ದೆಹಲಿಯಿಂದ ಲಂಡನ್ ಗೆ ಬಸ್ ಸೇವೆ ಬಸ್ಸಿನ ದರ ಎಷ್ಟು ಗೊತ್ತೆ.ಎಷ್ಟು ದಿನಗಳಲ್ಲಿ ತಲುಪುವಿರಿ?

431

ಒಂದಲ್ಲ ಒಂದು ಹೊಸಹೊಸ ವಿಷಯ ದಿನ ಬೆಳಗಾಗಲೆ ಬರುತ್ತದೆ. ಭಾರತದಲ್ಲಿ ಹಿಂದೊಮ್ಮೆ ಸುಮಾರು ವರ್ಷಗಳ ಹಿಂದೆ ದೆಹಲಿ ಯಿಂದ ಬಸ್ ಸೇವೆ ಇತ್ತು ಎಂಬುವುದು ಉಲ್ಲೇಖ ಇದೆ, ಮತ್ತು ಅದಕ್ಕೆ ದಾಖಲೆಗಳು ಕೂಡ ಇವೆ. ಆದರೆ ಇದೀಗ ಮತ್ತೊಮ್ಮೆ ಸುದ್ದಿ ಬಂದಿದೆ. ಭಾರತ ಮತ್ತು ಲಂಡನ್ ನಡುವೆ ಬಸ್ ಸೇವೆ ಪುನರಾರಂಭ ಗೊಳ್ಳಲಿದೆ ಎಂದು. ಹೌದು ವಯೋಚಿತ್ರ ಎನಿಸಿದರೂ ಸತ್ಯ ಸಂಗತಿ ಇದು. ಇಂತಹದೊಂದು ಮಹತ್ತರ ಬೆಳವಣಿಗೆ ನಮ್ಮ ದೇಶದಲ್ಲಿ ಆಗುತ್ತಿದ್ದು ನೀವು ಕೂಡ ಬಸ್ ಪ್ರಯಾಣದಲ್ಲಿ ಆಸಕ್ತಿ ಇದ್ದರೆ ಯೋಚಿಸಬಹುದು. ಹಾಗಾದರೆ ಹೇಗೆ ಇರುತ್ತದೆ ಈ ಇಂಟರೆಸ್ಟಿಂಗ್ ಜರ್ನಿ ಬನ್ನಿ ತಿಳಿಯೋಣ.

ಲಂಡನ್ ಎಂದರೆ ಇಲ್ಲೇ ಹತ್ತಿರದಲ್ಲಿ ಇಲ್ಲ , ಏಳು ಕಡಲು ದಾಟಿ ಆಚೆಗೆ ಹೋಗಬೇಕು ಎಂದು ನಮ್ಮ ಹಿರಿಯರು ಹೇಳಿದ್ದನ್ನು ನಾವು ಕೇಳಿದ್ದೆವು. ಭಾರತ ಮತ್ತು ಲಂಡನ್ ಹತ್ತಿರದಲ್ಲಿ ಇಲ್ಲ ಬರೋಬ್ಬರಿ 20000 ಕಿಮೀ ದೂರ ಇದೆ. ಅಯ್ಯಬ್ಬ ಎನಿಸಬಹುದು ಆದರೆ ಸತ್ಯ ಸಂಗತಿ ಇದು. ಭಾರತ ಡಿಂದ ಲಂಡನ್ ಗೆ ಹೋಗಲು 20,000 ಕಿಮೀ ದೂರ ಕ್ರಮಿಸಬೇಕು ಮತ್ತು ಇದು ಅಂದಾಜು 70 ದಿನಗಳ ಕಾಲ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಹೌದು ಒಂದು ದಿನದ ಬಸ್ ಪ್ರಯಾಣದಲ್ಲಿ ಸಾಕೋ ಸಾಕು ಎನಿಸುತ್ತದೆ ಇನ್ನೂ 70 ದಿನಗಳ ಪ್ರಯಾಣ ಹೇಗೆ ಎಂದು ಯೋಚನೆ ಮಾಡಿದರೆ ಅದಕ್ಕೆ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ಎಲ್ಲಾ ರೀತಿಯಲ್ಲೂ ಆರಾಮದಾಯಕ ಪ್ರಯಾಣಕ್ಕೆ ಈ ಬಸ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಅಷ್ಟೇ ಅಲ್ಲದೆ ಇದು ಬರೋಬ್ಬರಿ 18 ದೇಶಗಳನ್ನು ಸುತ್ತಿಕೊಂಡು ಹೋಗಿ ಲಂಡನ್ ತಲುಪುತ್ತದೆ. ವಿಶ್ವ ಪರ್ಯಟನೆ ಮಾಡುವ ಆಸಕ್ತಿ ಇರುವವರು ಇದನ್ನು ಪ್ರಯತ್ನಿಸಬಹುದು. ಹಾಗಾದರೆ ಇದರ ಬಸ್ ದರ ಎಷ್ಟು ಎಂದು ಎಲ್ಲರಲ್ಲೂ ಕುತೂಹಲ ಮೂಡಿರಬಹುದು. ಹಾಗೊಂದು ಯೋಚನೆ ಮನಸಲ್ಲಿದ್ದರೆ ಈ 70 ದಿನಗಳ ಪ್ರಯಾಣಕ್ಕೆ ಬರೋಬ್ಬರಿ 15ಲಕ್ಷ ತಗುಲುತ್ತದೆ ಎನ್ನುತ್ತಾರೆ. ಅದೇನೇ ಇರಲಿ ಹೋಗಲು ಇಚ್ಚಿಸುವವರು ಇಂದೆ ಎಲ್ಲಾ ತಯಾರಿ ಮಾಡಿ ಇದೊಂದು ಹೊಸ ಮೈಲುಗಲ್ಲು ಸ್ಥಾಪಿಸಲು ಇಟ್ಟಿರುವ ಹೆಜ್ಜೆ. ಮುಂದಕ್ಕೆ ಏನಾಗುತ್ತದೆ ಕಾದುನೋಡೋಣ.

Leave A Reply

Your email address will not be published.