ತೋಟಗಾರಿಕೆ ಕಷ್ಟನ? ಈ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ 21 ಬಗೆಯ ತರಕಾರಿ ಹಾಗು 33 ಬಗೆಯ ಹೂವುಗಳನ್ನು ಬೆಳೆದಿದ್ದಾರೆ. ಇವರ ತೋಟಗಾರಿಕೆ ಅನುಭವ ಏನು?

1,036

ಕೆಲವರಿಗೆ ತೋಟಗಾರಿಕೆ ಅಭ್ಯಾಸವಾದರೆ ಇನ್ನು ಕೆಲವರಿಗೆ ತೋಟಗಾರಿಕೆ ಎನ್ನುವುದು ಹವ್ಯಾಸವಾಗಿರುತ್ತದೆ. ಈ ಹವ್ಯಾಸ ಇದ್ದವರು ತಾವು ಎಲ್ಲಿಗೆ ಹೋದರು ಕೂಡ ಅದನ್ನು ಮರೆಯುವುದಿಲ್ಲ. ಜಬಲ್ ಪುರದ ಅಭಾ ಪಾಂಡೆ ಎನ್ನುವವರು ಬಾಲ್ಯದಿಂದಲೂ ಕೂಡ ಹಸಿರು ಪರಿಸರದ ನಡುವೆ ಬೆಳೆದವರು. ಇವರು ಎಲ್ಲಿಗೆ ಹೋದರು ಕೂಡ ಮೊದಲು ಹುಡುಕುವುದು ಸಸಿ ನೆಡಲು ಜಾಗವನ್ನು. ಜಾಗ ದೊಡ್ಡದಿರಲಿ ಅಥವಾ ಚಿಕ್ಕದಿರಲಿ ಅಲ್ಲಿ ತೋಟ ರೀತಿ ಮಾಡುವುದು ಇವರ ಹವ್ಯಾಸ.

ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿರುವ ಅಭಾ ಸದ್ಯ ಕಂಪನಿ ಒಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ರೈತ ಕುಟುಂಬಕ್ಕೆ ಸೇರಿದವರು ಅಜ್ಜನ ಕಾಲದಿಂದಲೂ ಕೃಷಿ ಮಾಡುವುದನ್ನು ಇವರು ನೋಡುತ್ತಿದ್ದವರು. ಇವರ ಮನೆಯಲ್ಲಿ ತಂದೆಗೆ ಸೊಪ್ಪು ಬೆಳೆಯುವುದು, ತಾಯಿಗೆ ಹೂವು ಗಿಡ ನೆಡುವುದು ತುಂಬಾ ಇಷ್ಟವಂತೆ. ತನಗೆ ಎರಡು ಇಷ್ಟ, ವಿದ್ಯಾಭ್ಯಾಸ ಮುಗಿಸಿ ಚೆನ್ನೈ ಅಲ್ಲಿ ಕೆಲಸ ಸಿಕ್ಕಿದಾಗ ಅಲ್ಲೆಲ್ಲ ಹಸಿರಾದ ತಂಪಾದ ಜಾಗ ಎಲ್ಲಿ ಎಂದು ಹುಡುಕುತ್ತಲೇ ಇದ್ದರಂತೆ ಅಭಾ ಪಾಂಡೆ.

೨೦೧೬ ರಲ್ಲಿ ಗುರುಗ್ರಾಮಕ್ಕೆ ಬಂದಾಗ ಅಲ್ಲಿ ಬಾಡಿಗೆ ಮನೆ ಮಾಡಿದ್ದರು, ಇವರು ವಾಸವಾಗಿದ್ದ ಮನೆ ಒಡತಿ ಕೂಡ ತೋಟಗಾರಿಕೆಯಲ್ಲಿ ಒಲವು ಹೊಂದಿದ್ದರು. ಅಭಾ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ಮಡಕೆ ಒಳಗಡೆ ಗಿಡಗಳನ್ನು ನೆಡಲು ಪ್ರಾರಂಭಿಸಿದರು ಹಾಗು ಹಸಿರಿನ ನಡುವೆ ಕಾಲಕಳೆಯತೊಡಗಿದರು. ೨೦೧೯ ರಲ್ಲಿ ಮಾಡುವೆ ಆದರು. ಗುರುಗ್ರಮದಲ್ಲಿಯೇ ಬೇರೆ ಕಡೆ ಶಿಫ್ಟ್ ಆಗಬೇಕಾಯಿತು, ಅವರ ಗಂಡನ ಮನೆಯಲ್ಲಿ ತಮ್ಮ ಹವ್ಯಾಸ ಮುಂದುವರೆಸಿದರು. ಇಲ್ಲಿಯವರೆಗೆ ಸುಮಾರು ೨೧ ಬಗೆಯ ತರಕಾರಿ ಹಾಗು ೩೩ ಬಗೆಯ ಹೂವುಗಳನ್ನು ಬೆಳೆಸಿದ್ದರಂತೆ ಅಭಾ ಪಾಂಡೆ.

