ನಿನ್ನೆ ರಾತ್ರಿ ಆಗಸದಲ್ಲಿ ಕಾಣಿಸಿಕೊಂಡ ಈ ಹೊಳೆಯುತ್ತಿರುವ ಸಾಲು ಏನು? ಇಲ್ಲಿದೆ ಅದರ ಅಸಲಿ ಸತ್ಯ.
ಬಾನೆತ್ತರದಲ್ಲಿ ಅದ್ಯಾವುದೋ ಒಂದು ನಕ್ಷತ್ರಗಳ ಸಾಲು ಹಾರಡಿದಂತೆ ನಿನ್ನೆ ರಾತ್ರಿ ಗೋಚರಿಸುತ್ತ ಇತ್ತು. ಎಲ್ಲಾ ಜನರು ಭಯಭೀತರಾಗಿದ್ದಾರೆ ಇದನ್ನು ಕಂಡು. ಅದೆಷ್ಟೋ ಜನ ವಿಡಿಯೋ ಮಾಡಿ ತಮ್ಮ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ. ಕೆಲವರು ಇದನ್ನು ಏಲಿಯನ್ ಗಳ ವಿಮಾನ ಎಂದು ಕರೆದರೆ ಮತ್ತೆ ಕೆಲವರು ಅಲ್ಲ ಅದು ಧೂಮಕೇತುಗಳು ಅದನ್ನು ಬರಿ ಕಣ್ಣಿನಲ್ಲಿ ನೋಡ ಬಾರದು ಅನಿಷ್ಟ ಎಂದು ಹೇಳಿದ್ದು ಇದೆ. ಹಾಗಾದರೆ ನಿಜವಾಗಿಯೂ ಬಾನೆತ್ತರದಲ್ಲಿ ಹಾರಾಡುತ್ತಿದ್ದ ಆ ವಸ್ತು ಆದರೂ ಏನು ಬನ್ನಿ ತಿಳಿಯೋಣ.
ಎಲೋನ್ ಮಸ್ಕ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸ್ಪೇಸ್ ಎಕ್ಸ್ ಸಂಸ್ಥೆಯ ಮಾಲಕರು ಇವರು. ಅದೆಷ್ಟೋ ಉಪಗ್ರಹಗಳನ್ನು ಇದೀಗಾಗಲೇ ಅಂತರಿಕ್ಷಕ್ಕೆ ಹಾರಿಸಿ ಬಿಟ್ಟಿದ್ದಾರೆ. ಈ ಒಂದು ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಅದೆಷ್ಟೋ ಕೋಟಿಗಟ್ಟಲೆ ಹಣ ಸುರಿದಿದ್ದಾರೆ. ಹಾಗಾದರೆ ಇವರಿಗೂ ನಿನ್ನೆ ಗೋಚರಿಸಿದ ಆ ವಸ್ತುವಿಗೂ ಏನು ಸಂಬಂಧ? ಸಂಬಂಧ ಖಂಡಿತಾ ಇದೆ ನೋಡಿ ಅಂತರಿಕ್ಷದಲ್ಲಿ ಹಾರಾಡುತ್ತಿದ್ದ ಆ ವಸ್ತು ಬೇರೇನೂ ಅಲ್ಲ ಸ್ಪೇಸ್ ಎಕ್ಸ್ ಸಂಸ್ಥೆಗೆ ಸೇರಿದ ಸ್ಟಾರ್ ಲಿಂಕ್ ಸ್ಯಾಟಲೈಟ್ ಟ್ರೈನ್. ಹೌದು ಇದು ಭೂಮಿಯ ಸುತ್ತ ಪರಿಭ್ರಮಿಸುವ ಸಮಯದಲ್ಲಿ ಕಣ್ಣಿಗೆ ಬಿದ್ದಿದೆ.
ಸ್ಟಾರ್ ಲಿಂಕ್ ಯೋಜನೆ Elon Musk ಅವರ ಮಹತ್ವದ ಯೋಜನೆ. ಇದರ ಮೂಲಕ ವಿಶ್ವದ ಮೂಲೆ ಮೂಲೆಗೂ ಇಂಟರ್ನೆಟ್ ಸೇವೆ ಕಲ್ಪಿಸುವುದು ಅವರ ಕನಸು. ಹೌದು ಅದೇನೇ ಇರಲಿ ಪ್ರಕೃತಿಯ ವಿರುದ್ದವಾಗಿ ಯಾವುದೇ ಕೆಲಸ ಮಾಡದೆ, ಅದರ ನೈಜತೆಗೆ ಭಂಗ ತಾರದೆ ಇದ್ದರೆ ಅಷ್ಟೇ ಸಾಕು ಎಂಬುದು ನಮ್ಮೆಲ್ಲರ ಅನಿಸಿಕೆ.