ದೇಶ ಸೇವೆಗೆಂದು 50 ಲಕ್ಷ ರೂಪಾಯಿ ಸಂಬಳ ಬಿಟ್ಟು ದೇಶಕ್ಕೆ ಬಂದರು. ಈಗಲೂ ತಮ್ಮ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾರೆ. ಯಾರಿವರು?

382

ಜೀವನದಲ್ಲಿ ಒಳ್ಳೆಯ ವಿಧ್ಯಾಭ್ಯಾಸ ಪಡೆದು ಕೊನೆತನಕ ಕುಳಿತು ತಿನ್ನುವ ಕೆಲಸ ಸಿಗಬೇಕೆಂದು ಆಶಿಸುವುದು ಮನುಷ್ಯನ ಸಹಜ ಗುಣ. ಅದರಲ್ಲೂ ಎಲ್ಲಾ ರೀತಿಯ ಗುಣಮಟ್ಟದ ಶಿಕ್ಷಣ ಪಡೆದು ಕೆಲಸಕ್ಕೆ ವಿದೇಶಕ್ಕೆ ಹೋಗುವವರ ಸಂಖ್ಯೆಯೇ ಹೆಚ್ಚು. ಹೆಚ್ಚು ಸಂಬಳ ಸಿಗುತ್ತದೆ ಎಂಬ ಕಾರಣ ಒಂದಾದರೆ, ಭಾರತದಲ್ಲಿ ದುಡಿದರೆ ಸಂಬಳ ಕಡಿಮೆ ಖರ್ಚು ಹೆಚ್ಚು ಎಂಬ ಮನೋಭಾವನೆ. ಹೀಗೆ ಇಂತಹದೇ ಒಂದು ಘಟನೆ ಬಗ್ಗೆ ನಾವಿಂದು ತಿಳಿಯಲು ಹೊರಟಿದ್ದೇವೆ. ಆದರೆ ಇವರು ಎಲ್ಲರಂತೆಯೇ ಕೆಲಸ ಹಣದ ಆಸೆ ಇಂದ ಹೊರದೇಶಕ್ಕೆ ಕೆಲಸಕ್ಕೆ ಹೋದವರು. ಆದರೆ ಮುಂದೆ ನಡೆದದ್ದು ಬೇರೆಯೇ ಸಂಗತಿ ಬನ್ನಿ ತಿಳಿಯೋಣ ಇವರ ಬಗ್ಗೆ.

ಇವರ ಹೆಸರು ಸಂತೋಷ್ ಮಿಶ್ರಾ. ಇವರ ತಂದೆ ಭಾರತದ ಭೂ ಸೇನೆಯ ನಿವೃತ್ತ ಸೈನಿಕ. ಹುಟ್ಟಿನಿಂದಲೇ ದೇಶ ಪ್ರೇಮದ ಬಗೆಗೆ ಕಾಳಜಿ ತಂದೆ ಯಿಂದಲೆ ಬಂದಿತ್ತು ಎಂದರೂ ತಪ್ಪಾಗಲಾರದು. ಬಿಹಾರದಲ್ಲಿ ಹುಟ್ಟಿ ಅಲ್ಲೇ ವಿಧ್ಯಾಭ್ಯಾಸ ಕೂಡ ಪೂರ್ಣಗೊಳಿಸಿದ್ದಾರೆ. ಮುಂದಕ್ಕೆ ತಮ್ಮ ಉನ್ನತ ಶಿಕ್ಷಣಕ್ಕಾಗಿ ಮ್ಯಕನಿಕಲ್ ಅನ್ನು ಆಯ್ಕೆ ಮಾಡಿಕೊಂಡು ಓದಲು ಆರಂಭಿಸಿದರು. ಹೀಗೆ ಮುಂದಕ್ಕೆ ಯುರೋಪ್ ನಲ್ಲಿ ತಮ್ಮ ವೃತ್ತಿ ಆರಂಭಿಸಿದರು. ಅಲ್ಲಿ 4 ವರ್ಷಗಳ ಇದ್ದರು, ಅಲ್ಲಿಂದ ನಂತರ ಅಮೆರಿಕಾಗೆ ಬಂದರು. ಅಲ್ಲಿ ಸರಿ ಸುಮಾರು 7 ವರ್ಷಗಳ ಕಾಲ ಸಾಫ್ಟ್ವೇರ್ ಕಂಪನಿ ಒಂದರಲ್ಲಿ ದುಡಿದರು. ಆ ಸಮಯಕ್ಕೆ ಅವರಿಗೆ 50 ಲಕ್ಷ ವರೆಗೆ ಸ್ಯಾಲರಿ ಇತ್ತು. ಆದರೂ ದೇಶ ಸೇವೆ ಮಾಡಬೇಕು ಎಂಬ ಉದ್ದೇಶ ಹೊತ್ತು ತಾಯ್ನಾಡಿಗೆ ಬಂದರು.

ಹೀಗೆ ಬಂದು ಇಲ್ಲಿ upsc ತಯಾರಿ ಮಾಡಲು ಶುರು ಮಾಡಿದರು. ಅವರ ಅದೃಷ್ಟವೇ ಎಂಬಂತೆ ಮೊದಲ ಪ್ರಯತ್ನದಲ್ಲಿ ಅವರು ಐಪಿಎಸ್ ಅಧಿಕಾರಿ ಆಗಿ ನೇಮಕ ಗೊಂಡರು. ಆದರೂ ಅವರು ತಾವು ನಡೆದು ಬಂದ ದಾರಿ ಮರೆಯದೆ, ಈಗಲೂ ಕೂಡ ಸಣ್ಣ ಪುಟ್ಟ ಮಕ್ಕಳಿಗೆ ತಮ್ಮ ಬಿಡುವಿನ ಸಮಯದಲ್ಲಿ ಪಾಠ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇನ್ನಷ್ಟು ಸಾಧನೆ ಮಾಡಲಿ ಎಂದು ಆಶಿಸುವ.

Leave A Reply

Your email address will not be published.