ಅವರ ಮನೆಯ ಕಾಳಿ ನಿರುಪಯುಕ್ತ ಸ್ಥಳಗಳಲ್ಲಿ ಗಿಡ ನೆಟ್ಟಿದ್ದಾರೆ. ಸ್ನಾನದ ತೊಟ್ಟಿಗಳು, ಬಕೆಟ್ ಗಳು ನಂತಹ ಸುಮಾರು ೨೮ ವಸ್ತುಗಳನ್ನು ತೋಟಗಾರಿಕೆಗೆ ಬಳಸಿಕೊಂಡಿದ್ದರಂತೆ ಇವರು. ಅವರ ಸಸ್ಯಗಳಲ್ಲಿ ಪುದಿನ, ಸಿಹಿಬೇವು, ಜೊತೆಗೆ ಬೀನ್ಸ್, ಎಲೆಕೋಸು, ಬದನೆ ಮುಂತಾದ ತರಕಾರಿಗಳೊಂದಿಗೆ ಕಿತ್ತಳೆ ಹಾಗು ಪಪ್ಪಾಯದಂತಹ ಹಣ್ಣಿನ ಮರಗಳು ಕೂಡ ಇವರು ಬೆಳೆದಿದ್ದಾರಂತೆ. ಸ್ಟ್ರಾಬೆರಿ, ದ್ರಾಕ್ಷಿಗಳು ಇವರ ಮನೆಯಲ್ಲಿ ತಯಾರಿಸಿದ್ದರಂತೆ. ಇಷ್ಟೇ ಅಲ್ಲದೆ ಮನೆಯಲ್ಲಿ ಮಾತ್ರ ಅಲ್ಲದೆ ಮನೆಯ ಹೊರಗೂ ಕೂಡ ಕಸ ಬಿಸಾಕಿ ಹೋಗುವಲ್ಲಿ ಗಿಡಗಳನ್ನು ಬೆಳೆಸಿದ್ದಾರೆ.

ಯಾರಾದರೂ ಇಂತಹ ತೋಟಗಾರಿಕೆ ಮಾಡಲು ಬಯಸುವವರಿಗೆ ಕೂಡ ಸಲಹೆ ನೀಡಿದ್ದಾರೆ. ಮನೆಯಲ್ಲಿ ಬೆಳಕು ಬರುವ ಸ್ಥಳಗಳನ್ನು ಆಯ್ಕೆ ಮಾಡಲು ಹೇಳಿದ್ದಾರೆ. ಆ ಸ್ಥಳಗಳಲ್ಲಿ ಮಾರಿಗೋಲ್ಡ್ ನಂತಹ ಹೂ ಬಿಡುವ ಸಸಿಗಳನ್ನು ಬೆಳೆಸುವಂತೆ ಸಲಹೆ ನೀಡಿದ್ದಾರೆ. ಯಾವುದೇ ದುಬಾರಿ ಮಡಕೆ ಅಥವಾ ನರ್ಸರಿ ಇಂದ ತರುವ ಅಗತ್ಯವಿಲ್ಲ. ಮನೆಯಲ್ಲಿ ಯಾವುದೇ ಉಪಯೋಗಕ್ಕೆ ಬಾರದ ಹಳೆಯ ಪೆಟ್ಟಿಗೆ ಅಥವಾ ಪಾತ್ರಗಳಲ್ಲಿ ಈ ಪ್ಲಾಂಟ್ ಅನ್ನು ಮಾಡಬಹುದು. ಯಾವುದೇ ತರಕಾರಿ ಗಿಡ ನೆಡುವ ಮೊದಲು ಹೂವಿನ ಗಿಡ ನೆಡುವುದಕ್ಕೆ ಇವರು ಅಭಿಪ್ರಾಯ ಪಟ್ಟಿದ್ದಾರೆ. ಪರಾಗಸ್ಪರ್ಶಕ್ಕೆ ಹೆಚ್ಚಿನ ಜೀವಿಗಳು ಬರುತ್ತವೆ. ಇದರಿಂದ ನೀವು ಮಾಡುವ ತರಕಾರಿ ಗಿಡಗಳಿಗೆ ಕೀಟಗಳು ಬರುವುದು ತಪ್ಪಿಸಬಹುದು. ಇವರನ್ನು ನೀವು ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕಿಸಬಹುದಾಗಿದೆ. ಅವರ ಖಾತೆ ಹೆಸರು “eyesspice.grow” ಮೂಲಕ ಸಂಪರ್ಕಿಸಿ.

Leave A Reply

Your email address will not be published.