ದೇವರ ದರ್ಶನ ನಂತರ ದೇವಾಲಯದಲ್ಲಿ ಏಕೆ ಸ್ವಲ್ಪ ಹೊತ್ತು ಕುಳಿತುಕೊಳ್ಳಬೇಕು?

518

ದೈವದರ್ಶನದ ನಂತರ ಗುಡಿಯಲ್ಲಿ ಕುಳಿತುಕೊಳ್ಳಬೇಕೆ? ಇದು ಎಲ್ಲರ ಕಾಡುವ ಪ್ರಶ್ನೆ ಸ್ಥಿರಚಿತ್ತದಿಂದ ಐಹಿಕತ್ವವನ್ನು ಮರೆತು ಮೌನ ಯೋಗದಿಂದ ಇಂದ್ರಿಯಗಳನ್ನು ದೂರಕ್ಕೆ ತಳ್ಳಿ ಪರಮಾತ್ಮನನ್ನು ನೆನೆಯುತ್ತಾ ಸ್ವಲ್ಪ ಸಮಯ ದೇವಸ್ಥಾನದಲ್ಲಿ ಕುಳಿತು ಬರುವುದು ಸತ್ಸಂಪ್ರದಾಯ ಪದ್ದತಿ ,ದೇವಸ್ಥಾನದಲ್ಲಿ “ದೇವರಿಗೆ ಎದುರಲ್ಲಿ ಎಂದು ಅರ್ಥವಲ್ಲ. ದೇವಸ್ಥಾನದ ಪ್ರಾಂಗಣದಲ್ಲಿಲಾದರೂ ಮೌನದಿಂದ ಕಣ್ಮುಚ್ಚಿ ಕೊಂಡು ಮನಸ್ಸನ್ನು ದೈವದ ಜೊತೆ ಒಂದು ಮಾಡಬೇಕು. ಆಲಯ ಪ್ರವೇಶಕ್ಕೆ ಕೆಲವು ನಿಯಮಗಳಿವೆ . ದೇವಸ್ಥಾನದ ಪ್ರವೇಶಕ್ಕೆ ಮೊದಲು ನಮ್ಮ ಮನಸ್ಸು ಪ್ರಶಾಂತವಾಗಿರಬೇಕು. ನಮ್ಮ ಅಂತಸ್ತು ,ಶ್ರೀಮಂತಿಕೆ, ಶ್ರೇಷ್ಠತೆ, ಅಹಂಕಾರ, ಸಿಟ್ಟು, ಅಧಿಕಾರ ಇವೆಲ್ಲವೂ ನಮ್ಮ ಹತ್ತಿರಕ್ಕೂ ಸುಳಿಯಬಾರದು. ದೇವರಿಗೆ ಶ್ರೀಮಂತನೂ ದರಿದ್ರನೂ ಒಂದೇ ! ಈ ವಿಷಯನ್ನು ಯಾರೂ ಮರೆಯಬಾರದು.

ಪೂಜಾರಿಗೆ ಲಂಚಕೊಟ್ಟು ನಮ್ಮ ಸಿರಿವಂತಿಕೆಯನ್ನು ತೋರಿಸಿ ಕೊಳ್ಳಬಾರದು . ನಮ್ಮಿಂದ ಯಾವ ಭಕ್ತನಿಗೆ ತೊಂದರೆ ಯಾದರೂ ಅದು ದೆವರಿಗೆ ತೊಂದರೆ ಕೊಟ್ಟಂತೆ ಅಪರಾಧ ಮಾಡಿದಂತೆ ಆಗುವುದು. ಇದನ್ನು ಎಲ್ಲರೂ ನೆನಪಿನಲ್ಲಿ ಟ್ಟುಕೊಳ್ಳಬೇಕು. ದೇವರ ಸನ್ನಿಧಿಯಲ್ಲಿ ಎಂಥವರೂ ದೊಡ್ಡಸ್ಥಿಕೆ ಯನ್ನು ಪ್ರದರ್ಶಿಸಬಾರದು . ಈ ವಿಷಯನ್ನು ಎಲ್ಲರೂ ತಿಳಿಯ ಬೇಕು. ಎಲ್ಲರೂ ಇದನ್ನು ಆಚರಿಸಬೇಕು. ದೇವರು ಎಲ್ಲರಿಗೂ ದೇವರೇ, ದೈವಕಾರ್ಯಗಳಿಗೆ ಎಲ್ಲರೂ ಹಿರಿಯರೇ ,ದೈವಪ್ರೀತಿಗೆ ಎಲ್ಲರೂ ಪಾತ್ರರೇ, ದೈವಪೂಜೆಗೆ ಎಲ್ಲರೂ ಅರ್ಹರೇ, ದೈವ ಆರ್ಶನಕ್ಕೆ ಎಲ್ಲರೂ ಸಮಾನರೇ.

