ನೇರವಾಗಿ ದಿನೇಶ್ ಕಾರ್ತಿಕ್ ರವರ ಮೈಗೆ ಕೈ ಹಾಕಿದ ಯುವತಿ: ತಾಳ್ಮೆ ಕಳೆದುಕೊಂಡ ದಿನೇಶ್ ಮಾಡಿದ್ದು ಏನು ಗೊತ್ತೇ?

378

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆದ್ದು, ಟ್ರೋಫಿ ತಮ್ಮದಾಗಿಸಿ ಕೊಂಡಿತು. ಈ ಗೆಲುವು ಭಾರತ ತಂಡಕ್ಕೆ ಬಹಳ ಮುಖ್ಯವಾದ ಗೆಲುವು ಆಗಿತ್ತು, ಗೆದ್ದ ಟ್ರೋಫಿಯನ್ನು ರೋಹಿತ್ ಶರ್ಮಾ ಅವರು ದಿನೇಶ್ ಕಾರ್ತಿಕ್ ಅವರ ಕೈಗೆ ಕೊಟ್ಟು ಸಂಭ್ರಮಿಸಿದರು. ಅದೇ ದಿನ ಕೆಲವು ಘಟನೆಗಳು ಸಹ ನಡೆಯಿತು. ಟ್ರೋಫಿ ಪಡೆದು ಫೋಟೋಸ್ ಎಲ್ಲವನ್ನು ತೆಗೆಸಿಕೊಂಡ ನಂತರ ಆಟಗಾರರು ಡ್ರೆಸ್ಸಿಂಗ್ ರೂಮ್ ಗೆ ತೆರಳುತ್ತಿದ್ದಾಗ, ಒಬ್ಬ ಮಹಿಳೆ ಅಲ್ಲಿಗೆ ಬಂದರು.

ಬಂದು ದಿನೇಶ್ ಕಾರ್ತಿಕ್ ಅವರೊಡನೆ ಅನುಚಿತವಾಗಿ ವರ್ತಿಸಲು ಶುರುಮಾಡಿದರು. ದಿನೇಶ್ ಕಾರ್ತಿಕ್ ಅವರ ಮೈಮೇಲೆ ಕೈಹಾಕಿದರು, ಇದರಿಂದ ದಿನೇಶ್ ಕಾರ್ತಿಕ್ ಅವರುಗೆ ವಿಪರೀತ ಕೋಪಬಂದಿತು. ಕೂಡಲೇ ಅವರು ಮಹಿಳೆಯ ಕಡೆಗೆ ದೃಷ್ಟಿಸಿ ಕೋಪದಿಂದ ನೋಡಿದರು, ತಕ್ಷಣವೇ ಆಕೆ ದಿನೇಶ್ ಕಾರ್ತಿಕ್ ಅವರ ಕೈಮೇಲಿಂದ ತನ್ನ ಕೈಯನ್ನು ಹೊರತೆಗೆದರು, ಆಗ ದಿನೇಶ್ ಕಾರ್ತಿಕ್ ಅವರಿಗೆ ಕೋಪ ಬಂದಿದ್ದ ಕಾರಣ ಕಾರಣ ಮೈದಾನದ ಸಿಬ್ಬಂದಿಯನ್ನು ಕರೆದು ತರಾಟೆಗೆ ತೆಗೆದುಕೊಳ್ಳುವ ಮಟ್ಟಕ್ಕೆ ಅವರ ಕೋಪ ಹೋಗಿತ್ತು..

ಕೂಡಲೇ ರವಿಚಂದ್ರನ್ ಅಶ್ವಿನ್ ಅವರು ಬಂದು ದಿನೇಶ್ ಕಾರ್ತಿಕ್ ಅವರನ್ನು ಸಮಾಧಾನಪಡಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಮಹಿಳೆ ಯಾರು? ಮೈದಾನಕ್ಕೆ ಸೇರಿದವರೆ ಅಥವಾ ಬಿಸಿಸಿಐಗೆ ಸೇರಿದವರೆ ಎಂದು ಚರ್ಚೆ ಶುರುವಾಗಿದೆ. ಏಕೆಂದರೆ, ದಿನೇಶ್ ಕಾರ್ತಿಕ್ ಅವರ ಬಳಿ ಬಂದ ಆ ಮಹಿಳೆ ಇಂಡಿಯಾದ ಮಹಿಳಾ ಜೆರ್ಸಿ ಧರಿಸಿದ್ದರು, ಹಾಗಾಗಿ ಈ ಮಹಿಳೆ ಯಾರು ಎನ್ನುವ ಕುತೂಹಲ ಮತ್ತು ಚರ್ಚೆ ಎರಡು ಕೂಡ ಜೋರಾಗಿಯೇ ನಡೆಯುತ್ತಿದೆ

Leave A Reply

Your email address will not be published.