ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ?? ನಿಮ್ಮ ಬಾಡಿಗೆ ಮನೆ ವಾಸ್ತು ಸರಿಯಿದೆಯೇ?? ಚೆಕ್ ಮಾಡುವುದು ಹೇಗೆ ಗೊತ್ತೇ??
ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ?? ನಿಮ್ಮ ಬಾಡಿಗೆ ಮನೆ ವಾಸ್ತು ಸರಿಯಿದೆಯೇ?? ಚೆಕ್ ಮಾಡುವುದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಾವು ಸಹ ಆತನ ಹಿಂದೂ ಸಂಸ್ಕೃತಿಯನ್ನು ಮೊದಲಿನಿಂದಲೂ ಕೂಡ ಪಾಲಿಸಿಕೊಂಡು ಬಂದಿರುವ ದೇಶ ಹಾಗೂ ನಾಗರಿಕರು. ಹೀಗಾಗಿ ಜ್ಯೋತಿಷ್ಯ ಶಾಸ್ತ್ರದ ಕುರಿತಂತೆ ನಾವು ಹೆಚ್ಚಾಗಿ ನಂಬಿಕೆಯನ್ನು ಇರಿಸಿಕೊಳ್ಳುತ್ತೇವೆ. ಒಂದು ಮನೆಯಲ್ಲಿ ವಾಸ್ತುಶಾಸ್ತ್ರ ಚೆನ್ನಾಗಿದ್ದರೆ ಮಾತ್ರ ಅಲ್ಲಿ ಏನಾದರೂ ದೊಡ್ಡಮಟ್ಟದಲ್ಲಿ ಒಳ್ಳೆಯದು ಆಗಬಹುದು. ವಾಸ್ತುಶಾಸ್ತ್ರ ಕೆಟ್ಟದಾಗಿದ್ದರೆ ಖಂಡಿತವಾಗಿ ಏನಾದರೂ ಜೀವನದಲ್ಲಿ ಕೆಟ್ಟದ್ದು ಕೂಡ ಆಗಬಹುದಾಗಿದೆ. ಎಲ್ಲರೂ ಕೂಡ ಹೊಸ ಮನೆ ಕಟ್ಟುವಾಗ ಇದರ ಕುರಿತಂತೆ ಚಿಂತಿಸುತ್ತಾರೆ ಆದರೆ ಬಾಡಿಗೆ ಮನೆಗೆ ಹೋಗುವಾಗ ಇದರ ಕುರಿತಂತೆ ಕೆಲವರಿಗೆ ಜ್ಞಾನ ಇರುವುದು ಕಡಿಮೆ. ಹೀಗಾಗಿ ವಾಸ್ತು ಸರಿ ಇದೆಯೇ ಇಲ್ಲವೇ ಎನ್ನುವುದನ್ನು ಹೇಗೆ ಚೆಕ್ ಮಾಡುವುದು ಎಂಬುದನ್ನು ಇಲ್ಲಿ ಹೇಳುತ್ತೇವೆ ಬನ್ನಿ.
ಬಾಡಿಗೆ ಮನೆ ತೆಗೆದುಕೊಳ್ಳುವುದಕ್ಕೂ ಮುನ್ನ ಅದರಲ್ಲಿ ಹಿಂದೆ ಏನಾದರೂ ಕೆಟ್ಟದ್ದು ನಡೆದಿದೆಯೇ ಎಂಬುದನ್ನು ವಿಚಾರಿಸಬೇಕು. ಒಂದು ವೇಳೆ ನಡೆದಿದ್ದರೆ ಗಣಪತಿ ಹೋಮ ಹಾಗೂ ವಾಸ್ತು ಶಾಂತಿ ಮಾಡಿಸಲೇಬೇಕು. ಅಡುಗೆ ಹಾಗೂ ದೇವರ ಮನೆ ದಕ್ಷಿಣ ಅಭಿಮುಖವಾಗಿರಬೇಕು. ಚೆನ್ನಾಗಿ ಗಾಳಿ ಬರುವ ಬಾಡಿಗೆ ಮನೆಗಳಲ್ಲಿ ಇರುವುದು ಉತ್ತಮ ಯಾಕೆಂದರೆ ಎಲ್ಲಿ ಆರ್ಥಿಕ ತಿಥಿ ಚೆನ್ನಾಗಿರುತ್ತದೆ ಹಾಗೂ ಸಕಾರಾತ್ಮಕ ಶಕ್ತಿಗಳಿರುತ್ತವೆ. ಸ್ಮಶಾನ ವಿದ್ಯುತ್ ಸ್ಥಾವರ ಹಾಗೂ ದೇವಸ್ಥಾನಗಳ ಬಳಿ ಇರುವ ಮನೆಗಳನ್ನು ಯಾವತ್ತೂ ಕೂಡ ಬಾಡಿಗೆಗೆ ತೆಗೆದುಕೊಳ್ಳಬಾರದು. ವಾಸ್ತು ಪ್ರಕಾರ ಮನೆಯ ಮುಖ್ಯ ಬಾಗಿಲು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿದ್ದರೆ ಲಕ್ಷ್ಮಿಯ ಕೃಪೆ ಉಂಟಾಗುತ್ತೆ.
ವಿದ್ಯುತ್ ಕಂಬ ಹಾಗೂ ಟೆಲಿಫೋನ್ ಟವರ್ ನಿಮ್ಮ ಮನೆಗೆ ತಾಗಿಕೊಂಡು ಇರಬಾರದು. ಮನೆಯ ಪ್ರತಿಯೊಂದು ಬಾಗಿಲುಗಳು ಕೂಡ ಒಳಭಾಗಕ್ಕೆ ತೆರೆದುಕೊಳ್ಳುವಂತೆ ಇರಬೇಕು. ನೈರುತ್ಯ ದಿಕ್ಕಿನಲ್ಲಿ ಮಾಲೀಕನ ಕೋಣೆ ಹಾಗೂ ಅಡುಗೆಕೋಣೆಯ ಈಶಾನ್ಯದಲ್ಲಿ ಮನೆ ದೇವರ ಕೋಣೆ ಇರಬೇಕು ದೇವರು ಕೊನೆ ಪೂರ್ವದಿಕ್ಕಿನಲ್ಲಿ ಇದ್ದರೂ ಕೂಡ ನಡೆಯುತ್ತದೆ. ಬಾಡಿಗೆ ಮನೆ ಆಗಿದ್ದರೂ ಕೂಡ ಈ ಎಲ್ಲಾ ವಾಸ್ತು ಶಾಸ್ತ್ರದ ಪ್ರಕಾರ ಇರುವ ಅಂಶಗಳನ್ನು ಹೊಂದಿದ್ದರೆ ಮಾತ್ರ ಬಾಡಿಗೆದಾರರಿಗೆ ಆ ಮನೆ ಶುಭವಾಗಿ ಪರಿಣಮಿಸುತ್ತಿದೆ ಹಾಗೂ ಅಲ್ಲಿ ನಡೆಸಲು ಪ್ರಾರಂಭಿಸಿದ ನಂತರ ನಿಮ್ಮ ಜೀವನದಲ್ಲಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಉಂಟಾಗುತ್ತದೆ. ಹೀಗಾಗಿ ಪ್ರತಿಯೊಂದು ಬಾಡಿಗೆ ಮನೆಯನ್ನು ತೆಗೆದುಕೊಳ್ಳುವ ಮುನ್ನ ಈ ವಿಚಾರಗಳನ್ನು ಗಮನಿಸಿ.