ನೋಟ್ ಬ್ಯಾನ್ ಉಪಾಯ ನರೇಂದ್ರ ಮೋದಿಯವರಿಗೆ ಕೊಟ್ಟಿದ್ದು ಯಾರು ಗೊತ್ತೇ? ೯ ನಿಮಿಷದ ಮಾತುಕತೆ ೨ ಗಂಟೆ ತೆಗೆದುಕೊಂಡಿದು ಯಾಕೆ?

267

೮ ನವೆಂಬರ್ ೨೦೧೬ ಇದೆ ದಿನ ೫ ವರ್ಷಗಳ ಹಿಂದೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ೫೦೦ ಹಾಗು ೧೦೦೦ ರೂಪಾಯಿಗಳ ನೋಟುಗಳ ಚಲಾವಣೆ ರದ್ದು ಮಾಡಿದ ದಿನ. ಆ ರಾತ್ರಿ ೧೨ ಗಂಟೆಯ ನಂತರ ಹಳೆಯ ನೋಟುಗಳ ಬದಲು ಹೊಸ ನೋಟುಗಳ ಚಲಾವಣೆ ಗೆ ದಿನ ನಿಗದಿ ಆಗಿದ್ದು. ಹೊಸ ೨೦೦೦ ರೂಪಾಯಿ ನೋಟಿನ ಚಲಾವಣೆ ಆರಂಭವಾದ ದಿನ. ನಿಮಗೆ ಗೊತ್ತೇ ಈ ನೋಟು ರದ್ದತಿ ಉಪಾಯ ಪ್ರಧಾನಿ ಮೋದಿ ಯವರಿಗೆ ನೀಡಿದವರು ಯಾರೆಂದು?

೨೦೧೬ ನವೆಂಬರ್ ೮ ಗೆ ಮೋದಿಜಿ ನೋಟ್ ರದ್ದಿನ ಬಗ್ಗೆ ಹೇಳಿದ್ದಾದರೂ ಇದರ ಬಗ್ಗೆ ಚಿಂತನೆ ೩ ವರ್ಷಗಳ ಹಿಂದೆಯೇ ಮಾಡಿದ್ದರು. ಪುಣೆಯ ಅರ್ಥಶಾಸ್ತ್ರ ದ ಅನಿಲ್ ಬಾಕಿಲ್ ಎನ್ನುವವರು ಬಿಜೆಪಿ ಯಾ ನಾಯಕರ ಬಳಿ ನೋಟು ರದ್ದತಿಯ ಪ್ರಸ್ತಾವ ಇಟ್ಟಿದ್ದರು. ಈ ಸಮಯದಲ್ಲಿ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದರು. ಬೋಕಿಲ್ ಅವರಿಗೆ ಮೋದಿ ಅವರನ್ನು ಸಂಪರ್ಕಿಸಲು ಕೇವಲ ೯ ನಿಮಿಷಗಳ ಅವಧಿ ಮಾತ್ರ ಸಿಕ್ಕಿತ್ತು.ಆದರೆ ಮೋದಿಯವರು ಈ ನೋಟ್ ರದ್ದಿನ ಪ್ರಸ್ತಾವ ಕೇಳಿ ಇದರ ಬಗ್ಗೆ ಇನ್ನು ಹೆಚ್ಚಿನದನ್ನು ತಿಳಿದುಕೊಳ್ಳಲು ಬಯಸಿದರು ಹೀಗೆ ೯ ನಿಮಿಷದ ಮೀಟಿಂಗ್ ೨ ಗಂಟೆಗಳ ವರೆಗೆ ಮುಂದುವರೆಯಿತು.

ನೋಟು ರದ್ದ್ಧತಿ ಆದ ನಂತರ RBI ಹಳೆಯ ೫೦೦ ಹಾಗು ೧೦೦೦ ದ ಒಟ್ಟು ೧೫.೨೮ ಲಕ್ಷ ಕೋಟಿ ಹಣ ವಾಪಸು ಪಡೆಯಿತು. ಅದರ ಬದಲಿಗೆ ಹೊಸ ೫೦೦ ಹಾಗು ೨೦೦೦ ರೂಪಾಯಿಗಳನ್ನು ನೀಡಿತು. ಈ ಸಂಧರ್ಭದಲ್ಲಿ ಬ್ಯಾಂಕ್ ಹಾಗು ಏಟಿಎಂ ಹೊರಗಡೆ ಜನರು ಸರತಿ ಸಾಲಿನಲ್ಲಿ ನಿಂತಿರುವುದು ಸಾಮಾನ್ಯವಾಗಿತ್ತು. ಈ ನೋಟು ರದ್ದತಿ ಇಂದ ಡಿಜಿಟಲ್ ಟ್ರಾನ್ಸಾಕ್ಷನ್ಸ್ ಗೆ ಹೊಸ ರೂಪ ನೀಡಿತು ಹಾಗು ಇಂದು ವಿಶ್ವದಲ್ಲೇ ಅತಿ ಹೆಚ್ಚು ಡಿಜಿಟಲ್ ಪಾವತಿ ಮಾಡುವ ದೇಶ ಭಾರತವಾಗಿದೆ. ಅದಲ್ಲದೆ ಕಾಶ್ಮೀರದಲ್ಲೂ ದೇಶ ವಿರೋ-ಧಿ ಚಟುವಟಿಕೆ ಗಳಿಗೆ ಕಡಿ-ವಾಣ ಬಿದಿತ್ತು.

Leave A Reply

Your email address will not be published.