ನಿಮ್ಮ ಮನೆಯಲ್ಲಿ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳಬೇಕೆ?? ಸಾವಿರಾರು ರೂಪಾಯಿ ಉಳಿಸಲು ಇರುವ ಟ್ರಿಕ್ ಏನು ಗೊತ್ತೇ??

216

ನಮಸ್ಕಾರ ಸ್ನೇಹಿತರೇ ಬೇಸಿಗೆ ಬಂದಾಗೆಲ್ಲ ನಿಮಗೆ ತಿಳಿದಿರುವಂತೆ ಫ್ಯಾನ್ ಎಸಿ ಫ್ರಿಡ್ಜ್ ಸೇರಿದಂತೆ ಹಲವಾರು ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾಗುತ್ತದೆ. ವಿದ್ಯುತ್ ಉಪಕರಣಗಳನ್ನು ಹೆಚ್ಚಿಗೆ ಬಳಸಿದಾಗಲಿಲ್ಲ ವಿದ್ಯುತ್ ಬಿಲ್ ಕೂಡ ಹೆಚ್ಚಾಗಿಯೇ ಬರುತ್ತದೆ, ಇನ್ನು ಚಳಿಗಾಲ ಬಂದಾಗ ಹೀಟರ್, ನೀರು ಕಾಯಿಸಲು ಹೀಗೆ ವಿವಿಧ ಕಾರಣಗಳಿಗೆ ವಿದ್ಯುತ್ ಹೆಚ್ಚಾಗಿ ಬಳಕೆಯಾಗುತ್ತದೆ. ಹೀಗಾಗಿ ವಿದ್ಯುತ್ ಅನ್ನು ಹೇಗೆ ಬಳಕೆ ಮಾಡುವುದರಿಂದ ಕಡಿಮೆ ವಿದ್ಯುತ್ ಬಿಲ್ ಬರುವಂತೆ ಮಾಡಬಹುದು ಎಂಬುದರ ಕುರಿತಂತೆ ಇಂದು ತಿಳಿಯೋಣ ಬನ್ನಿ.

ಎಸಿ ಅನ್ನು ಬಳಸುವುದರಿಂದ ಕೂಡ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ ಹೀಗಾಗಿ ಎಸಿ ಅನ್ನು 16 ಡಿಗ್ರಿ ಬದಲಿಗೆ 24° ಗೆ ಹೊಂದಿಸಿದರೆ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ. ನೀವು ಮನೆಯಲ್ಲಿ ಬೆಳಕಿಗಾಗಿ ಹಲವಾರು ತರಹ ಬಾರಿ ಬಲಬಗಳನ್ನು ಬಳಸುತ್ತಿರಿ ಆದರೆ ವಿದ್ಯುತ್ ಅನ್ನು 90 ಪ್ರತಿಶತ ಉಳಿಸಲು ನೀವು ಎಲ್ಇಡಿ ಬಲ್ಬ್ ಗಳನ್ನು ಉಪಯೋಗಿಸಿದರೆ ಬೆಳಕು ಕೂಡ ಗುಣಮಟ್ಟದಾಗಿದೆ ಹಾಗೂ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. ಇನ್ನು ಟಿವಿ ನೋಡುವಾಗ ನೀವು ಸಾಮಾನ್ಯವಾಗಿ ರಿಮೋಟ್ ಅನ್ನು ಬಳಸುತ್ತೀರಿ ಆದರೆ ಅದನ್ನು ಆಫ್ ಮಾಡುವಾಗ ಮುಖ್ಯ ಸ್ವಿಚ್ ಅನ್ನು ಆಫ್ ಮಾಡುವುದು ಉತ್ತಮ. ಇನ್ನು ನಿಮ್ಮ ಎಸಿ ಯೂನಿಟ್ ನೆರಳಿನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ ಯಾಕೆಂದರೆ ಒಂದು ವೇಳೆ ಎಸಿ ಯೂನಿಟ್ ಸೂರ್ಯನ ಕಿರಣಗಳಿಗೆ ತಾಗುವಂತೆ ಇದ್ದರೆ ಎಸಿಯ ಪರಂಗಣ ಘಟಕವು ಹೆಚ್ಚಿನ ಕರೆಂಟ್ ಅನ್ನು ಬಳಸಿಕೊಳ್ಳುವುದರ ಮೂಲಕ ಹೆಚ್ಚಿನ ದರದ ಬಿಲ್ ಬರುವುದಕ್ಕೆ ಕಾರಣವಾಗುತ್ತದೆ.

ಬಟ್ಟೆಗಳ ಐರನ್ ಮಾಡುವಾಗ ಸ್ವಯಂ ಚಾಲಿತ ಐರನ್ ಬಾಕ್ಸ್ ಅನ್ನು ನೀವು ಖರೀದಿಸಿ ಉಪಯೋಗಿಸುವುದು ಉತ್ತಮ. ಅದಕ್ಕಿಂತ ಮಿಗಿಲಾಗಿ ಬಟ್ಟೆಯನ್ನು ಐರನ್ ಮಾಡುವಾಗ ನೀವು ಇನ್ನೊಂದು ವಿಚಾರವನ್ನು ಗಮನದಲ್ಲಿರಿಸಿಕೊಳ್ಳಬೇಕು. ಸರಿಯಾಗಿ ಒಣಗಿರುವ ಬಟ್ಟೆಗಳನ್ನು ಮಾತ್ರ ಐರನ್ ಮಾಡಿ ಒಂದು ವೇಳೆ ಸ್ವಲ್ಪ ಒದ್ದೆಯಾಗಿದ್ದರೂ ಕೂಡ ಐರನ್ ಮಾಡಲು ಐರನ್ ಬಾಕ್ಸ್ ಇನ್ನಷ್ಟು ಅಧಿಕ ವಿದ್ಯುತ್ ಅನ್ನು ಬಳಸಿಕೊಳ್ಳುತ್ತದೆ. ಫ್ರಿಡ್ಜ್ ಅನ್ನು ಗಾಳಿ ತಾಕುವ ಜಾಗಕ್ಕೆ ತೆರೆದಿಟ್ಟರೆ ಅದು ತಾನು ಬಳಕೆ ಮಾಡುವ ವಿದ್ಯುತ್ ಗಿಂತ ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ವಿದ್ಯುತ್ ಅನ್ನು ಬಳಕೆ ಮಾಡುತ್ತದೆ. ಈ ಎಲ್ಲಾ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ವಿದ್ಯುತ್ ಬಿಲ್ ನಲ್ಲಿ ಕಡಿಮೆ ಮೊತ್ತ ಬರುವ ಹಾಗೆ ಮಾಡಬಹುದಾಗಿದೆ.

Leave A Reply

Your email address will not be published.