ಸರ್ವಪ್ರಾಣ ಸಮಾನತೆಯನ್ನು ಸದ್ವಿಚಾರ ಆಚರಣೆಯನ್ನು ಮನಗಂಡು ಮನ್ನಿಸಿದವನೇ ದೇವರಿಗೆ ಪ್ರಿಯಭಕ್ತನಾಗುತ್ತಾನೆ. ದೇವರೆಂದರೆ ಶ್ರೀಮಂತರ ಜೀತದಾಳಲ್ಲ ದೇವರೆಂದರೆ ಅಧಿಕಾರಿಗಳ ಆಸ್ಥಿಯಲ್ಲ. ದೇವರೆಂದರೆ ರಾಜಕೀಯ ಪುಡಾರಿಗಳ ಸೊತ್ತಲ್ಲ ದೇವರು ದೀನರ ಗೆಳೆಯ, ದೇವರು ದುಃಖಿತರ ಮಿತ್ರ ದೇವರು ಬಡವರ ಬಂಧು, ದೇವರು ದೇವರು ನೀತಿ ನಿಯಮವಂತರ ತಂದೆ ದೇವರ ಸೇವಕರ ಸೇವಕ, ದೇವರು ಆಪನ್ನಜನರ ಬಂಧು, ಶೋಷಿತರ ಮಿತ್ರ, ದೇವರಾಣೆಗೂ ಇದು ಸತ್ಯ. ಮಡಿ ಬಟ್ಟೆಗಳ ನ್ನುಟ್ಟು ನಾಮಗಳನ್ನಿಟ್ಟು, ಅಧಿಕಾರ ಮದವನು ಸಿರಿವಂತಿಕೆಯ ಸೊಕ್ಕನ್ನು, ಅಗ್ರವರ್ಣದ ಅಹಂಕಾರವನ್ನು ತೋರಿಸುವವರಿಗೆ ಎಂದೂ ದೇವರು ಪ್ರಸನ್ನನಾಗುವುದಿಲ್ಲ.

ಅವರ ಪ್ರಾರ್ಥನೆಯನ್ನೂ ಕೇಳುವುದಿಲ್ಲ ದೇವರ ಮುಂದೆ ಅಧಿಕ್ಯತೆ ಯನ್ನು ತೋರಿಸುವುದು ಮಹಾ ಪ್ರಚಾರ, ದೇವರ ಮುಂದೆ ಡಂಬಾ ಚಾರ ಪ್ರದರ್ಶನ ಮಹಾಪಾಪ. ನಾವು ದೈವ ಸೇವಕರೇ ನಿಜ, ಆದರೆ ದೇವರು ದೀನಜನ ಸೈನಿಕನು, ಪೀಡಿತ ಶೋಷಿತರ ಪ್ರಿಯ ಗೆಳೆಯನು. ದೇವರಿಗೆ ಕುಲವಿಲ್ಲ, ದೇವರಿಗೆ ಆಚಾರವಿಲ್ಲ, ದೇವರಿಗೆ ಬೇಧವಿಲ್ಲ, ದೇವರು ದಯಾಮಯನು, ದೇವರು ಸರ್ವ ರಕ್ಷಕನು, ದೇವರು ಯಾರಿಗೂ ಸ್ವಂತವಲ್ಲ, ದೇವರಿಗೆ ಕಾಯಿ ಕರ್ಪೂರಗಳು, ಹೂವಿನ ಹಾರಗಳು, ಕಪ್ಪ ಕಾಣಿಕೆಗಳು ಪಾಯಸ್ಸಾ ನ್ನಗಳು, ಪಂಚಾಮೃತಗಳು , ಬಂಗಾರದ ಆಭರಣಗಳು ಬೇಕಿಲ್ಲ. ಈ ಸರ್ವ ಸೃಷ್ಟಿಯೇ ಅವನದ್ದಾಗಿದೆ ಯಲ್ಲವೇ? ಕೆರೆಯ ನೀರನ್ನು ಕೆರೆಗೆ ಹಾಕುವುದರಲ್ಲಿ ವಿಶೇಷವಿಲ್ಲ.

