ತುವಾಲು ದೇಶದ ಈ ಪ್ರಧಾನಿ ಸಮುದ್ರದಲ್ಲಿ ನಿಂತು ಭಾಷಣ ಮಾಡಿದ್ದು ಯಾಕೆ? ಏನಿದರ ಹಿಂದಿನ ಕಥೆ?
ಯು ಎನ್ ದೇಶಗಳ ಜಲ ಪರಿವರ್ತನಾ ಸಂಭೆಯಲ್ಲಿ ತುವಾಲು ದೇಶದ ಪ್ರಧಾನಿಯೊಬ್ಬರು ಕೋಟು ಬೂಟು ಹಾಕಿಕೊಂಡು ಬಂದು ಸಮುದ್ರ ಕಿನಾರೆಯಲ್ಲಿ ಮೊಣಕಾಲಿನವರೆಗೆ ನೀರು ಬರುವ ತನಕ ನಿಂತು ಭಾಷಣ ಮಾಡಿದ್ದಾರೆ. ಹೌದು ಇದೀಗ ಎಲ್ಲಾ ಜನರಿಗೆ ಆಶ್ವರ್ಯ ಮೂಡಿಸಿದೆ. ಈ ಸಭೆಯು ಪ್ರಾಕೃತಿಕ ಬದಲಾವಣೆಗಳ ಕುರಿತು ನಡೆಯುವ ಸಭೆ ಆಗಿದ್ದು ಎಲ್ಲಾ ದೇಶಗಳೂ ಸೇರಿ ಮುವರುವ ಬದಲಾವಣೆಗಳ ಕುರಿತು ಮಾತುಕತೆ ನಡೆಸಿ ಬರುವ ಸಮಸ್ಯೆಗೆ ಸಿದ್ದರಾಗುವಂತೆ ಕರೆ ಕೊಡುತ್ತಾರೆ. ಅದನ್ನು ಹೇಗೆ ನಿಭಾಯಿಸಬೇಕು ಎಂಬ ನಿರ್ಧಾರಗಳು ಕೈಗೊಳ್ಳುತ್ತಾರೆ. ಹಾಗೆ ನಡೆದ ಸಭೆಯಲ್ಲಿ ಈ ಸನ್ನಿವೇಶ ನಡೆದಿದೆ. ಹೌದು ಯಾಕೆ ಪ್ರಧಾನಿ ಹೀಗೆ ಮಾಡಿದರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ತುವಾಲು ದೇಶ ಸಮುದ್ರದ ಮಧ್ಯೆ ಇರುವ ದ್ವೀಪದ ದೇಶ. ಹೌದು ವಿಜ್ಞಾನಿಗಳು ಹೇಳುವ ಪ್ರಕಾರ ಸಮುದ್ರವು ಹಿಗ್ಗುತ್ತಿದು ಅದು ಭೂ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತದೆ ಎಂದು. ಈ ಪ್ರಾಕೃತಿಕ ಬದಲಾವಣೆಯಿಂದ ತುವಾಲು ದ್ವೀಪ 2099 ರ ವೇಳೆಯಲ್ಲಿ ಮುಳುಗಿ ಹೋಗಲಿದೆ. ಇದು ಸಂಪೂರ್ಣವಾಗಿ ಸಮುದ್ರದ ಪಾಲಾಗಿ ಹೋಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅದನ್ನು ಎಚ್ಚರಿಸುವ ನಿಟ್ಟಿನಲ್ಲಿ ಪ್ರಧಾನಿ ಅವರು ಸಮುದ್ರದಲ್ಲಿ ಮೊಣಕಾಲಿನ ವರೆಗೆ ನೀರು ಬರುವ ಹಂತಕ್ಕೆ ನಿಂತು ಭಾಷಣ ಮಾಡಿ ಜನರಿಗೆ ಮುನ್ಸೂಚನೆ ಕೊಟ್ಟಿದ್ದಾರೆ ಮತ್ತು ಜನರು ಪ್ರಕೃತಿಯ ಬಗೆಗೆ ಕಾಳಜಿ ತೋರಬೇಕು ಎಂದು ಹೇಳಿದ್ದಾರೆ.