ದನಗಳ ಜೊತೆಗೆ ಕಾಲ ಕಳೆಯುವ ಈ ಡಾಕ್ಟರ್ ಗೆ ಸಿಕ್ಕಿತು ಪದ್ಮಶ್ರೀ ಪ್ರಶಸ್ತಿ. ಏತಕ್ಕಾಗಿ ಈ ಪ್ರಶಸ್ತಿ?
ಪದ್ಮಶ್ರೀ ಪ್ರಸ್ತಿಯನ್ನು ಎಲ್ಲರಿಗೂ ನೀಡಲಾಗುವುದಿಲ್ಲ. ಅದು ದೇಶದ ಅತ್ಯುನ್ನತ ಪ್ರಶಸ್ತಿಗಳ ಸಾಲಿನಲ್ಲಿ ನಿಲ್ಲುತ್ತದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು, ಸಮಾಜಕ್ಕೆ ಮಾದರಿ ಆಗಿರುವಂತಹ ಜನಗಳಿಗೆ ಈ ಪ್ರಶಸ್ತಿ ಕೊಡಲಾಗುತ್ತದೆ. ಹಿಂದೆಲ್ಲ ಏನು ಮಾಡದ ಬರಿ ಪೊಳ್ಳು ಜನರಿಗೆ ಕೊಟ್ಟ ನಿದರ್ಶನ ಕೂಡ ಇದೆ. ಆದರೆ ಇದೆಲ್ಲ ಇರುವುದು ಸರ್ಕಾರದ ಮೇಲೆ. ಯಾಕಂದರೆ ಪದ್ಮಶ್ರೀ ಪ್ರಶಸ್ತಿಗೆ ಹೆಸರನ್ನು ಶಿಫಾರಸ್ಸು ಮಾಡುವುದೇ ಸರ್ಕಾರ. ಆದ ಕಾರಣ ಅರ್ಹರೋ ಅನರ್ಹರೋ ಎಂದು ನಿರ್ಧಾರ ಮಾಡೋ ಸಂಪೂರ್ಣ ಜವಾಬ್ದಾರಿ ಸರ್ಕಾರದ ಮೇಲೆ ಇದೆ.
ಹೀಗೆ ನಾವಿಂದು ತಿಳಿಯಲು ಹೊರಟ ಈ ಮಾದರಿ ವ್ಯಕ್ತಿಯು ಇಂತಹ ಒಂದು ಮಾದರಿ ಕೆಲಸ ಮಾಡಿದ್ದರಿಂದ ಅವರನ್ನು ಈ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಯಾರಿವರು ಇವರು ಮಾಡಿದ ಕೆಲಸ ಏನು ತಿಳಿಯೋಣ. ದನಗಳ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಆದರೆ ಈ ದಿನಗಳಲ್ಲಿ ಕೂಡ ತಳಿಗಳು ಇವೆ. ಅದರಲ್ಲಿ ಒಂದು ಹಳ್ಳಿಕಾರ್ ತಳಿ. 1980 ರ ಸಂದರ್ಭದಲ್ಲಿ ಅಳಿವಿನ ಅಂಚಿನಲ್ಲಿ ಇದ್ದ ತಳಿಗಳ ಪೈಕಿ ಒಂದು. ದೇಹದ ಆಕಾರದಲ್ಲಿ ಅತ್ಯಂತ ಗಿಡ್ಡ ವಾಗಿದ್ದು. ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಕೊಡುತ್ತದೆ, ಮತ್ತು ಇದರ ಹಾಲಿನಲ್ಲಿ ಔಷಧೀಯ ಗುಣ ಹೆಚ್ಚಾಗಿ ಇದೆ. ಇದನ್ನು ಸಾಕುವ ಖರ್ಚು ಕೂಡ ಕಡಿಮೆ.
ಆದರೆ ವಿದೇಶಿ ತಳಿಗಳ ಆಟದ ಮುಂದೆ ದೇಶೀಯ ತಳಿಗಳು ಬೇಡವಾಗಿ ಹೋಗಿದ್ದವು . ಅಂತಹ ಈ ಹಳ್ಳಿಕಾರ್ ತಳಿಯನ್ನು ಅಳಿವಿನ ಅಂಚಿನಿಂದ ಹೊರತರಲು ಮಾಡಿದ ಪ್ರಯತ್ನಗಳ ಫಲವೇ ಪದ್ಮಶ್ರೀ ಪ್ರಶಸ್ತಿ. ಡಾಕ್ಟರ್ ಸೋಸಮ್ಮ ಅವರು ಕೇರಳದ ಮೂಲದವರು. ವೃತ್ತಿಯಲ್ಲಿ ಪಶು ವೈದ್ಯರು ಇವರು. ಅಳಿವಿನ ಅಂಚಿನಲ್ಲಿ ಇದ್ದ ಈ ತಳಿಯನ್ನು ರಕ್ಷಿಸಲು ದೇಶ ಸುತ್ತಿದವರು. ಹಳ್ಳಿ ಹಳ್ಳಿಗೂ ಹೋಗಿ ಅಳಿದುಳಿದ ಈ ತಳಿಯನ್ನು ಖರೀದಿ ಮಾಡಿ ಒಂದೇ ಕಡೆ ಗೋಶಾಲೆ ನಿರ್ಮಿಸಿ ಅಲ್ಲಿಂದ ಈ ತಳಿಯನ್ನು ಬೆಳೆಸುವ ಕಾರ್ಯ ಮಾಡಿದವರು. ಆರಂಭಿಕ ದಿನಗಳಲ್ಲಿ ಹಲವಾರು ಅಡೆತಡೆ ಎದುರಿಸಿದರು. ಆದರೂ ತಮ್ಮ ವಿದ್ಯಾರ್ಥಿಗಳು ಬೆಂಬಲವಾಗಿ ನಿಂತರು.
ಹೀಗೆ ಅಂದು ಅಳಿಯ ಬೇಕಾಗಿದ್ದ ಈ ಹಳ್ಳಿಕಾರ್ ತಳಿಯನ್ನು ಉಳಿಸಿದ್ದೆ ಡಾಕ್ಟರ್ ಸೊಸಮ್ಮ. ಅದಕ್ಕಾಗಿಯೇ ಟ್ರಸ್ಟ್ ಒಂದನ್ನು ಕೂಡ ನಿರ್ಮಿಸಲಾಗಿದೆ. ಈಗ ದೇಶದಾದ್ಯಂತ 5000 ಕ್ಕಂತಲೂ ಹೆಚ್ಚು ಈ ತಳಿಯ ದನಗಳು ಇವೆ ಎನ್ನುತ್ತಾರೆ ಇವರು. ಸಮಾಜದ ಒಳಿತಿಗಾಗಿ , ದೇಶದ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ಮಾಡಿದ ಪ್ರಯ್ತನಕ್ಕಾಗಿ ಇವರನ್ನು ಮೋದಿ ನೇತೃತ್ವದ ಸರ್ಕಾರ ಗುರುತಿಸಿ ಗೌರವ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಅತ್ಯಂತ ನಿಷ್ಠ ಹಕ್ಕು ದಾರರಿಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತಿರುವುದು ಹೆಮ್ಮೆಯ ವಿಷಯ.