ನಾವು ಹಣ ಇಲ್ಲ ಎಂದು ಚಿಂತೆ ಮಾಡಿದರೆ, ಈ ದೇಶದಲ್ಲಿ ಹಣ ಮಾರಾಟ ಮಾಡುವುದೇ ಜನರ ಕಸುಬು.

594

ಜೀವನದಲ್ಲಿ ಹಣ ಎಷ್ಟು ಮುಖ್ಯ ಎಂಬುವುದು ಮನುಷ್ಯನಾಗಿ ಇರುವವನಿಗೆ ಚೆನ್ನಾಗಿ ಗೊತ್ತು. ಯಾಕೆಂದರೆ ಹಣ ಇಲ್ಲದೆ ಏನು ಇಲ್ಲ. ಹಣ ಇದ್ದರೆ ಮಾತ್ರ ಎಲ್ಲವೂ . ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಮಾತಿದೆ. ಯಾಕೆಂದರೆ ಹಣದ ಮಹತ್ವ ಅಷ್ಟು. ಕೆಲವೊಬ್ಬರು ನಿಯತ್ತಾಗಿ ಹಣ ಸಂಪಾದನೆ ಮಾಡಿದರೆ ಕೆಲವರು ಒಂದೇ ರಾತ್ರಿಗೆ ಶ್ರೀಮಂತರು ಆಗಬೇಕು ಎಂದು ಅಡ್ಡ ದಾರಿಯಲ್ಲಿ ಸಂಪಾದನೆ ಮಾಡುತ್ತಾರೆ. ಆದರೆ ಇಲ್ಲೊಂದು ದೇಶದಲ್ಲಿ ಹಣ ಎಂದರೆ ಅಷ್ಟೊಂದು ಬೆಲೆ ಇಲ್ಲ. ಹಣವನ್ನೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಈ ದೇಶದಲ್ಲಿ ಇದು ಕೂಡ ಒಂದು ವ್ಯಾಪಾರ. ಯಾವುದು ಆ ದೇಶ ಬನ್ನಿ ತಿಳಿಯೋಣ.

ಆಫ್ರಿಕಾ ಖಂಡದ ರೋಮಾಲಿ ಲ್ಯಾಂಡ್ ಎಂಬ ದೇಶ ವಿಶ್ವದ ಏಕೈಕ ದೇಶ ಇಲ್ಲಿ ಹಣವನ್ನು ಕೂಡ ಮಾರುತ್ತಾರೆ. ಹೌದು ನಿಮಗೆಲ್ಲ ವಿಚಿತ್ರ ಎನಿಸಿದರೂ ಸತ್ಯ ವಿಚಾರ ಇದು. ಇಲ್ಲಿ ಹಣಕ್ಕೆ ಅಷ್ಟೊಂದು ಬೆಲೆ ಇಲ್ಲ ಮತ್ತು ಇಲ್ಲಿ ಹಣಕಾಗಿ ಯಾರು ಜಗಳ ಗಲಾಟೆ ಮಾಡಿದ ದಿನವೇ ಇಲ್ಲ. ಎಲ್ಲರೂ ದುಡಿಯುತ್ತಾರೆ ಹಣ ಸಂಪಾದನೆ ಮಾಡುತ್ತಾರೆ ಆದರೆ ಇಲ್ಲಿ ಹಣ ಎಷ್ಟೊಂದು ಇದೆ ಎಂದರೆ ಜನರು ಅದನ್ನು ತಮ್ಮ ಬಳಿ ಇತ್ತು ಕೊಳ್ಳಲು ಇಷ್ಟ ಪಡುವುದಿಲ್ಲ ಬದಲಾಗಿ ತಮ್ಮಲ್ಲಿ ಉಳಿದ ಹಣವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬಿಡುತ್ತಾರೆ. ವಿಚಿತ್ರ ಎನಿಸಿದರೂ ಸತ್ಯ.

ನಮ್ಮ ದೇಶದಲ್ಲಿ ಎಷ್ಟೇ ಹಣ ಇದ್ದರೂ ಮತ್ತೆ ಮತ್ತೆ ಯಾರ್ಯಾರದೋ ಹೆಸರಿನಲ್ಲಿ ಹಣ ಮಾಡುತ್ತಾರೆ ಆದರೆ ಇಲ್ಲೊಂದು ದೇಶ ಹಣ ಹೆಚ್ಚಾದರೆ ಮಾರುಕಟ್ಟೆಯಲ್ಲಿ ತಂದು ಮಾರಾಟ ಮಾಡುತ್ತದೆ. ಈ ದೇಶದಲ್ಲಿ ನೀವು 10 ಅಮೆರಿಕನ್ ಡಾಲರ್ ಕೊಟ್ಟರೆ 50 ಕೆಜಿ ರೊಮಾಲಿ ಲ್ಯಾಂಡ್ ಶಿಲಿಂಗ್ (ಅಲ್ಲಿನ ಕರೆನ್ಸಿ ಹೆಸರು) ಸಿಗುತ್ತದೆ ನಿಮಗೆ. ಹಾಗಾದರೆ ಹಣದ ಮೌಲ್ಯ ಇಲ್ಲಿ ಎಷ್ಟರ ಮಟ್ಟಿಗೆ ಇದೆ ಎಂದು ನೀವೇ ಊಹಿಸಕೊಳ್ಳಿ. ಅದೇನೇ ಆಗಲಿ ಹಣ ಹಣ ಎಂದು ತಮ್ಮವರನ್ನು ದೂರ ಮಾಡುವ ಜನರನ್ನು ಇಂತಹ ದೇಶಕ್ಕೆ ಕಳುಹಿಸಬೇಕು. ಹಣದ ಮೌಲ್ಯ ಸಂಬಂಧಗಳ ಎದುರು ಏನು ಇಲ್ಲ ಎಂದು ಅರಿವಾಗುತ್ತದೆ.

Leave A Reply

Your email address will not be published.