ದುಬೈ ದೇಶದ ರಾಜಕುಮಾರ ಶೇಕ್ ಹಮದಾನ್ ಆ ದಿನದಿಂದ ತಮ್ಮ ಕಾರನ್ನು ಮುಟ್ಟಿಲ್ಲ, ಓಡಿಸುವುದು ಇಲ್ಲ. ಯಾತಕ್ಕಾಗಿ ಗೊತ್ತೇ?
ದುಬೈ ಎಂದರೆ ಎಲ್ಲರಿಗೂ ಗೊತ್ತಿದೆ, ಅತ್ಯಂತ ಹೆಚ್ಚು ಜನರು ಹೋಗಲು ಇಷ್ಟ ಪಡುತ್ತಾರೆ. ಭಾರತ ದೇಶದ ಅದೆಷ್ಟೋ ಜನರು ಅಲ್ಲಿ ಕೆಲಸದಲ್ಲಿ ಇದ್ದು , ಭಾರತ ಮತ್ತು ದುಬೈ ಗೆ ಅನ್ಯೋನ್ಯತೆ ಭಾಂದವ್ಯ ಬೆಳೆದಿದೆ. ಇಲ್ಲಿ ಈಗಲೂ ರಾಜರ ಆಳ್ವಿಕೆ ನಡೆಯುತ್ತದೆ. ಇವರನ್ನು ಶೇಕ್ ದೊರೆಗಳು ಎನ್ನುತ್ತಾರೆ. ಇಂತಹದೇ ಒಂದು ರಾಜಮನೆತನದ ಸುತ್ತಲಿನ ಕಥೆಯನ್ನು ನಾವು ಇಂದು ತಿಳಿಯೋಣ.
ಇವರು ದುಬೈ ದೇಶದ ರಾಜ ಶೇಕ್ ಹಾಮದಾನ್. ತನ್ನಲ್ಲಿ ಎಲ್ಲವೂ ಇದೆ, ಅತ್ಯಂತ ಶ್ರೀಮಂತ ದೇಶದ ರಾಜ ಇವರು. ಯಾವುದಕ್ಕೂ ಕಡಿಮೆ ಇಲ್ಲ ಇವರಿಗೆ. ಎಲ್ಲವೂ ಕೂತಲ್ಲಿಯೆ ಬಂದು ಬಿಡುತ್ತದೆ. ಆದರೆ ರಾಜ ಎಂದ ಮೇಲೆ ತನ್ನನ್ನು ಅವಲಂಬಿಸಿರುವ ಪ್ರಜೆಗಳು ಅಥವಾ ಜನತೆಯ ಅಭಿವೃದ್ದಿ ಕಡೆಗೂ ನೋಡಬೇಕು. ರಾಜ ಎಂದಮೇಲೆ ಆ ದೇಶ ಯಾ ಪ್ರಾಂತ್ಯದ ಒಳಗೆ ಬರುವ ಎಲ್ಲಾ ಜೀವಿಗಳು ಆತನ ಆಧಿನವೆ. ಅವುಗಳ ಪ್ರತಿಯೊಂದು ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿ ಇದೆ ರಾಜನದು. ಈಗ ದುಬೈ ರಾಜ ತನ್ನ ಇಂತಹುದೇ ಒಂದು ಕೆಲಸಕ್ಕಾಗಿ ಈಗ ಸದ್ದು ಮಾಡುತ್ತಾ ಇದ್ದಾರೆ. ಹೌದು ಬಹಳಷ್ಟು ಚರ್ಚೆ ಆಗುತ್ತಿದೆ ಈ ವಿಚಾರದ ಬಗೆಗೆ. ಬನ್ನಿ ಏನಿದು ತಿಳಿಯೋಣ.
ದುಬೈ ರಾಜರು ಸದಾ ತಮ್ಮ ಮರ್ಸಿಡಿಸ್ ಕಾರಿನಲ್ಲೇ ಓಡಾಡುತ್ತಾರೆ. ಯಾಕೆಂದರೆ ಭದ್ರತೆಯ ದೃಷ್ಟಿ ಮತ್ತು ರಾಜ ಎಂದ ಮೇಲೆ ಆ ಗಾಂಭೀರ್ಯ ಘನತೆ ಬೇಕು. ಆದರೆ ಅವರು ಇದ್ದಕ್ಕಿದ್ದಂತೆ ಒಂದು ದಿನ ತಂದು ನಿಲ್ಲಿಸಿದ ಕಾರನ್ನು ಮತ್ತೆ ಎಂದಿಗೂ ಮುಟ್ಟಲು ಇಲ್ಲ, ಇತರ ಯಾರಿಗೂ ಮುಟ್ಟಲು ಬಿಡಲಿಲ್ಲ. ಹೌದು ವಿಚಿತ್ರ ಎನಿಸಿದರೂ ಸತ್ಯ ಸಂಗತಿ ಇದು. ಕಾರಣ ಇಷ್ಟೇ ಅವರು ನಿಲ್ಲಿಸದ ಕಾರಿನಲ್ಲಿ ಗುಬ್ಬಚ್ಚಿ ಹಕ್ಕಿ ಒಂದು ಎಲ್ಲಿಂದಲೋ ಬಂದು ಕಾರಿನ ಒಳಗೆ ಗೂಡೊಂದು ಕಟ್ಟಿತ್ತು. ಅದಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಅವರು ಆ ಕಾರನ್ನು ನಿಲ್ಲಿಸಿದ ಜಾಗದಿಂದ ತೆಗೆಸಲಿಲ್ಲ. ಆ ಹಕ್ಕಿ ಅಲ್ಲಿಂದ ಹೋಗುವ ತನಕ ಯಾರು ಅದನ್ನು ಮುತ್ತ ಬಾರದು ಎಂಬ ಆಜ್ಞೆ ಕೂಡ ಕೊಟ್ಟಿದ್ದಾರೆ. ಅದೇನೇ ಇರಲಿ ಇವರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಪ್ರಶಂಸೆ ಗೆ ಪಾತ್ರವಾಗಿದೆ.