ದೇಶಿಯ ಸಣ್ಣ ವ್ಯಾಪಾರಿಗಳನ್ನು ಅಮೆಜಾನ್ ಹಾಗು ಫ್ಲಿಪ್ಕಾರ್ಟ್ ನಂತಹ ದೈತ್ಯರಿಂದ ರಕ್ಷಿಸಲು ಮೋದಿ ಸರಕಾರ ತಂದಿದೆ ಹೊಸ ಈ-ಕಾಮರ್ಸ್ ನಿಯಮ.
ಭಾರತದಲ್ಲಿ ಜನರು ಇತ್ತೀಚಿಗೆ ಆನ್ಲೈನ್ ಇಂದ ಅತಿ ಹೆಚ್ಚು ಖರೀದಿ ಮಾಡುತ್ತಿದ್ದಾರೆ ತಮ್ಮ ಬೆರಳಂಚಿನಲ್ಲಿ ಯಾವುದೇ ವಸ್ತುವನ್ನು ಆಯ್ಕೆ ಮಾಡಿದರೆ ಅದು ಸಿದ ನಮ್ಮ ಮನೆ ಬಾಗಿಲಿಗೆ ಬಂದು ಬಿಡುತ್ತದೆ. ಇದರಿಂದ ಜನರು ಹತ್ತಿರದ ಮಳಿಗೆ, ಶಾಪ್ ಹಾಗು ಇತರ ಯಾವುದೇ ಅಂಗಡಿಗೆ ಹೋಗಿ ತರುವುದು ತಪ್ಪುತ್ತದೆ. ಜನರ ಪ್ರಕಾರ ಇದರಿಂದ ಅವರ ಸಮಯ ಉಳಿಯುತ್ತದೆ ಹಾಗು ಹತ್ತಿರದ ಶಾಪ್ ಗಳಿಗೆ ಹೋಲಿಸಿದರೆ ಆನ್ಲೈನ್ ಮಾರುಕಟ್ಟೆ ತುಂಬಾ ಅಗ್ಗ ಎನ್ನುವುದು ಜನರ ಅಭಿಪ್ರಾಯ. ಜನರು ಆನ್ಲೈನ್ ಅಲ್ಲಿ ಖರೀದಿ ಮಾಡಲು ಅಮೆಜಾನ್ ಹಾಗು ವಾಲ್ಮಾರ್ಟ್ ನ ಫ್ಲಿಪ್ಕಾರ್ಟ್ ನಂತಹ ಸಂಸ್ಥೆಗಳು ಬಿಗ್ ಬಿಲಿಯನ್ ನಂತಹ ಫೆಸ್ಟಿವಲ್ ಅನ್ನು ಪ್ರತಿ ವರ್ಷ ತರುತ್ತದೆ. ಇದು ಕೇವಲ ಜನರನ್ನು ವ್ಯಾಪಾರದತ್ತ ಸೆಳೆಯಲು ಮಾತ್ರ.
ಇಂತಹ ಆನ್ಲೈನ್ ವ್ಯಾಪಾರಿಗಳಿಂದ ದೇಶದ ಸಣ್ಣ ವ್ಯಾಪಾರಿಗಳು ಬಹಳ ನಷ್ಟ ಅನುಭವಿಸುತ್ತಿದ್ದಾರೆ, ನಮಗೆ ಆನ್ಲೈನ್ ಅಗ್ಗ ಕಾಣಬಹುದು ಆದರೆ ಅವುಗಳ ಗುಣಮಟ್ಟ ಹಾಗು ಬ್ರಾಂಡ್ ಗಳು ಬೇರೆ ಬೇರೆ ಆಗಿರುತ್ತದೆ. ಇದರಿಂದ ಮೊನೊಪೊಲಿ ಹೆಚ್ಚುತ್ತದೆ. ಇದಕ್ಕಾಗಿ ಮೋದಿ ಸರಕಾರ ಈ ಆನ್ಲೈನ್ ಮಾರುಕಟ್ಟೆಅಂದರೆ ಈ ಕಾಮರ್ಸ್ ಗೆ ಹೊಸ ನಿಯಮ ಜಾರಿ ಮಾಡಿದೆ. ಇದು ಸಣ್ಣ ವ್ಯಾಪಾರೀ ಹಾಗು ದೇಶಿಯ ಉತ್ಪಾದನೆಗಳಿಗೆ ಒಟ್ಟು ನೀಡಲು ಮೋದಿ ಸರಕಾರದ ಒಂದು ಪ್ರಯತ್ನ.
ಭಾರತದ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸೋಮವಾರ ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳಿಂದ “ಫ್ಲ್ಯಾಷ್ ಮಾರಾಟ” ವನ್ನು ಸೀಮಿತಗೊಳಿಸಲು ಹೊಸ ನಿಯಮ ಹೇಳುತ್ತದೆ, ಇ-ಕಾಮರ್ಸ್ ಘಟಕಗಳನ್ನು ಅದರ ಪ್ಲಾಟ್‌ಫಾರ್ಮ್‌ನಲ್ಲಿ ಅಥವಾ ಇನ್ನಿತರ ಯಾವುದೇ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರದರ್ಶಿಸುವುದರಿಂದ ಅಥವಾ ಪ್ರಚಾರ ಮಾಡುವುದನ್ನು ತಡೆಯುತ್ತದೆ.
ಕಳೆದ ವರ್ಷ ಜುಲೈನಲ್ಲಿ ಜಾರಿಗೆ ಬಂದ 2019 ರ ಗ್ರಾಹಕ ಸಂರಕ್ಷಣಾ ಕಾಯ್ದೆಯಂತೆಯೇ, ಇತ್ತೀಚಿನ ತಿದ್ದುಪಡಿಗಳು ಇ-ಮಾರುಕಟ್ಟೆಗಳ ಮೇಲಿನ ಕುಂದುಕೊರತೆ ಪರಿಹಾರ ಪ್ರಕ್ರಿಯೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿವೆ. ಪ್ರತಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಗ್ರಾಹಕರ ತೊಂದರೆ ಗಳನ್ನೂ ಅಳಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಸ್ಥಾಪಿಸಬೇಕಾಗುತ್ತದೆ ಎಂದು ಈ ಹೊಸ ನಿಯಮ ಹೇಳುತ್ತದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ಈ ಪ್ಲ್ಯಾಟ್‌ಫಾರ್ಮ್‌ಗಳು ಭಾರತದಲ್ಲಿ ಮುಖ್ಯ ಅನುಸರಣೆ ಅಧಿಕಾರಿ, ನಿವಾಸ ಕುಂದುಕೊರತೆ ಅಧಿಕಾರಿ ಮತ್ತು ನೋಡಲ್ ಸಂಪರ್ಕ ವ್ಯಕ್ತಿಯನ್ನು ನೇಮಿಸಬೇಕಾಗುತ್ತದೆ.