ನಿಮ್ಮ ಹೃದಯ ನಿಮ್ಮ ಅಂಗೈ ಅಷ್ಟು ದೊಡ್ಡದು ಇದೆ, ಆದರೆ ಇಲ್ಲಿ ಒಂದು ಜೀವಿಯ ಹೃದಯದ ತೂಕ 600 ಕೆಜಿ ಅಷ್ಟಿದೆ !! ಯಾವುದು ಆ ಜೀವಿ ಇಲ್ಲಿ ಓದಿರಿ.
ಈ ಭೂಮಿಯೇ ಹಾಗೆ ಹಲವಾರು ವೈವಿಧ್ಯತೆಗಳಿಂದ ಕೂಡಿದೆ. ಅದೆಷ್ಟೋ ಅದ್ಭುತಗಳು ಇಲ್ಲಿವೆ. ಅದರ ಹಿಂದಿನ ಕಾರಣಗಳನ್ನು ಹುಡುಕುತ್ತಾ ಹೋಗುವ ಹಾಗೆ ಇಲ್ಲ ಕಾರಣ ಅದು ಪ್ರಕೃತಿಗೆ ವಿರುದ್ದವಾದ ಕ್ರಿಯೆ. ಹೌದು ಇಲ್ಲಿ ಹಲವಾರು ಉತ್ತರಗಳೇ ಇಲ್ಲದ ಪ್ರಶ್ನೆಗಳು ಇವೆ. ಅಂತಹುದೇ ಒಂದು ಅದ್ಭುತದ ಬಗ್ಗೆ ನಾವಿಂದು ತಿಳಿಯೋಣ.
ಹೃದಯ ಎಂದರೆ ಒಂದು ಜೀವಿಯ ಅತ್ಯಂತ ಮುಖ್ಯ ಭಾಗ. ಮನುಷ್ಯ ಉಸಿರಾಡುತ್ತ ಇದ್ದಾನೆ ಎಂದಾದರೆ ಅದು ಸ್ವಸ್ತ ಹೃದಯದ ಕೆಲಸದಿಂದ ಮಾತ್ರ. ಹಾಗೆ ಮನುಷ್ಯ ಎಂದಲ್ಲ ಎಲ್ಲಾ ಜೀವಿಗಳು ಅಷ್ಟೇ ಹೃದಯ ಹೊಂದಿರುತ್ತದೆ. ದೇಹದ ಇತರ ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಹೃದಯ ಕಾರ್ಯ ನಿರ್ವಹಿಸುವುದು ಅತ್ಯಂತ ಅಗತ್ಯ. ಮನುಷ್ಯ ಹೃದಯದ ಬಗ್ಗೆ ಎಲ್ಲರಿಗೂ ಗೊತ್ತು. ನಾವು ಚಿಕ್ಕಂದಿನಿಂದಲೇ ಓದಿಕೊಂಡು ಬಂದಿದ್ದೇವೆ ನಮ್ಮ ಹೃದಯ ನಮ್ಮ ಅಂಗೈ ಮುಷ್ಟಿ ಅಷ್ಟು ದೊಡ್ಡದು ಇದೆ ಎಂದು. ಆದರೆ ನಾವು ಇಲ್ಲಿ ತಿಳಿಯಲು ಹೊರಟ ಈ ಜೀವಿಯ ಹೃದಯ ಬರೋಬ್ಬರಿ 600ಕೆಜಿ ತೂಕ ಇದೆ . ಹೌದು ವಿಚಿತ್ರ ಎನಿಸಿದರೂ ಇದು ಸತ್ಯ ಸಂಗತಿ . ಹಾಗಾದರೆ ಯಾವುದು ಆ ಜೀವಿ ಬನ್ನಿ ತಿಳಿಯೋಣ.
ಆ ಜೀವಿ ಮತ್ಯಾವುದೋ ಅಲ್ಲ ಅಳಿವಿನ ಅಂಚಿನಲ್ಲಿ ಇರುವ ಬ್ಲೂ ವೇಲ್ ಗಳು. ಹೌದು ನೀಲ ತಿಮಿಂಗಿಲ ಎಂದು ಕರೆಯುತ್ತೇವೆ. ಇದರ ಹೃದಯ ಬರೋಬ್ಬರಿ 600 ಕೆಜಿ ಅಷ್ಟು ತೂಕ ಇದ್ದು. ಇದರ ಹೃದಯ ಒಂದು ನಿಮಿಷಕ್ಕೆ ಬರಿ 9 ಬಾರಿ ಬಡಿದು ಕೊಳ್ಳುತ್ತದೆ. ಹೌದು ಓದಲು ವಿಚಿತ್ರ ಎನಿಸಬಹುದು, ಆದರೆ ಇದು ಸತ್ಯ ಸಂಗತಿ ಮತ್ತು ಇದನ್ನು ವಿಜ್ಞಾನ ಸಾಭೀತು ಪಡಿಸಿದೆ. ಅದೇನೇ ಆಗಲಿ ಪ್ರಾಕೃತಿಕ ವಿಷಯಗಳ ಬಗ್ಗೆ ವಾದ ವಿವಾದ ಮಾಡುವುದು ಒಳ್ಳೆಯದಲ್ಲ . ಪ್ರಕೃತಿದತ್ತ ವಸ್ತುಗಳು ಜೀವಿಗಳನ್ನು ಅಳಿಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಧರ್ಮ.