ನೂರಾರು ಜನರಿಗೆ ಅನುಕೂಲವಾಗಲು ಪಾಳು ಬಿದ್ದ ಬಂಜರು ಭೂಮಿಯಲ್ಲಿ ಈಕೆ ಮಾಡಿದ ಕೆಲಸ ಏನು ಗೊತ್ತೇ?

486

ಇದ್ದವರು ಎಲ್ಲವನ್ನೂ ಮಾಡುತ್ತಾರೆ, ಇಲ್ಲದವರು ಪ್ರಯತ್ನ ಮಾಡುವುದಿಲ್ಲ ಎಂಬ ಮಾತೊಂದಿದೆ. ಆದರೆ ಕೆಲವೊಂದು ನಿದರ್ಶನಗಳಲ್ಲಿ ಅದು ಕೂಡ ಸುಳ್ಳು. ಯಾಕೆಂದರೆ ಕೆಲವರು ಎಲ್ಲಾ ಸವಲತ್ತು ಇದ್ದರೂ ಸೋಂಬೇರಿ ಆಗಿಯೇ ಇರುತ್ತಾರೆ. ಹಾಗೆ ಕೆಲವರು ಏನು ಇಲ್ಲದಿದ್ದರು ಮತ್ತೊಬ್ಬರನ್ನು ನಂಬಿ ಬಾಳುವುದಿಲ್ಲ ಸ್ವಾವಲಂಬಿ ಜೀವನ ನಡೆಸುತ್ತಾರೆ. ಇಲ್ಲೊಬ್ಬರು ಅದನ್ನೇ ಮಾಡಿದ್ದಾರೆ. ಮನೆಯಲ್ಲಿ ಪಾಳು ಬಿದ್ದ ಬಂಜರು ಭೂಮಿಗೆ ಹೊಸ ಹುರುಪನ್ನು ಕೊಟ್ಟು, ಅದೆಷ್ಟೋ ಜನರಿಗೆ ಅನುಕೂಲ ಆಗುವಂತೆ ಮಾಡಿದ್ದಾರೆ. ಬನ್ನಿ ಏನಿದು ಕಥೆ ತಿಳಿಯೋಣ.

ಇವರ ಹೆಸರು ಭುವನೇಶ್ವರಿ, ಮಧುರೈ ನಿವಾಸಿ. 54 ವರ್ಷದ ಈಕೆ ಚಿಕ್ಕಂದಿನಿಂದಲೂ ಕೃಷಿ ಕೆಲಸ ಕಾರ್ಯದಲ್ಲಿ ಭಾರಿ ಆಸಕ್ತಿ. ವರುಷ ಕಳೆಯುತ್ತಾ ಇದ್ದರೂ ಕೃಷಿಯ ಮೇಲಿನ ಆಸಕ್ತಿ ಮಾತ್ರ ಕುಂದಿ ಹೋಗಲಿಲ್ಲ. ಅದನ್ನೇ ಮುಂದುವರೆಸಿ ಏನಾದರೂ ಮಾಡಬೇಕು ಎಂದು ಯೋಚಿಸಿದಾಗ ತಮ್ಮ ಪಾಳುಬಿದ್ದ ಜಮೀನಿನಲ್ಲಿ ಜೈವಿಕ ಕೃಷಿ ಮಾಡುವ ಬಗ್ಗೆ ಯೋಚನೆ ಮಾಡುತ್ತಾರೆ. ಆರಂಭಿಕ ಸಮಯದಲ್ಲಿ ಎಲ್ಲರೂ ಇದಕ್ಕೆ ವಿರೋಧ ವ್ಯಕ್ತ ಪಡಿಸಿದರು, ಆದರೆ ಇವರು ಮಾತ್ರ ಹಿಡಿದ ಕಾರ್ಯ ಬಿಡಲಿಲ್ಲ ಮಾಡಿಯೇ ತೀರುತ್ತೇವೆ ಎಂದು ಮಾಡಿದರು.

ಜೈವಿಕ ಕೃಷಿ ಮಾಡಲು ಇವರು ಮೊದಲು ಸಂಪೂರ್ಣ ತರಭೇತಿಯನ್ನು ಪಡೆದರು. ಅದರ ನಂತರ ಎಲ್ಲವನ್ನೂ ತರಭೇತಿಯಂತೆ ಮುಂದುವರೆಸಿ ಕೊಂಡು ಹೋಗಲು ನಿರ್ಧರಿಸಿದರು. ಮತ್ತು ಅದರಲ್ಲಿ ಯಶಸ್ಸು ಕೂಡಾ ಇವರ ಪಾಲಿಯಿತು. ಯಾವುದೇ ರೀತಿಯ ಕೀಟನಾಶಕ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಕೃಷಿ ಕಾರ್ಯ ಮಾಡಲು ಆರಂಭಿಸಿ ಬಿಟ್ಟರು. ಆರಂಭಿಕ ದಿನಗಳಲ್ಲಿ ಜನರು ನೋಡಿ ನಕ್ಕರು, ಆದರೆ ಕೊನೆಗೆ ಅವರಿಗೂ ಅರಿವಾಯಿತು ಅವರು ನಕ್ಕಿದ್ದು ಆಕೆಗಲ್ಲ ಬದಲಾಗಿ ತಮಗೆ ತಾವೇ ಎಂದು. ಪಾರಂಪರಿಕ ಬೇಸಾಯ ಪದ್ಧತಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಇತರರಿಗೂ ಇವರು ಇದರ ತರಭೇತಿ ನೀಡಿ ಸ್ವಾವಲಂಬಿ ಕೃಷಿ ಮಾಡುವತ್ತ ಪ್ರೇರೇಪಣೆ ನೀಡುತ್ತಿದ್ದಾರೆ. ಅದೇನೇ ಆಗಲಿ ಅವರಿಂದಾಗಿ ಇಂದು ಅದೆಷ್ಟೋ ಕುಟುಂಬಗಳು ಅನ್ನ ಇಲ್ಲದೆ ಸಾಯುವಂತೆ ಆಗಿಲ್ಲ.

Leave A Reply

Your email address will not be published.