ನಿಮ್ಮ ಗ್ಯಾಲರಿ ಅಲ್ಲಿರುವ ಡುಪ್ಲಿಕೇಟ್ ಫೋಟೋಸ್ ಅನ್ನು ಒಂದೇ ಬಾರಿಗೆ ಹೇಗೆ ಡಿಲಿಟ್ ಮಾಡುವುದು? ಇಲ್ಲಿ ಓದಿರಿ

286

ಇದೀಗ ಎಲ್ಲರ ಕೈಯಲ್ಲೂ ಆಂಡ್ರಾಯ್ಡ್ ಮೊಬೈಲ್ ಗಳಿದ್ದು, ಈಗಿನ ಜನಾಂಗವಂತು ಫೋಟೋ ಫ್ರೀಕ್ ಎಂದರೂ ತಪ್ಪಾಗಲಿಕ್ಕಿಲ್ಲ. ಎಲ್ಲಿ ನೋಡಿದರಲ್ಲಿ ಫೋಟೋ ತೆಗೆಯುವುದು. ಕುಂತಲ್ಲಿ ನಿಂತಲ್ಲಿ ತಿಂದಲ್ಲಿ ಎದ್ದಲ್ಲಿ ಫೋಟೋ ತೆಗೆಯುವುದು ಒಂದು ಗೀಳಾಗಿ ಹೋಗಿದೆ. ಹಾಗಿರುವಾಗ ನಾವು ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಅದು ನಮ್ಮ gallery ಸಮಸ್ಯೆ . ಹೌದು ಫೋಟೋ ತುಂಬಿದಂತೆ ಇನ್ಬಿಲ್ಟ್ ಮೆಮೊರಿ ಕಮ್ಮಿ ಆಗುತ್ತಾ ಹೋಗುತ್ತದೆ.

ಎಲ್ಲರೂ ಎದುರಿಸುವ ಮತ್ತೊಂದು ಸಮಸ್ಯೆ ಎಂದರೆ ಡುಪ್ಲಿಕೇಟ್ ಫೋಟೋ ಸಂಗ್ರಹಣೆ. ಹೌದು ಎಲ್ಲರ ಮೊಬೈಲ್ ನಲ್ಲಿ ಇದೊಂದು ಸಮಸ್ಯೆ ಇದ್ದೆ ಇದೆ. ಅದೆಷ್ಟೋ ಫೋಟೋಗಳು ಡುಪ್ಲಿಕೇಟ್ ಆಗಿ ಸಂಗ್ರಹಣೆ ಆಗಿರುತ್ತದೆ. ಇದರಿಂದ inbuilt ಮೆಮೊರಿ ವ್ಯರ್ಥ ಆಗುತ್ತದೆ. ಇಂತಹ ಫೋಟೋಗಳನ್ನು ಹುಡುಕಿ ಹುಡುಕಿ ಡಿಲಿಟ್ ಮಾಡುವುದು ಒಂದೇ ದೊಡ್ಡ ತಲೆಬಿಸಿ ಕೆಲಸ . ಹೌದು ಅದಕ್ಕಾಗಿ ನಾವು ಒಂದು ಸುಲಭ ಉಪಾಯ ತಿಳಿಸುತ್ತಿದ್ದೇವೆ ಅದರಿಂದಾಗಿ ನೀವು ಒಂದೇ ಸಮನೆ ನಿಮ್ಮ ಗ್ಯಾಲರಿ ಅಲ್ಲಿರುವ ಡುಪ್ಲಿಕೇಟ್ ಫೋಟೋಸ್ ಗಳನ್ನ ಡಿಲಿಟ್ ಮಾಡಬಹುದು.

ಹೌದು ಅದೆಷ್ಟೋ ಆಂಡ್ರಾಯ್ಡ್ ಆ್ಯಪ್ ಗಳು play store ನಲ್ಲಿ ಲಭ್ಯವಿದೆ ಅದನ್ನು ಬಳಸಿ ನಿಮ್ಮ gallery ಅಲ್ಲಿರುವ ಡುಪ್ಲಿಕೇಟ್ ಫೋಟೋಸ್ ಗಳನ್ನೂ ಡಿಲಿಟ್ ಮಾಡಬಹುದು .ಹಾಗಾದರೆ ಯಾವುದು ಆ ಆ್ಯಪ್ ಗಳು ಎಂದು ತಿಳಿಯೋಣ. 1 Google files go, 2.Gallery doctor- photos cleaner, 3.Clean master, 4.Nox cleaner, 5.Remo duplicate photo ರೆಮೊವೆರ್. ಹೌದು ಈ ಐದು ಆ್ಯಪ್ ಗಳನ್ನ ಬಳಸಿ ನಿಮ್ಮ ಮೊಬೈಲ್ gallery ಅಲ್ಲಿರುವ ಡುಪ್ಲಿಕೇಟ್ ಫೋಟೋಸ್ ಅನ್ನು ಒಂದೇ ಸಾರಿಗೆ ಡಿಲಿಟ್ ಮಾಡಬಹುದು.

Leave A Reply

Your email address will not be published.