ನೀವು ಯಾವ ರೀತಿಯ ಹೆಂಡತಿ ಪಡೆಯಲು ಅದೃಷ್ಟ ಮಾಡಿರಬೇಕು ಗೊತ್ತೇ?? ಹೆಂಡತಿಯ ಕುರಿತು ಚಾಣಕ್ಯ ಹೇಳುವುದೇನು ಗೊತ್ತು??

ನೀವು ಯಾವ ರೀತಿಯ ಹೆಂಡತಿ ಪಡೆಯಲು ಅದೃಷ್ಟ ಮಾಡಿರಬೇಕು ಗೊತ್ತೇ?? ಹೆಂಡತಿಯ ಕುರಿತು ಚಾಣಕ್ಯ ಹೇಳುವುದೇನು ಗೊತ್ತು??

259

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆಯೆನ್ನುವುದು ಪ್ರಾಮುಖ್ಯತೆ ಹೊಂದಿರುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಹುಡುಗ ಕೂಡ ಮದುವೆ ಆಗುವುದಕ್ಕಿಂತ ಮುಂಚೆ ನನ್ನ ಹೆಂಡತಿ ನಿಜಕ್ಕೂ ಜೀವನದಲ್ಲಿ ಅಥವಾ ಅವಳ ಗುಣ ಹೇಗಿರುತ್ತದೆ ಎಂಬುದಾಗಿ ಚಿಂತಾಕ್ರಾಂತನಾಗಿ ಇರುತ್ತಾನೆ. ಯಾಕೆಂದರೆ ಪ್ರತಿಯೊಂದು ಸಂಸಾರವು ಕೂಡ ಚೆನ್ನಾಗಿರುವುದು ಸಂಸಾರದ ಹೆಣ್ಣಿನ ಮೇಲೆ ನಿರ್ಧಾರವಾಗುತ್ತದೆ.

ಒಂದು ವೇಳೆ ಆಕೆ ಸದ್ಗುಣ ಸಂಪನ್ನೆ ಆಗಿದ್ದರೆ ಖಂಡಿತವಾಗಿ ಆ ಸಂಸಾರ ಎನ್ನುವುದು ದೀರ್ಘಕಾಲದವರೆಗೆ ಸಾಗುತ್ತದೆ ಆದರೆ ಒಂದುವೇಳೆ ಸಂಸಾರದಲ್ಲಿ ಹೆಣ್ಣು ದಾರಿ ತಪ್ಪಿದ್ದರೆ ಖಂಡಿತವಾಗಿ ಸಂಸಾರ ಆರಂಭದಲ್ಲಿಯೇ ಅಂತ್ಯವಾಗುತ್ತದೆ. ನಿಮಗೆಲ್ಲರಿಗೂ ಇತಿಹಾಸಪ್ರಸಿದ್ಧ ಚಾಣಕ್ಯ ಕುರಿತಂತೆ ಖಂಡಿತವಾಗಿ ತಿಳಿದಿರುತ್ತದೆ. ಅವರು ತಾವು ಜೀವಮಾನದಲ್ಲಿ ಕಂಡಂತಹ ಹಲವಾರು ವಿಚಾರಗಳ ಕುರಿತಂತೆ ತನ್ನ ಅನುಭವವನ್ನು ಪುಸ್ತಕದಲ್ಲಿ ಧಾರೆಯೆರೆದಿದ್ದಾರೆ.

ಇಂದಿಗೂ ಕೂಡ ಹಲವಾರು ಜನರು ಈ ಪುಸ್ತಕದಿಂದಲೇ ಜೀವನದಲ್ಲಿ ಮುಂದೆ ಬರುವುದು ಹೇಗೆ ಎನ್ನುವುದರ ಕುರಿತಂತೆ ತಿಳಿದುಕೊಳ್ಳುತ್ತಿದ್ದಾರೆ. ಚಾಣಕ್ಯ ಈ ಪುಸ್ತಕದಲ್ಲಿ ಗೃಹಸ್ಥ ಜೀವನದ ಕುರಿತಂತೆ ಕೂಡ ಬರೆದಿದ್ದಾರೆ. ಅದರಲ್ಲೂ ಕೂಡ ಈ ಮೂರು ವಿಶೇಷ ಗುಣಗಳನ್ನು ಹೊಂದಿರುವ ಹೆಂಡತಿಯರನ್ನು ಹೊಂದಿರುವ ಪುರುಷರು ನಿಜಕ್ಕೂ ಕೂಡ ಜೀವನದಲ್ಲಿ ಅತ್ಯಂತ ಭಾಗ್ಯಶಾಲಿಗಳು ಆಗಿರುತ್ತಾರೆ. ಹಾಗಿದ್ದರೆ ಆ ಮೂರು ಗುಣಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲನೇದಾಗಿ ಚಾಣಕ್ಯ ರವರ ಗ್ರಂಥದಲ್ಲಿ ಉಲ್ಲೇಖವಾಗಿರುವಂತೆ ಒಂದು ವೇಳೆ ಮಹಿಳೆ ವೇದ ಹಾಗೂ ಪುರಾಣ ಗ್ರಂಥಗಳ ಕುರಿತಂತೆ ಹಾಗೂ ಧಾರ್ಮಿಕತೆಯ ಕುರಿತಂತೆ ಸಂಪೂರ್ಣ ಜ್ಞಾನವನ್ನು ಹೊಂದಿದ್ದರೆ ಖಂಡಿತವಾಗಿ ಆಕೆ ಪರಿಪೂರ್ಣ ಗ್ರಹಸ್ಥ ಮಹಿಳೆ ಆಗಿರುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇವುಗಳ ಮೌಲ್ಯ ದಿಂದಾಗಿ ಮನೆಯ ಸಂತೋಷವನ್ನು ಉಚ್ಚ ಸ್ಥಿತಿಯಲ್ಲಿ ಇರುವಂತೆ ಮಾಡುತ್ತಾರೆ ಹಾಗೂ ಸಮಾಜದಲ್ಲಿ ಗೌರವದಿಂದ ತಲೆಯೆತ್ತಿ ಓಡಾಡುವಂತೆ ಮಾಡುತ್ತಾಳೆ.

