ನಿಮ್ಮ ಮಕ್ಕಳು, ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಯಾರಜೊತೆಗೆ ಹೆಚ್ಚು ಚಾಟ್ ಮಾಡುತ್ತಾರೆ ಗೊತ್ತಾಗಬೇಕೇ? ಈ ರೀತಿ ಮಾಡಿ.
ಎಲ್ಲರ ಜೀವನದಲ್ಲಿ ಕೂಡ ಯಾರಾದ್ರೂ ಒಬ್ಬರು ಪ್ರೀತಿ ಪಾತ್ರರು ಅಂತ ಇದ್ದೆ ಇರುತ್ತಾರೆ. ಅವರ ಎಲ್ಲಾ ಆಗುಹೋಗುಗಳು ನಿಮಗೂ ಗೊತ್ತಿರುತ್ತದೆ ಮತ್ತು ನಿಮ್ಮ ಬಗ್ಗೆ ಅವರಿಗೂ ಗೊತ್ತಿರುತ್ತದೆ. ಆದರೂ ಮನುಷ್ಯನ ಮನಸ್ಸು ಎಂಬುವುದು ಸ್ಥಿಮಿತದಲ್ಲಿ ಇರುವುದಿಲ್ಲ ,ಒಂದಲ್ಲ ಒಂದು ಕೆಟ್ಟ ಯೋಚನೆ ಮಾಡುತ್ತಲೇ ಇರುತ್ತದೆ. ನಾವು ನಮ್ಮ ಪ್ರೀತಿ ಪಾತ್ರರು ಮತ್ತೊಬ್ಬರ ಜೊತೆ ಆತ್ಮೀಯ ಆಗಿರುವುದನ್ನು ಎಂದು ಬಯಸುವುದಿಲ್ಲ. ಅದಕ್ಕಾಗಿ ನಾವು ಅವರ ಮೇಲೆ ನಿಗಾ ಇಡುತ್ತೇವೆ. ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಬಂದು ಎಲ್ಲವೂ ಹತ್ತಿರವಾಗಿದೆ.
ನಿಮಗೂ ಕೂಡ ನಿಮ್ಮ ಪ್ರೀತಿ ಪಾತ್ರರು ಮತ್ತೊಬ್ಬರ ಬಳಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಎಂಬ ಭಾವನೆ ಬಂದಿರಬಹುದು. ಲೇಟ್ ನೈಟ್ ಆನ್ಲೈನ್ ಇರುತ್ತಾರೆ. ನಿಮ್ಮ ಮೆಸೇಜ್ ಗಳಿಗೆ ರಿಪ್ಲೈ ಕೊಡದೆ ಇರುವುದು ಕಂಡಾಗ ನೀವು ನಿಮ್ಮ ಮನಸನ್ನು ಕೊರಗಿಸಿಕೊಳ್ಳುತ್ತಿರಿ. ಹಾಗಿರುವಾಗ ನಿಮ್ಮ ಪ್ರೀತಿ ಪಾತ್ರರು ಯಾರ ಜೊತೆಗೆ ಅತೀ ಹೆಚ್ಚು ಸಮಯ ಕಳೆಯುತ್ತಾರೆ ವಾಟ್ಸಪ್ ನಲ್ಲಿ ಎಂದು ತಿಳಿಯುವ ಕುತೂಹಲ ಇದ್ದರೆ ಇಲ್ಲೊಂದು ಸುಲಭ ಮಾರ್ಗ ಇದೆ. ಇದನ್ನು ನೀವು ಪರೀಕ್ಷೆ ಮಾಡಿದರೆ ಅವರು ಯಾರ ಜೊತೆಗೆ ಅತೀ ಹೆಚ್ಚು ಚಾಟ್ ಮಾಡುತ್ತಾರೆ ಎಂದು ತಿಳಿಯುತ್ತದೆ. ಹಾಗಾದರೆ ಹೇಗೆ ಚೆಕ್ ಮಾಡುವುದು ಎಂದು ಇಲ್ಲಿ ಓದಿರಿ.
ವಾಟ್ಸಪ್ ಓಪನ್ ಮಾಡಿದಾಗ ನೀವು ಅದರ ಬಲಭಾಗಕ್ಕೆ ಮೂರು ಡಾಟ್ಟ್ ಇರುವ ಆಪ್ಷನ್ ಬರುತ್ತದೆ. ಅಲ್ಲಿ ಹಲವಾರು ಆಪ್ಷನ್ ಕಾಣಬಹುದು, ಅದರಲ್ಲಿ ಸೆಟ್ಟಿಂಗ್ಸ್ ಗೆ ಹೋದರೆ, ಸ್ಟೋರೇಜ್ ಅಂಡ್ ಡಾಟಾ ಆಯ್ಕೆ ಕಾಣಬಹುದು. ಅದನ್ನು ಓಪನ್ ಮಾಡಿದಾಗ ನಿಮಗೆ ಇನ್ನಶ್ಟು ಕೆಲವು ಆಯ್ಕೆ ಬರುತ್ತದೆ ಅದರಲ್ಲಿ ನೆಟ್ವರ್ಕ್ ಯೂಸೇಜ್ ಒತ್ತಿದರೆ ಅವರು ಯಾರ ಬಳಿ ಅತೀ ಹೆಚ್ಚು ಚಾಟ್ ಮಾಡುತ್ತಾರೆ ಎಂದು ತಿಳಿಯುತ್ತದೆ.