾಗುತ್ತದೆ. ಖಾಲಿಯಾದ ಖುಷಿಯಲ್ಲಿ ತನಿಯನಿಗೆ ಅಡಿಕೆ ಮರದ ಎಲೆಯಿಂದ ಪರಿಣಲಿಯನ್ನು ಮಾಡಿಕೊಡುತ್ತಾರೆ.
ಹೀಗೆ ಕಾಲ ಕಳೆದಂತೆ ತನಿಯ ದೊಡ್ಡವನಾಗುತ್ತಾನೆ. ಕದ್ರಿಗೆ ಹೇಳಿದ ಹರಕೆಯ ಪ್ರಕಾರ ಮೈರಕ್ಕ ಬೈದಿದಿ ಕಂಚಿನ ಪೆಂಡಕೆಯನ್ನು ಮಾಡಿಸುತ್ತಾಳೆ. ಅದನ್ನು ಎತ್ತಲು ಏಳು ಜನರ ಸಹಾಯ ಬೇಕಿತ್ತು. ಏಳು ಮಂದಿಯ ಊಟ, ಶೇಂದಿ, ಎಲೆ ಅಡಿಕೆಯನ್ನು ತಿಂದು ಏಳು ಜನ ಎತ್ತಿ ಹರಕೆ ತೀರಿಸುವ ಬದಲು ಅವನೊಬ್ಬನೇ ಅದನ್ನೆತ್ತಿಕೊಂಡು ಹೋಗಿ ಕದ್ರಿಯ ದೇವಾಸ್ಥಾನ ಹರಕೆಯನ್ನು ತೀರಿಸುತ್ತಾನೆ. ಅದನ್ನು ನೋಡಿದ ಜನರಿಗೆ ಆಶ್ಚರ್ಯವೆನಿಸುತ್ತದೆ. ತನಿಯ ಒಬ್ಬ ಅಸಾ’ಮಾನ್ಯ ವ್ಯಕ್ತಿ ಎಂದು ಎಲ್ಲರೂ ತಿಳಿಯುತ್ತಾರೆ.
ಕಳೆದು ಹೋದ ವಸ್ತು ಸಿಗುತ್ತದೆ: ಇಂದಿಗೂ ಕಳೆದು ಹೋದ ವಸ್ತುಗಳಿಗೆ ಜನರು ಮೊದಲು ಹೇಳುವ ಹೆಸರು ಕೊರಗಜ್ಜ, ಆತನನ್ನು ಮನದಲ್ಲೇ ನೆನೆದು ಮುಂದೆ ಹರಕೆ ತೀರಿಸುತ್ತಾರೆ. ಸಾಧ್ಯವಾದರೆ ಹೋಗಿ ತಾಂಬೂಲ, ಸೇಂದಿ, ಮಧ್ಯ ಇಟ್ಟು ಪ್ರಾರ್ಥಿಸುತ್ತಾರೆ. ರಾತ್ರಿ ಹೊತ್ತು ದೀಪ ಹಾಕುವಂತಿಲ್ಲ: ಕುತ್ತಾರು ಅಜ್ಜನ ಕಟ್ಟೆ ಬಳಿ ಸಂಜೆಯ ನಂತರ ಯಾವುದೇ ಬೆಂ’ಕಿ ಕಿಡಿಯನ್ನು ಸಹ ಹೊ’ತ್ತಿಸುವುದಿಲ್ಲ, ಹೊ’ತ್ತಿಸಲು ಬಾರದು ಎಂಬ ನಿಯ’ಮವಿದೆ. ಗಾಡಿಗಳು ಆ ರಸ್ತೇಲಿ ದೀಪ ಹಾಕದೆ ಬರುತ್ತಾರೆ. ಅಕಸ್ಮಾತ್ ಯಾರಾದರೂ ಮೀ’ರಿದರೆ ಅವರಿಗೆ ಕೆ’ಡುಕೆ ಆಗಿದ್ದು ಅನೇಕ ಉದಾಹರಣೆ ಇವೆಯಂತೆ.
ಕೊರಗಜ್ಜನ ಅವಹೇಳನ: ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಕ್ತಿ ಒಬ್ಬ ಟೀ’ಕೆ ಮಾಡಿ ತನ್ನ ತಾಯಿಗೆ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿ ಮತ್ತೆ ಸೇವೆ ಸಲ್ಲಿಸಿ ನಿರಾಳನಾದ. ಈ ರೀತಿಯಾಗಿ, ದೇವಸ್ವ ಅಪಹರಣ, ಅಶ್ಲೀ’ಲ ಪಧಾರ್ಥಗಳನ್ನು ಹುಂಡಿಯಲ್ಲೂ ಹಾಕಿ ಕ’ಷ್ಟಗಳನ್ನು ಅನುಭವಿಸಿದ್ದಾರೆ.ಇದೆಲ್ಲ ಸುದ್ದಿ ಮಾಧ್ಯಮದಲ್ಲಿ ಈಗಾಗಲೇ ಬಂದಿರುವ ಸತ್ಯಗಳು.
ಆರಾಧನೆ: ಕುತ್ತಾರು ಕಟ್ಟೆಯ ಮೂಲ ದೇವರುಗಳಾದ ಪಂಜನ್ದಾಯ ಮತ್ತು ಬಂಟ ದೈವಗಳ ನಡುವೆ ಹೊರಗಿನಿಂದ ಬಂದ ಅರಸು ದೇವತೆಗಳು ಕೂರುತ್ತಾರೆ, ಆಗ ಮೂಲ ದೇವತೆಗಳು ಕೊರಗಜ್ಜನ ಸಹಾಯ ಬೇಡಿ ಅದಕ್ಕೆ ಪರ್ಯಾಯವಾಗಿ ಪೂಜಾ ಸ್ಥಾನವನ್ನು ನೀಡುತ್ತಾರೆ. ಕೊರಗಜ್ಜ ತನ್ನ ಮಾಯ ಶ’ಕ್ತಿಯಿಂದ ದನದ ರ’ಕ್ತವನ್ನು ಚೆ’ಲ್ಲಿ ಅರಸು ದೇವತೆಗಳನ್ನು ಓ’ಡಿಸುತ್ತಾನೆ. ಡೆಕ್ಕಾರು, ಬೊಲ್ಯ,ಸೋಮೇಶ್ವರ, ದೇರಳಕಟ್ಟೆ, ಕುತ್ತಾರು ಸೇರಿ ಒಟ್ಟು 7 ಕಲ್ಲುಗಳು ಕೋಲ ಸೇವೆಗೆ ಸೇರುತ್ತದೆ. ಸಂಜೆಯ ನಂತರ ಮಹಿಳೆಯರಿಗೆ ಪ್ರ’ವೇಶವಿಲ್ಲ. ಅಗೆಲು ಸೇವೆ ಮತ್ತು ಕೋಲ: ಅಗೆಲು ಸೇವೆಯಲ್ಲಿ ಹುರುಳಿ, ಬಸಳೆ, ಮೀನು, ಕೋಳಿ,ಉಪ್ಪಿನಕಾಯಿ, ಚಕ್ಕುಲಿ,ಸೇಂದಿ, ಮ’ಧ್ಯ, ತಾಂಬೂಲ ಅಜ್ಜನಿಗೆ ಬಡಿಸಲಾಗುತ್ತದೆ.