ದೇವರಿಗೆ ಏನು ಬೇಕು? ಅರ್ಪಣಾಭಾವನೆ ಬೇಕು, ಶರಣಾ ಗತಿಬೇಕು ಅಹಂಕಾರವಿಲ್ಲದ ಮನಸ್ಸು ಬೇಕು ಭಕ್ತಿಬೇಕು ನಂಬಿಕೆ ಬೇಕು, ಆರಾಧನಾ ಭಾವನೆ ಬೇಕು, ಕೋರಿಕೆಗಳ ಅರ್ಚನೆ ಬೇಕು ಅತ್ಯಾಶೆಗಳನ್ನು ದೇವರು ಮನ್ನಿಸುವುದಿಲ್ಲ. ಅಸಂಬದ್ದ ಬಯಕೆಗಳನ್ನು ಈಡೇರಿಸುವುದಿಲ್ಲ. ದೇವರನ್ನು ಬಯಕೆಗಳಿಂದ ಎಂದೂ ಪೂಜಿಸಬಾರದು. ನಮಗೆ ಏನು ಬೇಕು ಎಲ್ಲಿ ಕೊಡಬೇಕು. ಯಾವಾಗ ಕೊಡಬೇಕು ಅನ್ನುವುದು ಅವನಿಗೆ ಗೊತ್ತಿದೆ.

ಈಗ ಮೂಲ ವಿಷಯಕ್ಕೆ ಬನ್ನಿ, ದೇವಸ್ಥಾನಕ್ಕೆ ಹೋಗಿ ದರ್ಶನದ ನಂತರ ಯಾಕೆ ಕುಳಿತುಕೊಳ್ಳಬೇಕು? ನವರಸನ್ನಿಧಿಗೆ ಹೋಗು ವುದು ಕೇವಲ ದೇವರ ದರ್ಶನಕ್ಕಾಗಿಯೇ ಅಲ್ಲ. ದರ್ಶನದ ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಎಲ್ಲಾದರೂ ಕುಳಿತು ದೈವ ಧ್ಯಾನದಲ್ಲಿ ಕಳೆಯಬೇಕು. ಹೀಗೆ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಸ್ಪಷ್ಟತೆ ಬರುತ್ತದೆ, ದೇಹಕ್ಕೆ ಶಕ್ತಿ ಸಿಗುತ್ತದೆ. ಮಾನಸಿಕ ಒತ್ತಡ ಕಡಿಮೆ ಯಾಗುತ್ತದೆ. ಯೋಚನೆಗಳೆಲ್ಲವೂ ಸಕ್ರಮ ವಾಗುತ್ತವೆ ನಿರ್ಧಾರ ಗಳು ದ್ರೃಡವಾಗುತ್ತವೆ. ದೇವಸ್ಥಾನದ ಸ್ಥಳ ಪ್ರಭಾವವು ನಮ್ಮ ದೇಹದೊಳಗೆ ಪ್ರವೇಶಿಸಿ ನಮ್ಮಲ್ಲಿ ಹೊಸ ಚೈತನ್ಯವನ್ನು ಉಂಟು ಮೂಡುತ್ತದೆ.

ನೋಡಿ ಎಂದೂ ಅವಸರದಿಂದ ದೈವದರ್ಶನವನ್ನು ಮಾಡ ಬಾರದು. ಕೌಟುಂಬಿಕ ವಿಷಯಗಳನ್ನು ಗುಡಿಯಲ್ಲಿ ಮಾತನಾಡ ಬಾರದು. ಹಾಸ್ಯ ಪ್ರಸಂಗಗಳನ್ನು ಮಾಡಬಾರದು. ಕಾಮುಕ ಮನೋಭಾವನೆಗಳಿಂದ ಇರಬಾರದು. ಯಾರ ಮೇಲೆಯೂ ಸಿಟ್ಟುಮಾಡಬಾರದು ಯಾರನ್ನೂ ಅಸಹ್ಯದಿಂದ ನೋಡಬಾರದು. ಅಂಗವಿಕಲರನ್ನು ಮನೋರೋಗಿಗಳನ್ನು ನೋಡಿ ನಗಬಾರದು. ಎದೆಯುಬ್ಬಿಸಿ ತಲೆ ಎತ್ತಿ ನಡೆಯಬಾರದು ನೋಡಬಾರದು. ಮತ್ತೊಬ್ಬರ ಮೌನಕ್ಕೆ ಭಂಗ ತರಬಾರದು. ಜಾತಿ, ಹಣ, ದೊಡ್ಡಸ್ಥಿಕೆಗಳನ್ನು ತೋರಿಸಬಾರದು.

Leave A Reply

Your email address will not be published.