ತಮ್ಮ ಮಕ್ಕಳಿಗೆ ಸೇರಿದಂತೆ ಮುಂಬರುವ ಜನರೇಷನ್ ಅವರಿಗೂ ಕೂಡ ಉತ್ತಮ ಮಾರ್ಗದರ್ಶನವನ್ನು ಆಕೆ ನೀಡುತ್ತಾರೆ ಎಂಬುದನ್ನು ಯಾವುದೇ ಮಾತಿಲ್ಲದೆ ಒಪ್ಪಿಕೊಳ್ಳಬಹುದಾಗಿದೆ. ಎರಡನೆಯದಾಗಿ ಮಹಿಳೆಯರಿಗೆ ಮಾತನಾಡುವಾಗ ವಿನಮ್ರತೆ ಹಾಗೂ ಮಧುರವಾಗಿ ಮಾತನಾಡಬೇಕು. ಮಧುರವಾಗಿ ಎಂದರೆ ಎದುರಿಗೆ ಇರುವವರಿಗೆ ಗೌರವವನ್ನು ಸಲ್ಲಿಸಿ ನಮ್ರ ಸ್ವರದಿಂದ ಮಾತನಾಡುವುದು ಆಗಿದೆ. ಇಂತಹ ಮಹಿಳೆಯರನ್ನು ಪಡೆಯುವವರು ನಿಜಕ್ಕೂ ಕೂಡ ಭಾಗ್ಯಶಾಲಿ ಗಳಾಗಿರುತ್ತಾರೆ.

ಇಂತಹ ಮಹಿಳೆಯರು ಕುಟುಂಬವನ್ನು ಎರಡು ಭಾಗ ಆಗುವುದಕ್ಕೆ ಬಿಡುವುದಿಲ್ಲ ಕುಟುಂಬವನ್ನು ತನ್ನೊಂದಿಗೆ ಮುನ್ನಡೆಸುತ್ತಾಳೆ. ಇವರಿಂದಾಗಿ ಮನೆಯಲ್ಲಿ ಯಾವತ್ತೂ ಕೂಡ ಜಗಳ ಆಗುವುದಿಲ್ಲ ಬದಲಾಗಿ ಸಂತೋಷದ ವಾತಾವರಣ ತುಂಬಿ ತುಳುಕಾಡುತ್ತದೆ. ತಮ್ಮ ಮಾತುಗಳಿಂದಲೇ ಎಲ್ಲರ ಮನವನ್ನು ಗೆಲ್ಲುವ ಶಕ್ತಿ ಇವರಲ್ಲಿರುತ್ತದೆ. ಮೂರನೇದಾಗಿ ಯಾವ ಮಹಿಳೆ ಮದುವೆಯಾದ ನಂತರ ಹಣವನ್ನು ಉಳಿತಾಯ ಮಾಡಲು ಪ್ರಾರಂಭಿಸುತ್ತಾರೆ ಅವರು ನಿಜಕ್ಕೂ ಕೂಡ ಸಂಸಾರದ ನಿಜವಾದ ಶಕ್ತಿ ಆಗಿರುತ್ತಾರೆ. ಯಾಕೆಂದರೆ ಕೆಲವೊಂದು ಕಷ್ಟದ ಪರಿಸ್ಥಿತಿಗಳಲ್ಲಿ ಇವರು ಕೂಡಿಟ್ಟಿರುವ ಹಣವೇ ಜೀವಸಂಜೀವಿನಿ ಆಗಿರುತ್ತದೆ.

ಯಾವುದೇ ಕಷ್ಟದ ಸಂದರ್ಭದಲ್ಲಿ ಬೇರೆಯವರ ಮುಂದೆ ಹಣಕ್ಕಾಗಿ ಕೈಚಾಚುವ ಪರಿಸ್ಥಿತಿಯನ್ನು ಬರುವಂತೆ ಅವರು ಮಾಡಲು ಬಿಡುವುದಿಲ್ಲ. ಇವರನ್ನು ನೋಡಿ ಮನೆಯ ಉಳಿದ ಸದಸ್ಯರು ಹಾಗೂ ಮಕ್ಕಳು ಕೂಡ ಭವಿಷ್ಯದಲ್ಲಿ ಹಣವನ್ನು ಉಳಿತಾಯ ಮಾಡುವ ಕುರಿತಂತೆ ತಮ್ಮ ಪ್ರಯತ್ನವನ್ನು ಜಾರಿಯಲ್ಲಿರಿಸುತ್ತಾರೆ. ಒಂದು ವೇಳೆ ನಿಮ್ಮ ಹೆಂಡತಿ ಕೂಡ ಈ ಮೂರು ಗುಣಗಳನ್ನು ಬದುಕಿನಲ್ಲಿ ಅನುಸರಿಸುತ್ತಿದ್ದಾರೆ ಎಂದರೆ ಕಂಡಿತವಾಗಿ ಅವರನ್ನು ಹೆಂಡತಿಯನ್ನು ಆಗಿ ಪಡೆಯಲು ನೀವು ಅದೃಷ್ಟ ಮಾಡಿರಬೇಕು ಎಂಬುದಾಗಿ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ.

Leave A Reply

Your email address will not be published.